ಕರ್ನಾಟಕ

ಶಿರಾ ಕ್ಷೇತ್ರದಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಬಿಜೆಪಿ – ಭರ್ಜರಿ ಮುನ್ನಡೆ

Pinterest LinkedIn Tumblr

ಬೆಂಗಳೂರು: ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆಕಾರ್ಯ ಇಂದು ಬೆಳಗ್ಗೆ ಶಿರಾ ಕ್ಷೇತ್ರದ ಮತ ಎಣಿಕೆಯು ತುಮಕೂರಿನ ಸರ್ಕಾರಿ ಪಾಲಿಟೆಕ್ನ್ ಕಾಲೇಜಿನಲ್ಲಿ ಆರಂಭಗೊಂಡಿದ್ದು, ಇದುವರೆಗಿನ ಮತ ಏಣಿಕೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

ಶಿರಾ ಕ್ಷೇತ್ರದಲ್ಲಿ ಮೊದಲ ಸುತ್ತಿನ 7043 ಮತಗಳ ಎಣಿಕೆಯಾಗಿದ್ದು ಕಮಲ ಪಾಳಯದ ಡಾ.ರಾಜೇಶ್ ಗೌಡರಿಗೆ 3224 ಮತಗಳು, ಕಾಂಗ್ರೆಸ್ ನ ಟಿ.ಬಿ.ಜಯಚಂದ್ರ ಅವರಿಗೆ 2428 ಮತಗಳು ಮತ್ತು ಜೆಡಿಎಸ್ ನ ಅಮ್ಮಾಜಮ್ಮ ಅವರಿಗೆ 1135 ಮತಗಳು ಲಭ್ಯವಾಗಿತ್ತು.

4ನೇ ಸುತ್ತಿನ ಮತ ಎಣಿಕೆ ಕಾರ್ಯ ಪೂರ್ಣಗೊಂಡ ಬಳಿಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ 8,642 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್‌ನ ಟಿ. ಬಿ. ಜಯಚಂದ್ರ 7,339 ಮತ ಪಡೆದಿದ್ದಾರೆ. ಜೆಡಿಎಸ್‌ನ ಅಮ್ಮಾಜಮ್ಮ 4,657 ಮತಗಳನ್ನು ಪಡೆದಿದ್ದಾರೆ.

ಬಿಜೆಪಿ ಶಿರಾ ಕ್ಷೇತ್ರದಲ್ಲಿ ಇದುವರೆಗೂ ಗೆದ್ದಿಲ್ಲ. ಉಪ ಚುನಾವಣೆಯಲ್ಲಿ ಗೆದ್ದರೆ ಡಾ. ರಾಜೇಶ್ ಗೌಡ ಮತ್ತು ಬಿಜೆಪಿಯದ್ದು ಕ್ಷೇತ್ರದಲ್ಲಿ ಮೊದಲ ಗೆಲುವು ಆಗಲಿದೆ. ಕಾಂಗ್ರೆಸ್‌ನ ಟಿ. ಬಿ. ಜಯಚಂದ್ರ ಶಿರಾ ಕ್ಷೇತ್ರದಿಂದ 2008, 2013ರಲ್ಲಿ ಗೆಲುವು ಸಾಧಿಸಿದ್ದಾರೆ. 2018ರಲ್ಲಿ ಜೆಡಿಎಸ್‌ನ ಬಿ. ಸತ್ಯನಾರಾಯಣ ವಿರುದ್ಧ ಸೋತಿದ್ದರು.

2018ರಲ್ಲಿ ಜೆಡಿಎಸ್‌ನ ಬಿ. ಸತ್ಯನಾರಾಯಣ ಗೆಲುವು ಸಾಧಿಸಿದ ಕ್ಷೇತ್ರ ಶಿರಾ. ಅವರ ಅಕಾಲಿಕ ನಿಧನದಿಂದಾಗಿ ಉಪ ಚುನಾವಣೆ ಎದುರಾಗಿತ್ತು. ಜೆಡಿಎಸ್‌ ಸತ್ಯನಾರಾಯಣ ಪತ್ನಿ ಅಮ್ಮಾಜಮ್ಮಗೆ ಟಿಕೆಟ್ ನೀಡಿದರೂ ಸಹ ಅನುಕಂಪದ ಮತಗಳು ಬಂದಿಲ್ಲ ಎಂಬ ಚಿತ್ರಣ ಕಾಣುತ್ತಿದೆ.

Comments are closed.