ಕರಾವಳಿ

ನಮ್ಮ ಒತ್ತಡಕ್ಕೆ ಕಾರಣವೇನು? ‘ಒತ್ತಡ ಏಕೆ ಬರುತ್ತದೆ?. ಒತ್ತಡ ನಿರ್ಮೂಲನೆಗೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ

Pinterest LinkedIn Tumblr

ಒತ್ತಡಯುಕ್ತ ಜಗತ್ತಿನಲ್ಲಿ ಮನಃಶಾಂತಿಗಾಗಿ ಶೋಧ’ ಈ ವಿಷಯದ ಬಗ್ಗೆ ‘ದಕ್ಷಿಣ ಏಷಿಯಾ ವೈದ್ಯಕೀಯ ವಿದ್ಯಾರ್ಥಿ ಸಂಘಟನೆ’ಯಿಂದ ‘ವೆಬಿನಾರ್’ !

ನಮ್ಮ ವ್ಯಕ್ತಿತ್ವದ ದೋಷಗಳೇ, ನಮ್ಮ ಒತ್ತಡಕ್ಕೆ ಕಾರಣ; ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆಯ ಮೂಲಕ ಒತ್ತಡ ನಿರ್ಮೂಲನೆಯು ಸಾಧ್ಯ ! : ಡಾ. ನಂದಿನಿ ಸಾಮಂತ

‘ಶಾಶ್ವತ ಆನಂದ ಮತ್ತು ಶಾಂತಿ ಇವುಗಳನ್ನು ಹಣದಿಂದ ಖರೀದಿಸಲು ಸಾಧ್ಯವಿಲ್ಲ, ಆದರೆ ಅದು ಒಬ್ಬ ಆಧ್ಯಾತ್ಮಿಕ ಉನ್ನತರ ಮಾರ್ಗದರ್ಶನಕ್ಕನುಸಾರ ನಿಯಮಿತವಾಗಿ ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆಯನ್ನು ನಡೆಸುವುದು, ಸಾತ್ತ್ವಿಕ ಜೀವನಶೈಲಿಯನ್ನು ಅಂಗೀಕರಿಸುವುದು ಮತ್ತು ಸ್ವತಃ ಸಾಧನೆ ಮಾಡುವುದು ಈ ಮೂರು ಅಂಶಗಳಿಂದಲೇ ಸಾಧ್ಯವಿದೆ. ಅದಕ್ಕಾಗಿ ನಮ್ಮ ಉನ್ನತಿಯ ದೃಷ್ಟಿಯಿಂದ ಜೀವನಪರ್ಯಂತ ಸಮರ್ಪಿತರಾಗಿ ಪ್ರಯತ್ನಿಸುವುದು ಆವಶ್ಯಕವಾಗಿದೆ.

ಒಂದು ವೇಳೆ ಒಬ್ಬನು ವೈಶ್ವಿಕ ತತ್ತ್ವಕ್ಕನುಸಾರ ಪ್ರಾಮಾಣಿಕವಾಗಿ ಸಾಧನೆಯನ್ನು ಮಾಡಿದರೆ, ಯೋಗ್ಯ ಸಮಯದಲ್ಲಿ ನಾವು ನಮ್ಮ ಮನಸ್ಸಿನ ಆಚೆಗೆ ಹೋಗಬಹುದು ಅಥವಾ ಪ್ರತಿಯೊಬ್ಬರಲ್ಲಿರುವ ಈಶ್ವರೀ ತತ್ತ್ವದ ಅನುಭವವನ್ನು ಪಡೆಯಬಹುದು. ಇದಕ್ಕೇ ಪರಮಾನಂದ ಅಥವಾ ಆನಂದದ ಸರ್ವೋಚ್ಚ ಬಿಂದು ಎಂದು ಹೇಳುತ್ತಾರೆ, ಯಾವುದೂ ಯಾವುದರ ಮೇಲೆಯೂ ಅವಲಂಬಿಸಿರುವುದಿಲ್ಲ’, ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಡಾ. ನಂದಿನಿ ಸಾಮಂತ ಇವರು ಹೇಳಿದ್ದಾರೆ.

