ಕರಾವಳಿ

ಮಂಗಳೂರು ಧರ್ಮಪ್ರಾಂತ್ಯದ ಎರಡನೇ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಶ್ರೀ ರೊನಾಲ್ಡ್ ಕಾಸ್ತೆಲಿನೊ ಹುದ್ದೆ ಸ್ವೀಕಾರ

Pinterest LinkedIn Tumblr

ರೊನಾಲ್ಡ್ ಕಾಸ್ತೆಲಿನೊ                                  ಮಾರ್ಸೆಲ್ ಮೊಂತೆರೊ

ಮಂಗಳೂರು : ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀ ಮಾರ್ಸೆಲ್ ಮೊಂತೇರೊರವರಿಗೆ ಬೀಳ್ಕೊಡುವ ಹಾಗೂ ಅವರ ಸ್ಥಾನಕ್ಕೆ ಎರಡನೇ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ನೂತನವಾಗಿ ನೇಮಿಸಲ್ಪಟ್ಟ ಶ್ರೀ ರೊನಾಲ್ಡ್ ಕಾಸ್ತೆಲಿನೊರವರ ಹುದ್ದೆ ಸ್ವೀಕಾರ ಕಾರ್‍ಯಕ್ರಮವು ಇತ್ತೀಚಿಗೆ ಬಿಷಪರ ನಿವಾಸದಲ್ಲಿ ನಡೆಯಿತು.

ಕಳೆದ ೨೪ ವರುಷಗಳಿಂದ ಸೇವೆಸಲ್ಲಿಸಿದ ಶ್ರೀ ಮಾರ್ಸೆಲ್ ಮೊಂತೆರೊರವರನ್ನು ಸನ್ಮಾನಿಸಲಾಯಿತು. ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜೊರ್ ಮ್ಯಾಕ್ಸಿಮ್ ನೊರೊನ್ಹಾರವರು ಶ್ರೀ ಮಾರ್ಸೆಲ್ ಮೊಂತೆರೊರವರ ಸುಧೀರ್ಘ ಸೇವೆ ಮತ್ತು ಸಾಧನೆಗಳನ್ನು ಸಭೆಯ ಮುಂದಿಟ್ಟರು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿರುವ ಅತೀ ವಂದನೀಯ ಪೀಟರ್ ಪಾವ್ಲ್ ಸಲ್ದಾನ್ಹಾ ರವರು ಶ್ರೀ ಮಾರ್ಸೆಲ್ ಮೊಂತೆರೊರವರನ್ನು ಸನ್ಮಾನಿಸಿದರು.

ಎರಡನೇ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ನೇಮಿಸಲ್ಪಟ್ಟ ಶ್ರೀ ರೊನಾಲ್ಡ್ ಕಾಸ್ತೆಲಿನೊರವರು ಪ್ರಮಾಣ ಮಾಡುವ ಮೂಲಕ ಹುದ್ದೆಯನ್ನು ಸ್ವೀಕಾರ ಮಾಡಿದರು. ಧರ್ಮಾಧ್ಯಕ್ಷರು, ಶ್ರೀ ರೊನಾಲ್ಡ್ ಕಾಸ್ತೆಲಿನೊರವರಿಗೆ ತಮ್ಮ ನೂತನ ಜವಾಬ್ದಾರಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ, ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿರುವ ಅತೀ ವಂದನೀಯ ಪೀಟರ್ ಪಾವ್ಲ್ ಸಲ್ದಾನ್ಹಾ ರವರು, ಶ್ರೇಷ್ಠ ಗುರು ಮೊನ್ಸಿಂಜೊರ್ ಮ್ಯಾಕ್ಸಿಮ್ ನೊರೊನ್ಹಾರವರು, ಸಾರ್ವಜನಿಕ ಸಂಪರ್ಕ ಅಧಿಕಾರಿ ವಂದನೀಯ ವಿಕ್ಟರ್ ವಿಜೆಯ್ ಲೋಬೊ ಹಾಗೂ ಇತರ ಧರ್ಮಗುರುಗಳು ಉಪಸ್ಥಿತರಿದ್ದರು.

ಮಂಗಳೂರು ಧರ್ಮಪ್ರಾಂತ್ಯದಲ್ಲಿ ಇಬ್ಬರು ಪಿ.ಆರ್.ಒ.ಗಳಿದ್ದು ವಂ. ವಿಕ್ಟರ್ ವಿಜಯ್ ಲೋಬೊ ಮುಂದುವರಿಯಲಿದ್ದಾರೆ. ಕಳೆದ 24 ವರ್ಷಗಳಿಂದ ಸೇವೆ ಸಲ್ಲಿಸಿದ್ದ ಮಾರ್ಸೆಲ್ ಮೊಂತೆರೊ ಇವರ ಸ್ಥಾನದಲ್ಲಿ ರೊಯ್ ನೇಮಕಗೊಂಡಿದ್ದಾರೆ. ಅವರ ಸೇವೆಯು ಮುಂದಿನ ಮೂರು ವರ್ಷಗಳ ಅವಧಿಯದ್ದಾಗಿರಲಿದೆ.

ಶ್ರೀ ರೊನಾಲ್ಡ್ ಕಾಸ್ತೆಲಿನೊರವರು, ಕರ್ನಾಟಕ ಕೊಂಕಣಿ ಸಾಹಿತ್ಯ ಆಕಾಡೆಮಿಯ ಅಧ್ಯಕ್ಷರಾಗಿ, ಸುಮಾರು 200ಕ್ಕಿಂತ ಅಧಿಕ ಕೊಂಕಣಿ ಕಾರ್ಯಕ್ರಮಗಳನ್ನು ನಡೆಸಿ ಕೊಂಕಣಿ ಭಾಷೆ ಮತ್ತು ಸಾಹಿತ್ಯದ ವಿಸೇಷ ಸೇವೆಯನ್ನು ಮಾಡಿರುತ್ತಾರೆ. ಅನೇಕ ಸಾಮಾಜಿಕ ಕಳಕಳಿಯ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಎರಡು ಅವಧಿಗಳೆಗೆ ರಚನಾದ ಅಧ್ಯಕ್ಷರಾಗಿ ಸೇವೆಸಲ್ಲಿಸಿರುತ್ತಾರೆ. ಶ್ರೀಯತರು ಸಮಾಜದ ಎಲ್ಲಾ ವರ್ಗದ ಜನರೊಂದಿಗೆ, ಅಧಿಕಾರಿಗಳೊಂದಿಗೆ, ಮಾಧ್ಯಮಗಳೊಂದಿಗೆ ಒಳ್ಳೆಯ ಸಂಬಂಧವನ್ನು ಹೊಂದಿದವರಾಗಿರುತ್ತಾರೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

Comments are closed.