ಕರಾವಳಿ

ನವರಾತ್ರಿಯ ಆರನೇ ದಿನವಾದ ಇಂದು ದುಷ್ಟ ರಾಕ್ಷಸರ ಸಂಹಾರಕ್ಕಾಗಿ ಅವತರಿಸಿ ಬಂದ ಕಾತ್ಯಾಯಿನಿ ದೇವಿ ಪೂಜೆ

Pinterest LinkedIn Tumblr

ಮಂಗಳೂರು, ಆಕ್ಟೋಬರ್.22: ನವರಾತ್ರಿ ಆರಂಭವಾಗಿ ಇಂದಿಗೆ ಆರು ದಿನ. ನವರಾತ್ರಿಯ ಒಂಬತ್ತು ದಿನಗಳಲ್ಲಿ ದಿನಕ್ಕೊಂದು ದೇವಿಯಂತೆ ನವದುರ್ಗೆಯರನ್ನು ಪೂಜಿಸುವುದು ಪ್ರತಿತಿ. ಆದೇ ರೀತಿ ನವರಾತ್ರಿಯ ಆರನೇ ದಿನವಾದ ಇಂದು ಕಾತ್ಯಾಯಿನಿ ದೇವಿ ಪೂಜೆ ಪಡೆಯುವವಳು.

ಕಾತ್ಯಾಯಿನಿ ದೇವಿಯ ಕರುಣೆ ಅಥವಾ ಆಶೀರ್ವಾದ ಇಲ್ಲದೆ ಜ್ಞಾನ ಸಂಪಾದನೆ ಮಾಡಲು ಸಾಧ್ಯವಿಲ್ಲ. ಇದು ಅನದಿ ಕಾಲದಿಂದಲೂ ಬಂದತಹ ನಂಬಿಕೆ. ದುರ್ಗಾ ದೇವಿಯ ಸ್ವರೂಪಳಾದ ಕಾತ್ಯಾಯಿನಿ ದೇವಿ ಋಷಿಮುನಿಯಾದ ಕಾತ್ಯಾಯನ್ ಮಗಳು. ಸಿಂಹದ ಮೇಲೆ ಕುಳಿತು ಹತ್ತು ಆಯುಧಗಳನ್ನು ಹಿಡಿದ ಕಾತ್ಯಾಯಿನಿ ದೇವಿಯು ಮೂರು ಕಣ್ಣು ಹಾಗೂ ಹಣೆಯ ಮೇಲೆ ಅರ್ಧ ಚಂದ್ರಾಕ್ರತಿಯ ಅಲಂಕಾರವನ್ನು ಹೊಂದಿರುತ್ತಾಳೆ.

ಒಮ್ಮೆ ಕಾತ್ಯಾಯನ್ ಎನ್ನುವ ಋಷಿ ಪಾರ್ವತಿ ದೇವಿಯಂತಹ ಮಗಳನ್ನು ಹೊಂದಬೇಕು ಎಂದು ಆಶಿಸಿದ್ದನು. ಈ ಹಿನ್ನೆಲೆಯಲ್ಲಿಯೇ ಭಕ್ತಿಯಿಂದ ತಪಸ್ಸನ್ನು ಕೈಗೊಂಡಿದ್ದನು.ಋಷಿಯ ಭಕ್ತಿಗೆ ಮೆಚ್ಚಿದ ದುರ್ಗಾ ದೇವಿಯು ಆಶೀರ್ವಾದ ಮಾಡಿದಳು. ಅಂತೆಯೇ ಮಗಳು ಹುಟ್ಟಿದ ಮೇಲೆ ಕಾತ್ಯಾಯಿನಿ ಎಂದು ಹೆಸರಿಟ್ಟರು.

ಅವಳು ದೊಡ್ಡವಳಾದ ನಂತರ ತನ್ನ ಹತ್ತು ಕೈಗಳಲ್ಲಿ ಶಸ್ತ್ರಾಸ್ತ್ರವನ್ನು ಹಿಡಿದು ರಾಕ್ಷಸರ ನಾಶ ಮಾಡಲು ಜಗತ್ತನ್ನು ಸುತ್ತಲು ಪ್ರಾರಂಭಿಸಿದಳು. ದುಷ್ಟ ರಾಕ್ಷಸರ ಸಂಹಾರಕ್ಕಾಗಿ ದುರ್ಗಾ ದೇವಿಯು ಅವತರಿಸಿ ಬಂದಳು ಎಂದು ಹೇಳಲಾಗುತ್ತದೆ. ಶ್ರೀ ದೇವಿ ಕಾತ್ಯಾಯಿನಿ ನವದುರ್ಗೆಯರಲ್ಲಿ ಆರನೆಯವಳು.

“ಮಂಗಳೂರು ದಸರಾ ಮಹೋತ್ಸವ” ದಲ್ಲಿ ನವದುರ್ಗೆಯರ ಅರಾಧಾನೆ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಈಗಾಗಲೇ ‘ನಮ್ಮ ದಸರಾ-ನಮ್ಮ ಸುರಕ್ಷೆ’ ಘೋಷವಾಕ್ಯದಡಿ ಹಮ್ಮಿಕೊಳ್ಳಲಾಗಿರುವ “ಮಂಗಳೂರು ದಸರಾ ಮಹೋತ್ಸವ” ದಲ್ಲಿ ಶ್ರೀ ಶಾರಾದೆ ಮಾತೆ, ಶ್ರೀ ಮಹಾಗಣಪತಿ ಜೊತೆಗೆ ನವದುರ್ಗೆಯರನ್ನು ಅರಾಧಿಸಲಾಗುತ್ತಿದೆ.

ಶ್ರೀ ಕ್ಷೇತ್ರದ ದರ್ಬಾರ್ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿರುವ ನವದುರ್ಗೆಯರಿಗೆ ನವರಾತ್ರಿಯ ಒಂಬತ್ತು ದಿನಗಳಲ್ಲಿ ದಿನನಿತ್ಯದ ಪೂಜೆಯ ಜೊತೆಗೆ ಪ್ರತೀ ದಿನಾ ಒಂದೊಂದೇ ದೇವಿಗೆ ವಿಶೇಷ ಪೂಜೆ ಮಾಡಲಾಗುತ್ತಿದೆ. ಅದರಂತೆ ಇಂದು ಇಂದು ಕಾತ್ಯಾಯಿನಿ ದೇವಿಯ ದಿನವಾಗಿರುವುದರಿಂದ ಕಾತ್ಯಾಯಿನಿ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

Comments are closed.