ಅವರು ‘ದಕ್ಷಿಣ ಏಷಿಯಾ ವೈದ್ಯಕೀಯ ವಿದ್ಯಾರ್ಥಿ ಸಂಘಟನೆ’ಯ (SAMSA) ವತಿಯಿಂದ ಆಯೋಜಿಸಲಾದ ‘ಒತ್ತಡಯುಕ್ತ ಜಗತ್ತಿನಲ್ಲಿ ಮನಃಶಾಂತಿಗಾಗಿ ಶೋಧ’) ಈ ವಿಷಯದ ಕುರಿತು ‘ವೆಬಿನಾರ’ನಲ್ಲಿ ಮಾತನಾಡುತ್ತಿದ್ದರು.

ಇದರಲ್ಲಿ ಡಾ. ನಂದಿನಿ ಸಾಮಂತ ಇವರು ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಮಾಡಿದ ಸಂಶೋಧನೆಯ ವಿಷಯವನ್ನೂ ಮಂಡಿಸಿದರು.

ಈ ‘ವೆಬಿನಾರ’ನ ಸಂಯೋಜನೆಯನ್ನು ‘ದಕ್ಷಿಣ ಏಷಿಯಾದ ವೈದ್ಯಕೀಯ ವಿದ್ಯಾರ್ಥಿ ಸಂಘಟನೆ’ಯ ಕೋಶಾಧಿಕಾರಿ ಮತ್ತು ‘ಮೆಂಟಾರ್’ ಡಾ. ಶ್ರಿಯಾ ಸಾಹಾ ಇವರು ಮಾಡಿದರು.

ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಜಗದ್ವಿಖ್ಯಾತ ವೈದ್ಯಕೀಯ ಸಂಮ್ಮೋಹನ ಉಪಚಾರ ತಜ್ಞರಾಗಿದ್ದಾರೆ. ಅವರಿಗೆ ಓರ್ವ ‘ಡಾಕ್ಟರ್’ ಎಂದು 23 ವರ್ಷಗಳ ವೈದ್ಯಕೀಯ ಕ್ಷೇತ್ರದ ಅನುಭವವಿದೆ ಜೊತೆಗೆ ಭಾರತ ಮತ್ತು ಇಂಗ್ಲೆಂಡ್ ನಲ್ಲಿ ಮನಶಾಸ್ತ್ರದ ಸಂಶೋಧನೆಯಲ್ಲಿ 51 ವರ್ಷಗಳ ಮತ್ತು ಆಧ್ಯಾತ್ಮಿಕ ಸಂಶೋಧನೆಯಲ್ಲಿ 39 ವರ್ಷಗಳ ಅನುಭವವಿದೆ.

ಡಾ. ನಂದಿನಿ ಸಾಮಂತರು ಆರಂಭದಲ್ಲಿ ‘ಒತ್ತಡ ಏಕೆ ಬರುತ್ತದೆ?’ ಇದರ ಬಗ್ಗೆ ವಿವರಿಸಿದರು. ಅನಂತರ ಅವರು ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆಯ ಮತ್ತು ವ್ಯಕ್ತಿತ್ವದಲ್ಲಿರುವ ದೋಷಗಳನ್ನು ದೂರಗೊಳಿಸಿ ಅವುಗಳನ್ನು ಗುಣಗಳಾಗಿ ರೂಪಾಂತರಿಸಲು ಈ ಪ್ರಕ್ರಿಯೆಯನ್ನು ಹೇಗೆ ಮಾಡಬೇಕು ಎಂಬುದನ್ನು ಹೇಳಿದರು.

