ಕರಾವಳಿ

ಐದು ಲಕ್ಷ ಮಣ್ಣಿನ ಹಣತೆ ಬೆಳಗಿಸುವ ಮೂಲಕ ಅಯೋಧ್ಯೆಯಲ್ಲಿ ಸಂಭ್ರಮದ ‘ದೀಪೋತ್ಸವ’

Pinterest LinkedIn Tumblr

ಉತ್ತರಪ್ರದೇಶ/ ಲಖನೌ : ಉತ್ತರಪ್ರದೇಶದ ಅಯೋಧ್ಯೆಯ ರಾಮಜನ್ಮ ಸ್ಥಳದಲ್ಲಿ ಈ ಬಾರಿ ದೀಪಾವಳಿ ಪ್ರಯುಕ್ತ ಸುಮಾರು 5 ಲಕ್ಷ ಮಣ್ಣಿನ ಹಣತೆ ಬೆಳಗಿಸುವ ಮೂಲಕ ಸಂಭ್ರಮದ ‘ದೀಪೋತ್ಸವ’ ನಡೆಸಲಾಗುವುದು.

ಅಯೋಧ್ಯೆಯ ರಾಮಜನ್ಮ ಸ್ಥಳದಲ್ಲಿ ನ.12 ರಿಂದ 16ರವರೆಗೆ ಸಂಭ್ರಮದ ದೀಪೋತ್ಸವ ಆಚರಿಸಲು ಉತ್ತರಪ್ರದೇಶ ಸರಕಾರ ತೀರ್ಮಾನಿಸಿದೆ. ‘500 ವರ್ಷಗಳಿಂದಲೂ ಇಂಥದ್ದೊಂದು ಸಂಭ್ರಮದ ದೀಪಾವಳಿಗೆ ಕಾಯುತ್ತಿದ್ದೆವು ಎಂದು ಉತ್ತರಪ್ರದೇಶದ ರಾಜ್ಯ ಪ್ರವಾಸೋದ್ಯಮ ಸಚಿವ ನೀಲಕಂಠ್‌ ತಿವಾರಿ ತಿಳಿಸಿದ್ದಾರೆ.

‘ಕೊರೊನಾ ಇಲ್ಲದಿದ್ದರೆ ಕೋಟ್ಯಂತರ ರಾಮಭಕ್ತರು ಅಯೋಧ್ಯೆಯಲ್ಲಿ ಸೇರಿ ದೀಪಾವಳಿ ನಡೆಸುತ್ತಿದ್ದೆವು. ಆ ಅವಕಾಶ ಸದ್ಯಕ್ಕೆ ಇಲ್ಲದ ಹಿನ್ನೆಲೆಯಲ್ಲಿ ಆನ್‌ಲೈನ್‌ನಲ್ಲಿ ನೇರಪ್ರಸಾರದ ಮೂಲಕ ದೇಶಾದ್ಯಂತ ರಾಮಭಕ್ತರಿಗೆ ರಾಮಜನ್ಮ ಸ್ಥಾನದಲ್ಲಿನ ಸಂಭ್ರಮದ ದೀಪಾವಳಿ ಆಚರಣೆಯನ್ನು ವೀಕ್ಷಿಸಲು ಅನುಕೂಲ ಮಾಡಿಕೊಡಲಿದ್ದೇವೆ ಎಂದು ಸಚಿವ ತಿವಾರಿ ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ಅಯೋಧ್ಯೆಯ ರಾಮಜನ್ಮ ಸ್ಥಳದಲ್ಲಿ 5 ಲಕ್ಷ ಮಣ್ಣಿನ ಹಣತೆ ಬೆಳಗಿಸುವ ಮೂಲಕ ಸಂಭ್ರಮದ ‘ದೀಪೋತ್ಸವ’ ಆಚರಿಸಲಾಗುತ್ತಿರುವುದರಿಂದ ಕೋಟ್ಯಾಂತರ ಮಂದಿ ಈ ಒಂದು ವೈಭವದ ಸಂಭ್ರವನ್ನು ಕಣ್ತುಂಬಿಸಿಕೊಳ್ಳಲು ಕಾತುರರಾಗಿದ್ದಾರೆ.

Comments are closed.