ಅಂತರಾಷ್ಟ್ರೀಯ

ಅಮೆರಿಕ ಚುನಾವಣೆ : ನಾಲ್ವರು ಭಾರತೀಯರು ಜಯಭೇರಿ – ಸತತ ಮೂರನೆ ಬಾರಿಗೆ ಅಯ್ಕೆಯಾದ ರಾಜಾ ಕೃಷ್ಣಮೂರ್ತಿ

Pinterest LinkedIn Tumblr

ವಾಷಿಂಗ್ಟನ್, ನವೆಂಬರ್.03: ಅಮೆರಿಕದಲ್ಲಿ ನಡೆದ ಚುನಾವಣೆಯಲ್ಲಿ ನಾಲ್ವರು ಭಾರತೀಯರು ಜಯಭೇರಿ ಭಾರಿಸುವ ಮೂಲಕ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿಯೂ ಭಾರತೀಯ ಮೂಲಕ ರಾಜಕೀಯ ಮುಖಂಡರ ಪ್ರಾಬಲ್ಯ ಮುಂದುವರಿದಂತಾಗಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ ಕ್ಷಣಕ್ಷಣಕ್ಕೂ ರಂಗೇರುತ್ತಿರುವ ಈ ಸಂದರ್ಭದಲ್ಲಿ ಭಾರತೀಯ ಮೂಲದ ಡೆಮಾಕ್ರಾಟಿಕ್ ಕಾಂಗ್ರೆಸ್ ನಾಯಕ ರಾಜಾ ಕೃಷ್ಣಮೂರ್ತಿ ಸತತ ಮೂರನೆ ಬಾರಿಗೆ ಅಮೆರಿಕದ ಪ್ರತಿನಿಧಿನಗಳ ಸದನ ಆಯ್ಕೆಯಾಗಿದ್ದಾರೆ. ನವದೆಹಲಿಯಲ್ಲಿ ಜನಿಸಿದ ರಾಜಾ ಅವರು ಈ ಮೂಲಕ ಅಮೆರಿಕದ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ.

ರಾಜಾ ಕೃಷ್ಣಮೂರ್ತಿ(47) ಅವರು ಇಲಿನಾಯ್ಸ್ ರಾಜ್ಯದಲ್ಲಿ ಲಿಬರಲ್ ಪಕ್ಷದ ಅಭ್ಯರ್ಥಿ ಪ್ರೆಸ್‍ಟನ್ ನೆಲ್ಸನ್ ಅವರನ್ನು ಸುಲಭವಾಗಿ ಮಣಿಸಿ ಯುಎಸ್ ಹೌಸ್ ಆಫ್ ರೆಪ್ರಸೆಂಟಿಟಿವ್‍ಗೆ ಮರು ಆಯ್ಕೆಯಾದ್ದಾರೆ.ಎಣಿಕೆ ಮಾಡಲಾದ ಒಟ್ಟು ಮತಗಳಲ್ಲಿ ಆರ್‍ಕೆ ಶೇ.71ಕ್ಕೂ ಹೆಚ್ಚು ಮತಗಳನ್ನು ತಮ್ಮದಾಗಿಸಿಕೊಂಡು ಮೂರನೆ ಬಾರಿಗೆ ಜಯ ಸಾಧಿಸಿದ್ದಾರೆ.

ಕೃಷ್ಣಮೂರ್ತಿ ಪೋಷಕರು ತಮಿಳುನಾಡಿನ ಮೂಲದವರು. 2016ರಲ್ಲಿ ಮೊದಲ ಬಾರಿಗೆ ಅಮೆರಿಕ ಸಂಸತ್ ನ ಜನಪ್ರತಿನಿಧಿಯಾಗಿ ಕೃಷ್ಣಮೂರ್ತಿ ಆಯ್ಕೆಯಾಗಿದ್ದರು.

ಭಾರತೀಯ ಮೂಲದವರೇ ಆದ ಕಾಂಗ್ರೆಸ್ಸಿಗ ಅಮಿ ಬೇರಾ ಅವರು ಕ್ಯಾಲಿಫೋರ್ನಿಯಾದಿಂದ ಐದನೆ ಬಾರಿ ಗೆಲುವು ಬಯಸಿದ್ದಾರೆ. ವಾಷಿಂಗ್ಟನ್‌ ಸ್ಟೇಟ್‌ನಿಂದ ಪ್ರಮೀಳಾ ಜಯಪಾಲ್‌, ಕ್ಯಾಲಿಫೊರ್ನಿಯಾದಿಂದ ರೊ ಖನ್ನಾ ಹೌಸ್‌ ಆಫ್‌ ರೆಪ್ರಸೆಂಟೇಟಿವ್‌ಗೆ ಆಯ್ಕೆಯಾಗಿದ್ದಾರೆ. ರೋ ಖನ್ನಾ ಅವರು ಸತತ ಮೂರನೆ ಬಾರಿ ಪ್ರತಿನಿಧಿಗಳ ಸದನದಲ್ಲಿ ಸ್ಥಾನ ಪಡೆಯಲು ಉತ್ಸುಕರಾಗಿದ್ದಾರೆ.

ಭಾರತೀಯ ಮೂಲದ ಪ್ರಭಾವಿ ನಾಯಕರಾದ ಡಾ. ಹಿರಲ್ ತಿಪಿರ್‍ನೆನಿ, ಕುಲಕರ್ಣಿ, ಮಂಗ ಅನಂತಮೂಲ ಮತ್ತಿತರರ ರಾಜಕೀಯ ಭವಿಷ್ಯವೂ ಸಂಜೆ ನಿರ್ಧಾರವಾಗಲಿದೆ.

ಇದೇ ವೇಳೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಕ್ಷಣಕ್ಷಣಕ್ಕೂ ರಂಗೇರುತ್ತಿದ್ದು, ತೀವ್ರ ಪೈಪೋಟಿಯ ನಡುವೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತಎಣಿಕೆ ನಡೆಯುತ್ತಿದೆ. ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಹಾಗೂ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ನಡುವೆ ತೀವ್ರ ಸ್ಪರ್ಧೆ ಇದ್ದು, ಯಾರು ಅಧ್ಯಕ್ಷ ಗದ್ದುಗೆ ಏರಲಿದ್ದಾರೆ ಎಂಬುದು ಇಂದು ಸಂಜೆಯೊಳಗೆ ನಿರ್ಧರವಾಗಲಿದೆ.

Comments are closed.