ಗಲ್ಫ್

ಯು.ಎ.ಇ.ಯಲ್ಲಿ ಕರ್ನಾಟಕ ರಾಜ್ಯೋತ್ಸವ ಸಂಭ್ರಮ; ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಝೂಮ್ ನೇರ ಪ್ರಸಾರದಲ್ಲಿ ಉದ್ಘಾಟನೆ

Pinterest LinkedIn Tumblr

ಯು. ಎ. ಇ. ಯಲ್ಲಿ ಕರ್ನಾಟಕ ರಾಜ್ಯೋತ್ಸವ 2020 ಸಮಾರಂಭವನ್ನು ಅಬುಧಾಬಿ ಕರ್ನಾಟಕ ಸಂಘ, ಕರ್ನಾಟಕ ಸಂಘ ಶಾರ್ಜಾ, ಕನ್ನಡಿಗರು ದುಬಾಯಿ ಮತ್ತು ಅಲ್ ಐನ್ ಕನ್ನಡ ಸಂಘ ಸಂಯುಕ್ತ ಆಶ್ರಯದಲ್ಲ್ಲಿ ನವೇಂಬರ್ 6ನೆ ತಾರೀಕು ಶುಕ್ರವಾರ ಝೂಮ್ ಮಾಧ್ಯಮದ ಮೂಲಕ ವಿಶ್ವ ಕನ್ನಡಿಗರಿಗೆ ಮನಸೆಳೆದ ಪರಮ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಝೂಮ್ ನೇರ ಪ್ರಸಾರದಲ್ಲಿ ಉದ್ಘಾಟನೆಯಗಿ ವಿಶ್ವ ಕನ್ನಡಿಗರ ಮನಸೆಳೆಯಿತು.

ಕಳೆದ ಮೂರು ನಾಲ್ಕು ದಶಕಗಳಿಂದ ವಿಜೃಂಬಣೆಯಿಂದ ಆಚರಿಸಿಕೊಂಡು ಬರುತ್ತಿದ್ದ ಕರ್ನಾಟಕ ರಾಜ್ಯೋತ್ಸವವನ್ನು ಪ್ರಸ್ತುತ ಕೋವಿಡ್ 19ರ ಲಾಕ್ ಡೌನ್ ಸನ್ನಿವೇಶದಿಂದಾಗಿ ಝೂಮ್ ವರ್ಚುವಲ್ ಮಾಧ್ಯಮದ ಮೂಲಕ ಆಚರಿಸಬೇಕಾದ ಸನ್ನಿವೇಶ ಸೃಷ್ಟಿಯಾಗಿತ್ತು.

2020 ನವೆಂಬರ್ 6ನೇ ತಾರೀಕು ಶುಕ್ರವಾರ ಸಂಜೆ 4.00 ಗಂಟೆಗೆ (ಯು.ಎ.ಇ. ಸಮಯ) ಜûೂಮ್ ಮಾಧ್ಯಮದ ಮೂಲಕ ನೇರಪ್ರಸಾರದಲ್ಲಿಶ್ರೀಮತಿ ಆರತಿ ಅಡಿಗ ಸರ್ವರನ್ನು ಸ್ವಾಗತಿಸುತ್ತಾ ಪ್ರಾರಂಭವಾದ ಕಾರ್ಯಕ್ರಮ ಪರಮ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.

ಶಾರ್ಜಾ ಕರ್ನಾಟಕ ಸಂಘದ ವತಿಯಿಂದ ಧ್ವಜಾದೋಹಣ, ದುಬಾಯಿ ಕನ್ನಡಿಗರಿಂದ ಕನ್ನಡ ನಾಡ ಗೀತೆ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರು ಶ್ರೀ ಸರ್ವೋತ್ತಮ ಶೆಟ್ಟಿಯವರು, ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷರು ಶ್ರೀ ಆನಂದ್ ಬೈಲೂರ್, ಕನ್ನಡಿಗರು ದುಬಾಯಿ ಅಧ್ಯಕ್ಷೆ ಶ್ರೀಮತಿ ಉಮಾದೇವಿ ವಿದ್ಯಾಧರ್ ಮತ್ತು ಅಲ್ ಐನ್ ಕನ್ನಡ ಸಂಘದ ಅಧ್ಯಕ್ಷರು ಶ್ರೀ ವಿಮಲ್ ಕುಮಾರ್ ಇವರಿಂದ ಯು.ಎ.ಇ.ಯ ನಾಲ್ಕು ವಿಭಾಗಗಳಲ್ಲಿ ಜ್ಯೋತಿ ಬೇಳಗಿಸಿ, ಕರ್ನಾಟಕ ರಾಜ್ಯೋತ್ಸವಸ ಸಂದೇಶವನ್ನು ನೀಡಿದರು.

ಶ್ರೀ ಸರ್ವೊತ್ತಮ ಶೆಟ್ಟಿಯವರು ಕರ್ನಾಟಕ ರಾಜ್ಯೋತ್ಸವದ ಸಂದೇಶವನ್ನು ನೀಡಿದರು. ಇದೆ ಸಂದರ್ಭದಲ್ಲಿ ಪರಮ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಹೆಜ್ಜೆ ಗುರುತುಗಳನ್ನು ಸಂಕ್ಷಿಪ್ತವಾಗಿ ವಿವರಿಸಿದ ನಂತರ ಪರಮ ಪೂಜ್ಯರು ವಿಶ್ವದ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಶುಭ ಸಂದೇಶ ನೀಡಿದರು.

