ರಾಷ್ಟ್ರೀಯ

ಬಿಹಾರದಲ್ಲಿ ಎನ್ ಡಿಎ ಅಧಿಕಾರಕ್ಕೆ ಬರಲು ಕಾರಣ ಮೋದಿ: ಚಿರಾಗ್ ಪಾಸ್ವಾನ್

Pinterest LinkedIn Tumblr

ಪ್ರಧಾನಿ ಮೋದಿಯಿಂದಾಗಿಯೇ ಬಿಹಾರದಲ್ಲಿ ಈ ಬಾರಿ ಎನ್ ಡಿಎಗೆ ಬಹುಮತ ಸಿಕ್ಕಿದ್ದು, ಇದು ಮೋದಿಯ ಗೆಲುವು ಎಂದು ಎನ್ ಡಿಎ ಮಾಜಿ ಮಿತ್ರಪಕ್ಷವಾದ ಎಲ್ ಜೆಪಿ ನಾಯಕ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.

ಬಿಹಾರದ ಜನತೆ ಪ್ರಧಾನಿ ನರೇಂದ್ರ ಮೋದಿ ಅವರೆಡೆಗಿನ ತಮ್ಮ ವಿಶ್ವಾಸವನ್ನು ಪುನಃ ದೃಢಪಡಿಸಿದ್ದಾರೆ ಎಂದು ಚಿರಾಗ್ ಪಾಸ್ವಾನ್ ಬಿಹಾರ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬಿಹಾರದಲ್ಲಿ ಎಲ್ ಜೆಪಿ ಪಕ್ಷ ಒಂದು ಸ್ಥಾನವನ್ನು ಗೆದ್ದಿದ್ದು, ಹಲವು ಕ್ಷೇತ್ರಗಳಲ್ಲಿ ಬಿಜೆಪಿಯ ಮಿತ್ರ ಪಕ್ಷ ಜೆಡಿಯು ಪಕ್ಷದ ಗೆಲುವಿನ ಸಾಧ್ಯತೆಯನ್ನು ಭಗ್ನಗೊಳಿಸಿದೆ.

ತಮ್ಮ ಪಕ್ಷದ ಕುರಿತು ಟ್ವೀಟ್ ಮಾಡಿರುವ ಚಿರಾಗ್ ಪಾಸ್ವಾನ್, ತಮ್ಮ ಪಕ್ಷ ಅಧಿಕಾರಕ್ಕಾಗಿ ಬಾಗಲಿಲ್ಲ ಎಂಬ ಹೆಮ್ಮೆ ನನಗೆ ಇದೆ ಎಂದು ಟ್ವೀಟ್ ಮಾಡಿದ್ದಾರೆ. 2015 ರಲ್ಲಿ ಎಲ್ ಜೆಪಿ ಎರಡು ಸ್ಥಾನಗಳನ್ನು ಗೆದ್ದಿತ್ತು.

ಎಲ್ ಜೆಪಿ ಅಭ್ಯರ್ಥಿಗಳು ಯಾವುದೇ ಮೈತ್ರಿಯ ಸಹಾಯವಿಲ್ಲದೇ ಹೋರಾಟ ನಡೆಸಿದ್ದಾರೆ. ಪಕ್ಷದ ಶೇಕಡಾವಾರು ಮತಗಳು ಏರಿಕೆಯಾಗಿದೆ ಎಂದು ಚಿರಾಗ್ ತಮ್ಮ ಪಕ್ಷದ ಅಭ್ಯರ್ಥಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 140 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎಲ್ ಜೆಪಿ ಶೇ.5.68 ರಷ್ಟು ಮತಗಳನ್ನು ಗಳಿಸಿದೆ.

Comments are closed.