ಕರಾವಳಿ

ನ್ಯೂಸ್ ವೆಬ್‌ಸೈಟ್ ಮಾಲೀಕರಿಗೆ ಶುಭಸುದ್ಧಿ: ಇನ್ಮುಂದೆ ವಾರ್ತಾ ಇಲಾಖೆ ಅಡಿಯಲ್ಲಿ ಬರಲಿದೆ ಆನ್‌ಲೈನ್ ಪೋರ್ಟಲ್’ಗಳು

Pinterest LinkedIn Tumblr

ನವದೆಹಲಿ : ವೆಬ್ ಪೋರ್ಟಲ್‌ಗಳಿಗೆ ಕೇಂದ್ರ ಸರ್ಕಾರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಪ್ರಸಾರ ಮಾಡಲು ಅಧಿಸೂಚನೆಯನ್ನು ಹೊರಡಿಸುವ ಮೂಲಕ ಸರ್ಕಾರ ಆನ್‌ಲೈನ್ ನ್ಯೂಸ್ ಪೋರ್ಟಲ್ ಮಾಲೀಕರಿಗೆ ಶುಭಸುದ್ಧಿ ನೀಡಿದೆ.

ಕೋಟ್ಯಾಂತರ ವೆಬ್ ಸೈಟ್ ಗಳಿದ್ದರೂ ಇದುವರೆಗೆ ಯಾವುದೇ ನೊಂದಣಿಕ್ರಮಗಳು ಇರಲಿಲ್ಲ. ಮಾತ್ರವಲ್ಲದೇ ವೆಬ್ ಪೋರ್ಟಲ್ ಗಳಿಗೆ ವಾರ್ತಾ ಇಲಾಖೆಯಿಂದ ಯಾವುದೇ ಮಾನ್ಯತೆಗಳಿರಲಿಲ್ಲ. ಇಂತಹ ವೆಬ್ ಸೈಟ್ ಗಳಿಗೆ ಮಾನ್ಯತೆ ದೊರಕಿಸುವಂತ ಪ್ರಯತ್ನವನ್ನು ಇದೀಗ ಕೇಂದ್ರ ಸರ್ಕಾರ ಮಾಡಿದೆ.

ಈ ಕುರಿತಂತೆ ಕೇಂದ್ರ ಸರ್ಕಾರ ಮಾಹಿತಿ ಬಿಡುಗಡೆ ಮಾಡಿದ್ದು, ಇನ್ಮುಂದೆ ಒಟಿಟಿ ಫ್ಲಾಟ್ ಫಾರಂ ಸೇರಿದಂತೆ ಆನ್ ಲೈನ್ ವಿಷಯ ಪೂರೈಕೆದಾರರಾದಂತ ವೆಬ್ ಪೋರ್ಟಲ್ ಗಳು ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಪ್ರಸಾರ ಮಾಡಲು ಅಧಿಸೂಚನೆಯನ್ನು ಹೊರಡಿಸಿದೆ.

ಇನ್ಮುಂದೆ ಆನ್ ಲೈನ್ ವಿಷಯ ಪೂರೈಕೆದಾರರು ತಯಾರಿಸಿದ ಚಲನಚಿತ್ರಗಳು ಮತ್ತು ಆಡಿಯೋ-ದೃಶ್ಯ ಕಾರ್ಯಕ್ರಮಗಳನ್ನು ಮತ್ತು ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಷಯಗಳು ಎಲ್ಲಾ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಬರಲಿದೆ.

ಆನ್ ಲೈನ್ ವಿಷಯ ಪೂರೈಕೆದಾರರು ಲಭ್ಯವಿರುವ ಚಲನಚಿತ್ರಗಳು ಮತ್ತು ಆಡಿಯೋ-ದೃಶ್ಯ ಕಾರ್ಯಕ್ರಮಗಳು ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಷಯ’ ಎಂಬುದಾಗಿ ಸೇರ್ಪಡೆಗೊಳಿಸಿದೆ. ಈ ಮೂಲಕ ವೆಬ್ ಪೋರ್ಟಲ್ ಗಳಿಗೂ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಬರುವಂತೆ ಕ್ರಮ ಕೈಗೊಂಡಿದೆ.

Comments are closed.