ಇಂಡಿಯ ಸೋಶಿಯಲ್ ಸೆಂಟರ್ ನ ಅಧ್ಯಕ್ಷರು ಶ್ರೀ ಯೋಗೀಶ್ ಪ್ರಭು, ಮತ್ತು ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯು.ಎ.ಇ. ಅಧ್ಯಕ್ಷರಾದ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ಮತ್ತು ಕರ್ನಾಟಕ ಸಂಘ ಶಾರ್ಜಾ ದ ಉಪಾಧ್ಯಕ್ಷರಾದ ಶ್ರೀ ಎಂ. ಇ. ಮೂಳೂರ್ ಶುಭ ಸಂದೇಶವನ್ನು ನೀಡಿದರು.

ನಂತರ ಪ್ರಸಾರವಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಲ್ಕು ಸಂಘಟನೆಗಳ ವತಿಯಿಂದ ಸ್ವಾಗತ ನೃತ್ಯ, ಮಕ್ಕಳ ಸಮೂಹ ಜಾನಪದ ಗೀತೆಗಳು, ಸಮೂಹ ಜಾನಪದ ನೃತ್ಯಗಳು, ದುಬೈಯ ಖ್ಯಾತ ಉದ್ಯಮಿ, ಕನ್ನಡ, ತುಳು ಚಿತ್ರ ನಿರ್ಮಾಪಕ, ಖ್ಯಾತ ಗಾಯಕ ಶ್ರೀ ಹರೀಶ್ ಶೇರಿಗಾರ್ ಮತ್ತು ಕು. ಅಕ್ಷಾತಾ ರವರ ಕನ್ನಡ ಯುಗಳ ಗೀತೆ ಹಾಗೂ ಪುಟ್ಟ ಮಕ್ಕಳ ಚಲನಚಿತ್ರ ಗೀತೆಗಳ ಸಮೂಹ ನೃತ್ಯಗಳು ಮುನ್ನ ಚಿತ್ರಿಕರಿಸಿದ್ದು ಈ ವೀಡಿಯೋಗಳನ್ನು ನೇರ ಪ್ರಸಾರದ ಮೂಲಕ ಕಾರ್ಯಕ್ರಮ ನಡೆಯಿತು.

ಯು.ಎ.ಇ. ಯಿಂದ ಅಯೋಜಿಸಲಾದ ನೇರ ಕಾರ್ಯಕ್ರಮವನ್ನು ಲಂಡನ್, ಮತ್ತು ಭಾರತದ ದೃಶ್ಯ ಮಾಧ್ಯಮಗಳು ಯೂಟ್ಯೂಬ್, ಫೇಸ್ ಬುಕ್ ಸಾಮಾಜಿಕ ಜಾಲತಾಣದ ಮೂಲಕ ನೇರ ಪ್ರಸಾರದಲ್ಲಿ ವಿಶ್ವದಾದ್ಯಂತ ಕನ್ನಡಿಗರಿಗೆ ಮನೆಮಂದಿಯರೊಂದಿಗೆ ವೀಕ್ಷಿಸುವ ವ್ಯವಸ್ಥೆ ಮಾಡಿದ್ದರು.

ಕೊನೆಯಲ್ಲಿ ಶ್ರೀ ಮನೋಹರ್ ತೋನ್ಸೆಯವರು ವಂದನಾರ್ಪಣೆ ಮಾಡಿದರು.
ನೇರ ಪ್ರಸಾರದ ತಾಂತ್ರಿಕ ವರ್ಗದಲ್ಲಿ ಶ್ರೀಮತಿ ಆರತಿ ಅಡಿಗ ನಿರೂಪಕಿಯಾಗಿ, ಕ್ರಿಯಾತ್ಮಕ ಕಲಾ ನಿರ್ದೇಶಕ ಶ್ರೀ ಬಿ. ಕೆ. ಗಣೇಶ್ ರೈ ಭಿತ್ತಿ ಚಿತ್ರ ವಿನ್ಯಾಸ ಮತ್ತು ಸಂಕಲನ, ಶ್ರೀ ವಿಕಾಸ್ ಶೆಟ್ಟಿ ನೇರ ಪ್ರಸಾರ ಮಾತ್ತು ಶ್ರೀ ದೀಪಕ್ ಸೋಮಶೇಖರ್ ಸಂಕಲನ ಮತ್ತು ನೇರ ಪ್ರಸಾರದ ಜವಬ್ಧಾರಿಯನ್ನು ವಹಿಸಿಕೊಂಡಿದ್ದರು.

ವಿದೇಶದ ನೆಲದಲ್ಲಿ ಪ್ರಥಮಬಾರಿಗೆ ವರ್ಚುವಲ್ ಝೂಮ್ ಮಾಧ್ಯಮದ ಮೂಲಕ ಆಯೋಜಿಸಿ ಪ್ರಸಾರವಾದ ಕಾರ್ಯಕ್ರಮ ಸರ್ವರ ಸಹಕಾರದೊಂದಿಗೆ ಯಶಸ್ವಿಯಾಗಿ ವಿಶ್ವದಾದ್ಯಂತ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಯಿತು.

ಬಿ. ಕೆ. ಗಣೇಶ್ ರೈ
ಅರಬ್ ಸಂಯುಕ್ತ ಸಂಸ್ಥಾನ

Comments are closed.