ಕರಾವಳಿ

ಹಗಲಲ್ಲೇ ಕತ್ತಲಲ್ಲಿ ಮುಳುಗಿದ ಮುಂಬೈ ಮಹಾನಗರ : ವಾಣಿಜ್ಯ ನಗರಿ ತಲ್ಲಣ-ಸಾರ್ವಜನಿಕರ ಪರದಾಟ, ಆಕ್ರೋಷ

Pinterest LinkedIn Tumblr

ಮುಂಬೈ, ಅಕ್ಟೋಬರ್. 12: ಭಾರತದ ವಾಣಿಜ್ಯ ನಗರಿ ಮುಂಬೈ ಮಹಾನಗರದ ಹಲವಾರು ಪ್ರದೇಶಗಳಲ್ಲಿ ಸೋಮವಾರ ಬೆಳಗ್ಗೆ ವಿದ್ಯುತ್ ಕಡಿತ ಉಂಟಾಗಿದೆ. ಮನೆ,ಮಳಿಗೆ, ಆಸ್ಪತ್ರೆ ಸೇರಿದಂತೆ ಹೆಚ್ಚಿನ ಪ್ರದೇಶಗಳು ಈ ಸಮಯದಲ್ಲಿ ಯಾವುದೇ ವಿದ್ಯುತ್ ಇಲ್ಲದೆ ಜನತೆ ಪರಾಡುತ್ತಿರುವ ಸನ್ನಿವೇಶ ಕಂಡು ಬಂದಿದೆ.

ಗ್ರಿಡ್ ವೈಫಲ್ಯದಿಂದಾಗಿ ಮುಂಬೈನ ದೊಡ್ಡ ಭಾಗಗಳು ಮತ್ತು ಥಾಣೆಯ ಕೆಲವು ಪ್ರದೇಶಗಳು ಬೆಳಿಗ್ಗೆ 10: 15 ರಿಂದ ವಿದ್ಯುತ್ ಕಡಿತವನ್ನು ಎದುರಿಸುತ್ತಿವೆ.ಗ್ರಿಡ್ ವೈಫಲ್ಯದಿಂದಾಗಿ ಮುಂಬೈ ಉಪನಗರ ರೈಲು ಸೇವೆಗಳು ಅಸ್ತವ್ಯಸ್ತಗೊಂಡಿವೆ ಎಂಬ ಅಂಶವೂ ಬೆಳಕಿಗೆ ಬಂದಿದೆ.

ಗ್ರಿಡ್ ವೈಫಲ್ಯದಿಂದಾಗಿ ನಗರದಲ್ಲಿ ವಿದ್ಯುತ್ ಸರಬರಾಜು ಅಸ್ತವ್ಯಸ್ತಗೊಂಡಿದೆ ಎಂದು ಬೃಹನ್ ಮುಂಬೈ ವಿದ್ಯುತ್ ಸರಬರಾಜು ಹಾಗೂ ಸಾರಿಗೆ(ಬೆಸ್ಟ್)ವಕ್ತಾರರು ತಿಳಿಸಿದ್ದಾರೆ. ಅನಾನುಕೂಲತೆಗಳಿಗೆ ವಿಷಾದವಿದೆ ಎಂದು ಬೃಹನ್ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ (ಬೆಸ್ಟ್) ವಿದ್ಯುತ್ ಟ್ವೀಟ್‌ನಲ್ಲಿ ತಿಳಿಸಿದೆ.

ಮೆಟ್ರೋಪಾಲಿಟನ್ ಪ್ರದೇಶ (ಎಂಎಂಆರ್)ದಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಸಂಪೂರ್ಣ ವಿದ್ಯುತ್ ಕಡಿತವಾಗಿದೆ. ವಿದ್ಯುತ್ ಇನ್ಪುಟ್ ಸಿಗದ ಕಾರಣ ಪೂರೈಕೆ ಇಲ್ಲದ್ದಂತಾಗಿದೆ. ಟಾಟಾ ಸಂಸ್ಥೆ ವಿದ್ಯುತ್ ಪೂರೈಕೆಯಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು ಇದರಿಂದ ಮುಂಬೈನ ಬಹುತೇಕ ಕಡೆಗಳಲ್ಲಿ ವಿದ್ಯುತ್ ಇಲ್ಲವಾಗಿದೆ.

ಸಬ್ ಅರ್ಬನ್ ಟ್ರೈನ್ ಸೇವೆಯಲ್ಲಿ ವ್ಯತ್ಯಯವಾಗಿದೆ. ಚರ್ಚ್ ಗೇಟ್ ಹಾಗೂ ವಾಸಿ ನಡುವೆ ಸ್ಥಳೀಯ ರೈಲು ಸಂಚಾರ ವ್ಯತ್ಯಯವಾಗಿದೆ ಎಂದು ಪಶ್ಚಿಮ ರೈಲ್ವೆ ವಕ್ತಾರರು ಹೇಳಿದ್ದಾರೆ. ಮುಂಬೈ ದಕ್ಷಿಣ, ಉತ್ತರ ಹಾಗೂ ಕೇಂದ್ರ ಭಾಗದಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಜುಹು, ಅಂಧೇರಿ, ಮೀರಾ ರೋಡ್, ನವಿ ಮುಂಬೈ, ಥಾಣೆ ಹಾಗೂ ಪನ್ವೇಲ್ ವಿದ್ಯುತ್ ವೈಫಲ್ಯದಿಂದ ಹೆಚ್ಚಾಗಿ ಬಾಧಿತ ಪ್ರದೇಶಗಳಾಗಿವೆ. ಅನೇಕ ನಿವಾಸಿಗಳು ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್‌ಒ) ಮತ್ತು ಪಶ್ಚಿಮ ರೈಲ್ವೆ ದೃಡಪಡಿಸಿದೆ.ನಗರದ ಪ್ರಮುಖ ವಿದ್ಯುತ್ ಸರಬರಾಜುದಾರರಾದ ಅದಾನಿ ವಿದ್ಯುತ್, ಪ್ರಮುಖ ವಿದ್ಯುತ್ ಗ್ರಿಡ್ ವೈಫಲ್ಯವು ಹೆಚ್ಚಿನ ಪ್ರದೇಶಗಳಲ್ಲಿ ಪೂರೈಕೆಯ ಮೇಲೆ ಪರಿಣಾಮ ಬೀರಿದೆ ಎಂದು ದೃಡಪಡಿಸಿದೆ.

Comments are closed.