ಕರಾವಳಿ

ಐಎಂಎ ಮಂಗಳೂರು ಪದಗ್ರಹಣ ಸಮಾರಂಭ : ಹಿರಿಯ ವೈದ್ಯ ಡಾ.ಕೆವಿ.ದೇವಾಡಿಗ ಅವರಿಗೆ ಜೀವಮಾನದ ಸಾಧನೆಗಾಗಿ ಗೌರವ ಪುರಸ್ಕಾರ

Pinterest LinkedIn Tumblr

ಕೊರೊನ ಸಂಕಷ್ಟದಲ್ಲಿ ಮಂಗಳೂರು ಐಎಂಎಯ ತಂಡ ಮಾಡಿದ ಸಮಾಜ ಮುಖೀ ಕೆಲಸಕ್ಕೆ ಶಾಸಕರುಗಳಿಂದ ಪ್ರಶಂಸೆ ಹಾಗೂ ರಾಜ್ಯ ಪ್ರಶಸ್ತಿಗಾಗಿ ಅಭಿನಂದನೆ

ಮಂಗಳೂರು : ಐಎಂಎ ಮಂಗಳೂರು ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತೀಚಿಗೆ ಶಾಖೆಯ ಸಭಾಂಗಣದಲ್ಲಿ ಜರುಗಿತು. ಹಿರಿಯ ವೈದ್ಯ, ಖ್ಯಾತ ನ್ಯೂರೋ ಸರ್ಜನ್ ಡಾ. ಕೆವಿ ದೇವಾಡಿಗ ಪದಗ್ರಹಣ ನಡೆಸಿ ಕೊಟ್ಟರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಂಗಳೂರಿನ ಶಾಸಕರುಗಳಾದ ಶ್ರೀ ವೇದವ್ಯಾಸ ಕಾಮತ್ ಮತ್ತು ಡಾ ಭರತ್ ಶೆಟ್ಟಿ ಐಎಂಎ ಕೊರೊನ ಸಂಕಷ್ಟ ಸಮಯದಲ್ಲಿ ಮಾಡಿದ ಸಮಾಜ ಮುಖೀ ಸೇವೆಯನ್ನ ಕೊಂಡಾಡಿ, ಸರಕಾರ ಮತ್ತು ಜಿಲ್ಲಾಡಳಿತದ ಪರವಾಗಿ ಅಭಿನಂದನೆಗಳನ್ನ ಸಲ್ಲಿಸಿ, ವೈದ್ಯರ ಎಲ್ಲಾ ಸಮಸ್ಯೆಗಳನ್ನ ಪರಿಹರಿಸಲು ನಾವು ಸದಾ ಸಿದ್ದ ಎಂಬ ಭರವಸೆ ಕೊಟ್ಟರು.

ಕೊರೊನ ಕಾಲದ ಸೇವೆಗಾಗಿ ಡಾ ಎಂ ಅಣ್ಣಯ್ಯ ಕುಲಾಲ್ ನೇತೃತ್ವದ ಐಎಂಎ ಮಂಗಳೂರು ಶಾಖೆಗೆ ಸಂಧ ರಾಜ್ಯ ಪ್ರಶಸ್ತಿಯನ್ನ ಹಸ್ತಾಂತರಿಸಿದರು ಶುಭ ಹಾರೈಸಿದರು.

ನಿರ್ಗಮನ ಅಧ್ಯಕ್ಷರ ಡಾ ಎಂ ಅಣ್ಣಯ್ಯ ಕುಲಾಲ್ ಎಲ್ಲರನ್ನ ಸ್ವಾಗತಿಸಿ, ಈ ವರ್ಷದ ಸಾಧನೆಗಾಗಿ ಸರ್ವರನ್ನ ಅಭಿನಂದಿಸಿದರು.

ಕೊರೊನ ಸಮಯದಲ್ಲೂ ಸೇವೆ ನೀಡಲು ಸಹಕರಿಸಿದ ರಾಜ್ಯ ಐಎಂಎ, ರಾಜ್ಯ ಸರಕಾರ, ಜಿಲ್ಲಾ ಆಡಳಿತ, ಸಂಸದರೂ, ಶಾಸಕರುಗಳನ್ನ ನೆನಪಿಸಿ ಕೊಂಡು ಅವರಿಗೆ ಐಎಂಎ ಪರವಾಗಿ ಧನ್ಯವಾದಗಳನ್ನ ಅರ್ಪಿಸಿದರು.

ಹಿರಿಯ ವೈದ್ಯ ರಾದ ಡಾ ಕೆವಿ ದೇವಾಡಿಗರನ್ನ ಜೀವಮಾನದ ಸಾಧನೆಗಾಗಿ ಗೌರವಿಸಿ ಸನ್ಮಾನಿಸಲಾಯಿತು.

ಆಗಮನ ಅಧ್ಯಕ್ಷ ಡಾ ಎಂ ಏ ಆರ್ ಕುಡ್ವ, ಮುಂಬರುವ ದಿನಗಳಲ್ಲಿ ಐಎಂಎಯನ್ನ ಇನ್ನೂ ಎತ್ತರಕ್ಕೆ ಒಯ್ಯುವುದಾಗಿ ಭರವಸೆ ಕೊಟ್ಟು, ಒಂದು ವರ್ಷದ ತಮ್ಮ ಕಾರ್ಯ ಸೂಚಿಗಳನ್ನ ತೆರೆದಿಟ್ಟರು. ಅತೀ ಹೆಚ್ಚಿನ ನೂತನ ಸದಸ್ಯರನ್ನ ಸೇರಿಸಿ  ಐಎಂಎ ಯನ್ನ ಮತ್ತಷ್ಟು ಗಟ್ಟಿಗೊಳಿಸಿ, ವೈದ್ಯರ ಧ್ವನಿಗೆ ಬೆಲೆ ಸಿಗುವಂತೆ ಮಾಡುವ ಭರವಸೆ ಕೊಟ್ಟರು. ನಿರ್ಗಮನ ತಂಡದ ಸಾಧನೆಗೆ ಅಭಿನಂದನೆ ಸಲ್ಲಿಸಿದರು.

ನಿರ್ಗಮನ ಕೋಶಾಧಿಕಾರಿ ಡಾ ಜಿ ಕೆ ಭಟ್ ಆರ್ಥಿಕ ವರದಿ ಮಂಡಿಸಿದರು.ನಿರ್ಗಮನ ಕಾರ್ಯ ದರ್ಶಿ ಡಾ ರಶ್ಮಿ ಕುಂದಾಪುರ ಕಾರ್ಯಕ್ರಮವನ್ನ ಸಂಯೋಜಿಸಿ, ನಿರ್ವಹಿಸಿ, ವರದಿ ಮಂಡಿಸಿದರು.

ಆಗಮನ ಕೋಶಾಧಿಕಾರಿ ಡಾ ಕುಮಾರಸ್ವಾಮಿ ಉಪಸ್ಥಿತರಿದ್ದರು. ಆಗಮನ ಕಾರ್ಯದರ್ಶಿ ಡಾ ಆನಿಮೇಶ್ ಜೈನ್ ವಂದಿಸಿದರು. ರಾಷ್ಟ್ರ ಗೀತೆಯೊಂದಿಗೆ ಸಭೆ ಮುಕ್ತಾಯವಾಯಿತು.

Comments are closed.