ಕರಾವಳಿ

ಲವ್ ಜಿಹಾದ್ ವಿರುದ್ಧ ಶೀಘ್ರವೇ ಕಾನೂನು ಜಾರಿಯಾಗಬೇಕಿದೆ: ಶ್ರೀ ರಾಜಶೇಖರಾನಂದ ಸ್ವಾಮೀಜಿ

Pinterest LinkedIn Tumblr

ಉಡುಪಿ: ರಾಜ್ಯ ಸರ್ಕಾರವು ಲವ್ ಜಿಹಾದ್ ವಿರುದ್ದ ಕಾನೂನನ್ನು ಜಾರಿಗೊಳಿಸುವ ಚಿಂತನೆ ನಡೆಸಿದೆ ಅದನ್ನು ಶೀಘ್ರವೇ ಜಾರಿಗೆ ತರಬೇಕು ಎಂದು ಗುರುಪುರದ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.

ಇತ್ತೀಚೆಗೆ ಪೆರ್ಡೂರಿನಲ್ಲಿ ನಡೆದ ಅಪ್ರಾಪ್ತ ಬಾಲಕಿಯನ್ನು ಅನ್ಯ ಕೋಮಿನ ಯುವಕ ಅಪಹರಿಸಿದ ಘಟನೆಯನ್ನು ಖಂಡಿಸಿ ಹಾಗೂ ರಾಜ್ಯದಲ್ಲಿ ಶೀಘ್ರವಾಗಿ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೊಳಿಸುವಂತೆ ಆಗ್ರಹಿಸಿ ಭಾನುವಾರ ಪೆರ್ಡೂರಿನ ರಥಬೀದಿಯಲ್ಲಿ ಹಿಂದೂ ಹಿತರಕ್ಷಣಾ ವೇದಿಕೆ ಇವರ ವತಿಯಿಂದ ನಡೆದ ‘ಪೆರ್ಡೂರು ಚಲೋ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇತ್ತೀಚಿಗೆ ವ್ಯಾಪಕವಾಗಿ ಲವ್ ಜಿಹಾದ್ ನಡೆಯುತ್ತಿದ್ದು ಅದರ ಷಡ್ಯಂತ್ರದ ವಿರುದ್ದ ಪ್ರತಿ ಗ್ರಾಮಗಳಲ್ಲಿ ಹಿಂದೂ ಸಮುದಾಯ ಜಾಗೃತಗೊಂಡು ಸಂಘಟಿತರಾಗಬೇಕು. ಹಿಂದೂ ಸಮಾಜವನ್ನು ಅಧೀರಗೊಳಿಸಲು ಸಾಧ್ಯವಿಲ್ಲ. ಹಿಂದೂಗಳ ಸಂಸ್ಕೃತಿ, ಸಂಸ್ಕಾರ, ಶ್ರದ್ಧಾ ಕೇಂದ್ರ, ಹೆಣ್ಣು ಮಕ್ಕಳ ಮೇಲೆ ದಾಳಿ ಖಂಡನೀಯ. ಭಾರತದಲ್ಲಿ ಯಾವುದೇ ರೀತಿಯ ಇಸ್ಲಾಮೀಕರಣ ನಡೆಸಲು ಸಾಧ್ಯವಿಲ್ಲ ಎಂದರು.

ಬಜರಂಗದಳದ ದಕ್ಷಿಣ ಪ್ರಾಂತ್ಯದ ಸಂಚಾಲಕ ಸುನಿಲ್ ಕೆ.ಆರ್ ಮಾತನಾಡಿ, ಭಾರತದ ಮೇಲೆ ಭಯೋತ್ಪಾದಕ, ಲವ್ ಜಿಹಾದ್, ಮತಾಂತರ, ಲ್ಯಾಂಡ್ ಜಿಹಾದ್ ದಾಳಿ ನಡೆಯುತ್ತಿದೆ. ಈ ಎಲ್ಲಾ ದಾಳಿಗಳನ್ನು ಎದುರಿಸಿ ನಿಂತು ಅದಕ್ಕೆ ತಕ್ಕದಾದ ಉತ್ತರ ನೀಡಲು ಹಿಂದೂ ಸಂಘಟನೆಗಳಿಗೆ ಗೊತ್ತಿದೆ. ಹಿಂದೂ ಹೆಣ್ಣು ಮಕ್ಕಳನ್ನು ಕಾಪಾಡಲು ಹಿಂದೂ ಯುವಕರು ಶಾಸ್ತ್ರದಿಂದಿಗೆ ಶಸ್ತ್ರವನ್ನು ಹಿಡಿದು ನಿಂತಿದ್ದಾರೆ ಎಂದರು.

ಜಿಲ್ಲಾ ಮಾತೃ ಶಕ್ತಿ ಪ್ರಮುಖ್ ಪೂರ್ಣಿಮಾ ಸುರೇಶ್ ನಾಯಕ್, ಶಾಸಕ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಉಪಾಧ್ಯಕ್ಷ ಯಶಪಾಲ್ ಸುವರ್ಣ, ಕಾಪು ಬಿ.ಜೆ.ಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಜಿಲ್ಲಾ ವಿಶ್ವಹಿಂದೂ ಪರಿಷತ್ ನ ದಿನೇಶ್ ಮೆಂಡನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Comments are closed.