ಕರಾವಳಿ

ಮುಂಬೈಗೆ ಆಗಮಿಸಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಡಿ. ಶೆಟ್ಟಿಯವರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಗೌರವ

Pinterest LinkedIn Tumblr

ಮುಂಬೈ ನವೆಂಬರ್.11 : ಮರಾಠಿ ಮಣ್ಣಲ್ಲಿ ಸಾಮಾಜಿಕ ಶೈಕ್ಷಣಿಕ ಧಾರ್ಮಿಕ ಸೇವೆಗಳ ಮೂಲಕ ಜನಪ್ರಿಯ ಸಮಾಜಸೇವಕ ಎಂದು ಗುರುತಿಸಿಕೊಂಡಿರುವ ವಿಟ್ಲ ಮೂಲದ ಚೆಲ್ಲಾಡ್‌ಕ ಗ್ರಾಮದ ಮುಂಬೈಯ ಭವಾನಿ ಶಿಪ್ಪಿಂಗ್ ಸರ್ವಿಸ್ ಕಂಪನಿಯ ಸಿ ಎಂ ಡಿ ಕುಸುಮೊದರ. ಡಿ ಶೆಟ್ಟಿ ಅವರಿಗೆ ಕರ್ನಾಟಕ ಸರಕಾರದ ಅತ್ಯುನ್ನತ ಪ್ರಶಸ್ತಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಕುಸುಮೊದರ. ಡಿ ಶೆಟ್ಟಿ ಅವರು ಇತ್ತೀಚೆಗೆ ಕರ್ನಾಟಕ ಸರಕಾರದ ಮಾನವೀಯ ಮುಖ್ಯಮಂತ್ರಿ ಯಡಿಯೂರಪ್ಪರವರ ಉಪಸ್ಥಿತಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಿದ್ದು, ಪ್ರಶಸ್ತಿಯೊಂದಿಗೆ
ನವಂಬರ್ 10ರಂದು ಮುಂಬೈಗೆ ಆಗಮಿಸಿದರು.

ಮುಂಬೈಗೆ ಆಗಮಿಸಿದ ಕೆ ಡಿ ಶೆಟ್ಟಿ ದಂಪತಿಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಮುಂಬೈಯ ವಿಮಾನ ನಿಲ್ದಾಣದಲ್ಲಿ ಹೂಗುಚ್ಛ ನೀಡಿ ನಗರಕ್ಕೆ ಸ್ವಾಗತಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕೆ ಡಿ ಶೆಟ್ಟಿ ಅವರು, ಈ ರಾಜ್ಯೋತ್ಸವ ಪ್ರಶಸ್ತಿ ಮುಂಬೈಯ ಸಮಸ್ತ ತುಳುವ ಕನ್ನಡಿಗರಿಗೆ ಸಮರ್ಪಿಸಿಕೊಂಡಿದ್ದೇನೆ. ನಾನೇನು ಸಾಧನೆ ಮಾಡಿದ್ದೇನೆ ಅದಕ್ಕೆ ನನ್ನ ತಾಯಿ ಪೇರಣೆ. ತಾಯಿಯವರ ಹೆಸರಿನಲ್ಲಿ ಸಮಾಜದ ಆಸಕ್ತ ಬಂಧುಗಳಿಗೆ ಸಹಾಯಹಸ್ತವನ್ನು ನೀಡುತ್ತಾ ಬಂದಿದ್ದೇನೆ. ಸಮಾಜದ ಸೇವೆಯನ್ನು ನಾನು ಸೇವಕನಂತೆ ಮಾಡಿದ್ದೇನೆ.

ನಿಮ್ಮೆಲ್ಲರ ಆಶೀರ್ವಾದ ಸದಾ ನಮ್ಮ ಪರಿವಾರದೊಂದಿಗೆ ಇರಲಿ. ಗೆಳೆತನದ ಬಾಂಧವ್ಯ ಹೇಗಿರ ಬೇಕೆಂಬುದಕ್ಕೆ ಐಕಳ ಹರೀಶ್ ಶೆಟ್ಟಿ ಅವರು ಉದಾಹರಣೆ. ಇಂದು ನನ್ನ ಮುಂಬಯಿಯ ಆಗಮನವನ್ನು ನಿರೀಕ್ಷಿಸಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ, ಗೌರವಿಸಿ ಕೊಂಡಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಐಕಳ ಹರೀಶ್ ಶೆಟ್ಟಿ ಅವರು ಕೆ ಡಿ ಶೆಟ್ಟಿ ಅವರನ್ನು ಅಭಿನಂದಿಸಿ, ಹೊರನಾಡಿನ ಕನ್ನಡಿಗರಿಗೆ ಅದರಲ್ಲೂ ಮುಂಬೈಯ ಅಪ್ರತಿಮ ಸಮಾಜ ಸೇವಕನಿಗೆ ರಾಜ್ಯೋತ್ಸವ ಲಭಿಸಿದೆ. ವಿಷಯ ತಿಳಿದ ಕೂಡಲೇ ಬಹಳ ಸಂತೋಷ ತಂದಿತ್ತು.

ಕೆ ಡಿ ಶೆಟ್ಟಿಯವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಎಲ್ಲಾ ಸೇವಾ ಕಾರ್ಯಗಳಿಗೂ ದಾನಿಯಾಗಿ . ಪ್ರೋತ್ಸಾಹ ನೀಡುತ್ತಾ ಬಂದವರಾಗಿದ್ದಾರೆ. ಅವರಿಂದ ಇನ್ನಷ್ಟು ಸಾಮಾಜಿಕ ಕೆಲಸಗಳು ನಡೆಯಲಿ ಎಂದು ನುಡಿದರು.

ವಿಮಾನ ನಿಲ್ದಾಣದಲ್ಲಿ ಕೆ ಡಿ ಶೆಟ್ಟಿ ಅವರನ್ನು ಸ್ವಾಗತಿಸಲು ಐಕಳ ಹರೀಶ್ ಶೆಟ್ಟಿ ಅವರೊಂದಿಗೆ ಬಂಟರ ಸಂಘ ಮುಂಬಯಿ ಜ್ಞಾನ ಮಂದಿರದ ಕಾರ್ಯಧ್ಯಕ್ಷ ರವೀಂದ್ರನಾಥ್ ಭಂಡಾರಿ. ಬಂಟರ ವಸಾಯಿ ಡಹಣೂ ಪ್ರಾದೇಶಿಕ ಸಮಿತಿಯ ಸಂಚಾಲಕ ಇನ್ನಂಜೆ ಶಶಿಧರ್ ಕೆ ಶೆಟ್ಟಿ. ಬಂಟರ ಸಂಘದ ಸಾಂಸ್ಕೃತಿಕ ವಿಭಾಗದ ಕಾರ್ಯಧ್ಯಕ್ಷ ಅಧ್ಯಕ್ಷ ಕರ್ನೂರು ಮೋಹನ ರೈ. ಅಂತರಾಷ್ಟ್ರೀಯ ದೇಹದಾರ್ಢ್ಯ ಪಟು ರೋಹಿತ್ ಡಿ ಶೆಟ್ಟಿ ಉಪಸ್ಥರಿದ್ದರು.

ಚಿತ್ರ, ವರದಿ: ದಿನೇಶ್ ಕುಲಾಲ್

Comments are closed.