ಕರಾವಳಿ

ಪ್ರತಿಷ್ಠಿತ ಏಶಿಯನ್ ಎಜುಕೇಷನ್ ಅವಾರ್ಡ್ ಪಡೆದ ಬಿ. ಸುಶ್ಮಿತಾ ಆಚಾರ್ ಅವರಿಗೆ ಗೌರವ-ಸಮ್ಮಾನ

Pinterest LinkedIn Tumblr

ಮಂಗಳೂರು : ಪ್ರತಿಷ್ಠಿತ ಏಶಿಯನ್ ಎಜುಕೇಷನ್ ಅವಾರ್ಡ್ ಪಡೆದ ಮಂಗಳೂರಿನ ಬೋಳೂರಿನ ಬಿ. ಸುಶ್ಮಿತಾ ಆಚಾರ್ ಇವರಿಗೆ ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ವತಿಯಿಂದ ಕ್ಷೇತ್ರದ ಆಡಳಿತ ಮೊಕ್ತೇಸರ ಕೆ. ಕೇಶವ ಆಚಾರ್ಯ ಫಲವಸ್ತು ಸ್ಮರಣಿಕೆ ಶಾಲು ನೀಡಿ ಅಭಿನಂದಿಸಿ, ವಿಶ್ವಬ್ರಾಹ್ಮಣ ಸಮಾಜದ ಓರ್ವ ಯುವತಿಯ ಅತ್ತ್ಯುನ್ನತ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಶುಭಾಶಂಸನೆಗೈದರು.

ಹೊಸದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ಏಶಿಯನ್ ಎಜುಕೇಶನ್ ಅವಾರ್ಡ್ ಅಂಡ್ ವರ್ಚುವಲ್ ಕಾನ್ಫರೆನ್ಸ್ -2020 ಸಮಾರಂಭದಲ್ಲಿ ಸುಶ್ಮಿತಾ ಆಚಾರ್ ಇವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗಿತ್ತು.

ಕಿಂಗ್ಸ್ ಕಾರ್ನರ್ ಸ್ಟೋನ್ ಇಂಟರ್ ನ್ಯಾಷನಲ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ ರಾಗಿರುವ ಸುಶ್ಮಿತಾ ನ್ಯಾಷನಲ್ ಎಜುಕೇಷನ್ ಪಾಲಿಸಿಯ ಅಂಬಾಸಿಡರ್ ಆಗಿರುವ ಈಕೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಮಣ್ಣಗುಡ್ಡೆಯ ಕಾರ್ಪೊರೇಟರ್ ಶ್ರೀಮತಿ ಸಂಧ್ಯಾ ಹಾರ ಹಾಕಿ ಅಭಿನಂದಿಸಿದರು.

ಕ್ಷೇತ್ರದ ಪ್ರಧಾನ ಅರ್ಚಕ ಧನಂಜಯ ಪುರೋಹಿತ್ ವಿಶೇಷ ಪ್ರಾರ್ಥನೆಗೈದರು. ಕ್ಷೇತ್ರದ ಎರಡನೇ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ, 3ನೇ ಮೊಕ್ತೇಸರ ಎ ಲೋಕೇಶ್ ಆಚಾರ್ಯ ಬಿಜೈ, ಆಡಳಿತ ಮಂಡಳಿಯ ಸದಸ್ಯರು, ಬಿ. ಜೆ. ಪಿ. ಯ ಮುಖಂಡರಾದ ಬಿ.ಮೋಹನ್, ಮತ್ತು ಸುಶ್ಮಿತಾಳ ಹೆತ್ತವರಾದ ಬಿ. ಮಾಧವ ಆಚಾರ್ ದಂಪತಿಗಳು ಈ ಸಂದರ್ಭ ಉಪಸ್ಥಿತರಿದ್ದರು.

ಕ್ಷೇತ್ರದ ಆಡಳಿತ ಮಂಡಳಿಯ ವಿಶೇಷ ಆಹ್ವಾನಿತರಾದ ಸುಜೀರ್ ವಿನೋದ್ ಕಾರ್ಯಕ್ರಮ ನಿರೂಪಿಸಿದರು

Comments are closed.