ಕರ್ನಾಟಕ

ಜ್ಯೂನಿಯರ್ ಚಿರು: ಗಂಡು ಮಗುವಿಗೆ ಜನ್ಮ ನೀಡಿದ ಮೇಘನಾ ಚಿರಂಜೀವಿ ಸರ್ಜಾ

Pinterest LinkedIn Tumblr

ಬೆಂಗಳೂರು: ಇತ್ತೀಚೆಗಷ್ಟೇ ಮೃತಪಟ್ಟಿದ್ದ ಸ್ಯಾಂಡಲ್​ವುಡ್​ ನಾಯಕ ನಟ ಚಿರಂಜೀವಿ ಸರ್ಜಾ ಅವರ ಪತ್ನಿ, ನಟಿ ಮೇಘನಾ ಸರ್ಜಾ ಅವರು ಇಂದು ಬೆಂಗಳೂರು ನಗರದ ಕೆ.ಆರ್ ರಸ್ತೆಯ ಅಕ್ಷ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು ತಾಯಿ- ಮಗು ಆರೋಗ್ಯವಾಗಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಸರ್ಜಾ ಅಗಲುವಿಕೆ ನೋವಿನ ನಡುವೆಯೂ ಗಂಡು ಮಗುವಿನ ಆಗಮನದಲ್ಲಿ ಕುಟುಂಬ ಸಂತೋಷಲ್ಲಿದೆ. ಚಿರಂಜೀವಿ ಸರ್ಜಾ ಜೂನಿಯರ್ ಚಿರು ರೂಪದಲ್ಲಿ ಬರುತ್ತಾನೆ ಎಂದು ಇಡೀ ಸರ್ಜಾ ಕುಟುಂಬ ಎದುರು ನೋಡಿತ್ತು. ಆಸ್ಪತ್ರೆ ಮುಂದೆ ಜಮಾಯಿಸಿರುವ ಚಿರು ಫ್ಯಾನ್ಸ್​ ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.

ಇಂದು ಚಿರಂಜೀವಿ ಸರ್ಜಾ ಮತ್ತು ಮೇಘನಾ ಜೋಡಿಯ ನಿಶ್ಚಿತಾರ್ಥದ ದಿನ ಕೂಡ ಆಗಿದೆ. 2018ರ ಮೇ 2ರಂದು ಚಿರಂಜೀವಿ ಸರ್ಜಾ ಮತ್ತು ಮೇಘನಾ ವಿವಾಹ ನಡೆದಿತ್ತು.

Comments are closed.