ಅಧ್ಯಾತ್ಮ ಮತ್ತು ಸಾತ್ತ್ವಿಕ ಜೀವನಶೈಲಿಗಳಿಂದ ಒತ್ತಡ ಹೇಗೆ ದೂರವಾಗುತ್ತದೆ ಇದರ ಬಗ್ಗೆಯೂ ಅವರು ಮನವರಿಕೆ ಮಾಡಿಕೊಟ್ಟರು. ಅವರು ಕೆಲವು ‘ಕೇಸ್ ಸ್ಟಡಿ’ಯ ಮಾಧ್ಯಮದಿಂದ ‘ಜೀವನದಲ್ಲಿ ಸಕಾರಾತ್ಮಕ ಪರಿವರ್ತನೆಯಾಗಲು ಸ್ವಭಾವದೋಷಗಳನ್ನು ಹೇಗೆ ನಿರ್ಮೂಲನ ಮಾಡಬೇಕು’ ಎಂಬುದರ ಬಗ್ಗೆ ಉಪಸ್ಥಿತರಿಗೆ ಮಾರ್ಗದರ್ಶನ ಮಾಡಿದರು.

ಈ ‘ವೆಬಿನಾರ್’ಗಾಗಿ 14 ದೇಶಗಳಿಂದ ಹಾಗೂ ಭಾರತದಾದ್ಯಂತ ೨೪ ರಾಜ್ಯಗಳಿಂದ ಒಟ್ಟು 1,168 ಜನರು ನೋಂದಣಿ ಮಾಡಿದ್ದರು.

‘ಝೂಮ್’ ಮತ್ತು ‘ಯೂ-ಟ್ಯೂಬ್’ ಮಾಧ್ಯಮದಿಂದ ಈ ಕಾರ್ಯಕ್ರಮವನ್ನು ನೇರ ಪ್ರಕ್ಷೇಪಣೆ ಮಾಡಲಾಯಿತು.

‘ಯೂ-ಟ್ಯೂಬ್’ ಮೂಲಕ ಇದು ವರೆಗೆ 11 ಸಾವಿರಕ್ಕಿಂತ ಹೆಚ್ಚು ಜನರು ಈ ‘ವೆಬಿನಾರ್’ ನೋಡಿದರು.

ಈ ವೆಬಿನಾರ್‌ನಲ್ಲಿ ಉಪಸ್ಥಿತರಿದ್ದವರು ಅತ್ಯುತ್ತಮವಾಗಿ ಸ್ಪಂದಿಸಿದರು. ಉಪಸ್ಥಿತರಲ್ಲಿ ಶೇ. 68.4 ರಚ್ಟು ಜನರು ಸ್ವಭಾವದೋಷ ನಿರ್ಮೂಲನೆ ಪ್ರಕ್ರಿಯೆ, ಸಾಧನೆ ಮತ್ತು ಸಾತ್ತ್ವಿಕ ಜೀವನಶೈಲಿ ಈ ಮೂರು ವಿಷಯಗಳು ಇಷ್ಟವಾಯಿತೆಂದು ಹೇಳಿದರು.

ಶೇ. 95.6 ರಷ್ಟು ಜನರು ‘ಆನಂದಮಯ ಜೀವನದ ಪ್ರಾಪ್ತಿಯ ದೃಷ್ಟಿಯಿಂದ ಈ ‘ವೆಬಿನಾರ್’ ನಮಗೆ ಸಹಾಯಕವಾಯಿತು’, ಎಂದು ತಮ್ಮ ಭಾವನೆಯನ್ನು ವ್ಯಕ್ತಪಡಿಸಿದರು.

ಶೇ. 91.2 ಜನರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ‘ಸ್ವಭಾವದೋಷ ನಿರ್ಮೂಲನೆ’ ಇದರ ಬಗ್ಗೆ ತೆಗೆದುಕೊಳ್ಳಲಾಗುವ ಮುಂದಿನ ಕಾರ್ಯಾಗಾರದಲ್ಲಿ ಉಪಸ್ಥಿತರಿರಲು ಮತ್ತು ಈ ಪ್ರಕ್ರಿಯೆ ಅಂಗೀಕರಿ ಸಲು ಇಚ್ಛಿಸಿದರು.

ವರದಿ ಕೃಪೆ : ಶ್ರೀ. ರೂಪೇಶ ರೆಡಕರ್, ಸಂಶೋಧನ ವಿಭಾಗ. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ,

Comments are closed.