ಪ್ರಮುಖ ವರದಿಗಳು

ಉತ್ತರ ಪ್ರದೇಶದಲ್ಲಿ ಬಿಜೆಪಿ ಜಯಭೇರಿ : 7ರಲ್ಲಿ 6ಸ್ಥಾನ ಗೆದ್ದ ಬಿಜೆಪಿ

Pinterest LinkedIn Tumblr

ಉತ್ತರ ಪ್ರದೇಶ / ಲಕ್ನೊ: ಉತ್ತರ ಪ್ರದೇಶದಲ್ಲಿ ಉಪ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಏಳು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ 6 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಿದೆ.

ಉಳಿದಂತೆ ಒಂದು ಸ್ಥಾನವನ್ನು ಸಮಾಜವಾದಿ ಪಕ್ಷ ಪಡೆಯುವಲ್ಲಿ ಯಶಸ್ವಿಯಾಗಿದೆ.ಕಣದಲ್ಲಿದ್ದ ಬಿಎಸ್ ಪಿ ಮತ್ತು ಕಾಂಗ್ರೆಸ್ ಗೆ ಒಂದು ಸ್ಥಾನ ಕೂಡ ಬಂದಿಲ್ಲ.

ಕೊರೊನಾ ಸಾಂಕ್ರಾಮಿಕದ ನಡುವೆ ಬಿಹಾರ ವಿಧಾನಸಭೆಯ ಎರಡನೇ ಹಂತದ ಮತದಾನದ ದಿನವೇ ಉತ್ತರ ಪ್ರದೇಶದ ಏಳು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿತ್ತು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ತೀರ್ಪಾಗಿ ನಡೆದ ಉಪ ಚುನಾವಣೆಯಲ್ಲಿ ಆರು ಸೀಟುಗಳನ್ನು ಬಿಜೆಪಿ ಗೆದ್ದುಕೊಂಡಿದೆ.

ಆರು ಕ್ಷೇತ್ರಗಳಾದ ಅಮ್ರೊಹಾದಲ್ಲಿ ನೌಗೌನ್ ಸಡಟ್, ಫಿರೋಜಾಬಾದ್ ನಲ್ಲಿ ಬುಲಂಡ್ ಶಹ್ರ್, ಟುಂಡ್ಲಾ, ಕಾನ್ಪುರ ಡೆಹಟ್ ನಲ್ಲಿ ಘಟಂಪುರ್, ಉನ್ನಾವೊದಲ್ಲಿ ಬಂಗರ್ಮೌ ಮತ್ತು ಡಿಯೊರಿಯಾ ಸಡರ್ ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. ಜೌನ್ಪುರದ ಮಲ್ಹಾನಿ ಕ್ಷೇತ್ರ ಸಮಾಜವಾದಿ ಪಕ್ಷದ ಪಾಲಾಗಿದೆ.

ಬಿಜೆಪಿ ಅಭ್ಯರ್ಥಿ ಸಂಗೀತಾ ಚೌಹಾಣ್ ನೌಗಾಂವ್ ಸಾದತ್, ಬುಲಂದ್‌ಶೆಹರ್‌ನಲ್ಲಿ ಉಷಾ ಸಿರೋಹಿ, ಟುಂಡ್ಲಾದಲ್ಲಿ ಪ್ರೇಮ್ ಪಾಲ್ ಧಂಗರ್, ಬಂಗಾರ್‌ಮಾವಿನಲ್ಲಿ ಶ್ರೀಕಾಂತ್ ಕಾಟಿಯಾರ್,ಡಿಯೋರಿಯಾದಲ್ಲಿ ಸತ್ಯ ಪ್ರಕಾಶ್ ಮಾನಿ ತ್ರಿಪಾಠಿ, ಘಟಂಪುರದಲ್ಲಿ ಉಪೇಂದ್ರನಾಥ್ ಪಾಸ್ವಾನ್ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

Comments are closed.