ಕರಾವಳಿ

ಉಡುಪಿಯಲ್ಲಿ ಪಿಕ್ ಪಾಕೆಟ್ ಮಾಡುತ್ತಿದ್ದ ಮೂವರು ಖತರ್ನಾಕ್ ಕಳ್ಳಿಯರ ಬಂಧನ..!

Pinterest LinkedIn Tumblr

ಉಡುಪಿ: ಉಡುಪಿ ಸಿಟಿ ಬಸ್ ನಲ್ಲಿ ಮಹಿಳೆಯ ಬ್ಯಾಗ್ ನಿಂದ ಪರ್ಸ್ ಮತ್ತು ಎಟಿಎಂ ಕಾರ್ಡ್ ಗಳನ್ನು ಕಳವು ಮಾಡಿದ್ದ ಮೂವರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.

ಬಳ್ಳಾರಿಯ ಕವಿತಾ (33), ಸಬಿತಾ (35), ಹಾಗೂ ಬೆಂಗಳೂರು ಮೂಲದ ಲತಾ (25) ಬಂಧಿತ ಆರೋಪಿಗಳು.

ಅರ್ಚನಾ ರಾವ್ ಎನ್ನುವರು ಬಸ್ಸಿನಲ್ಲಿ ಪ್ರಯಾಣಿಸುವಾಗ ಕುಂಜಿಬೆಟ್ಟು ಬಳಿ ಈ ಮೂವರು ಮಹಿಳೆಯರು ಬಸ್ ಹತ್ತಿದ್ದು ಅರ್ಚನಾ ರಾವ್ ಇವರ ಬಳಿಯಲ್ಲಿ ಬಸ್ ನಲ್ಲಿ ನಿಂತುಕೊಂಡಿದ್ದರು. ಅರ್ಚನಾ ರಾವ್ ಅವರು ಬ್ಯಾಗ್ ನಿಂದ ಎಟಿಎಂ ಕಾರ್ಡ್, ಹಣ ಮತ್ತು ಇನ್ನಿತರ ದಾಖಲೆಗಳು ಇದ್ದ‌ ಪರ್ಸ್ ಅನ್ನು ಈ ಮೂವರು ಮಹಿಳೆಯರು ಲಪಟಾಯಿಸಿದ್ದರು. ಇದರೊಂದಿಗೆ ಎಟಿಎಂ ನಿಂದ ಸುಮಾರು 25 ಸಾವಿರ ರುಪಾಯಿ ಹಣವನ್ನು ಕೂಡಾ ಡ್ರಾ ಮಾಡಿದ್ದರು. ಈ ಬಗ್ಗೆ ಅರ್ಚನಾ ರಾವ್ ಅವರು ಉಡುಪಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತಕ್ಷಣವೇ ಕಾರ್ಯಪ್ರವತ್ತರಾದ ಪೋಲಿಸರು ಉಡುಪಿ‌ ಸಿಪಿಐ ಮಂಜುನಾಥ, ನಗರ ಠಾಣೆ ಉಪನಿರೀಕ್ಷಕರಾದ ಸಕ್ತಿವೇಲು, ವಾಸಪ್ಪ ನಾಯ್ಕ್ ನೇತೃತ್ವದ ತಂಡ ರಚಿಸಿ ಮೂವರು ಮಹಿಳೆಯರನ್ನು ಬಂಧಿಸಿದ್ದಾರೆ.

ಈ ಆರೋಪಿಗಳು ಮಾಲ್, ದೇವಸ್ಥಾನ, ಬಸ್ಸು ನಿಲ್ದಾಣ ಮತ್ತು ಬಸ್ಸುಗಳಲ್ಲಿ ಮಕ್ಕಳನ್ನು ಕರೆದುಕೊಂಡು ಗುಂಪುಗುಂಪಾಗಿ ಹೋಗಿ ವ್ಯಾನಿಟಿ ಬ್ಯಾಗ್ ಮತ್ತು ಪರ್ಸ್ ಇರುವ ಮಹಿಳೆಯರ ಬಳಿ‌ನಿಂತು ನಾಜೂಕಾಗಿ ಪಿಕ್ ಪಾಕೇಟ್ ಮಾಡುವ ಕುಖ್ಯಾತ ಅಂತರ್ ಜಿಲ್ಲಾ ಕಳ್ಳಿಯರಾಗಿದ್ದಾರೆ.

ಉಡುಪಿ ಎಸ್ಪಿ ವಿಷ್ಣುವರ್ಧನ್ ಆದೇಶದಂತೆ, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಉಡುಪಿ ಡಿವೈಎಸ್ಪಿ ಜೈಶಂಕರ್, ಉಡುಪಿ ಸಿಪಿಐ ಮಂಜುನಾಥ, ಮಣಿಪಾಲ ಇನ್ಸ್‌ಪೆಕ್ಟರ್ ಮಂಜುನಾಥ್, ಉಡುಪಿ ನಗರ ಠಾಣೆ ಪಿಎಸ್ಐಗಳಾದ ಸಕ್ತಿವೇಲು, ವಾಸಪ್ಪ ನಾಯ್ಕ್, ಎಎಸ್ಐ ಹರೀಶ್, ಹೆಡ್ ಕಾನ್ಸ್‌ಟೇಬಲ್ ಲೋಕೇಶ್, ರಿಯಾಝ್, ಅಹಮ್ಮದ್, ಹರ್ಷ, ಉಮೇಶ್, ಸಿಬ್ಬಂದಿಗಳಾದ ಇಮ್ರಾನ್, ಸಂತೋಷ್ ರಾಥೋಡ್, ವಿಶ್ವನಾಥ್ ಶೆಟ್ಟಿ, ಮಹಿಳಾ ಸಿಬ್ಬಂದಿಗಳಾದ ಸುಷ್ಮಾ, ವಿದ್ಯಾ, ರೂಪಾ, ಇಲಾಖಾ ಜೀಪು ಚಾಲಕರಾದ ಅಶೋಕ್, ರಾಘವೇಂದ್ರ ಈ ಕಾರ್ಯಾಚರಣೆಯಲ್ಲಿದ್ದರು.

Comments are closed.