ಕರಾವಳಿ

ರಕ್ತದಾನದಿಂದ ಜೀವ ಉಳಿಸುವ ಜೊತೆಗೆ ರಕ್ತದಾನ ಮಾಡಲು ಯುವಕರಿಗೂ ಪ್ರೇರಣೆ : ಶಾಸಕ ಯು.ಟಿ.ಖಾದರ್

Pinterest LinkedIn Tumblr

ಮಂಗಳೂರು : ರಕ್ತದಾನ ಶಿಬಿರದಿಂದ ಹಲವರ ಜೀವ ಉಳಿಸುವ ಜೊತೆ ಸ್ಥಳೀಯ ಪ್ರದೇಶದ ಯುವಕರು ರಕ್ತದಾನ ಮಾಡಲು ಪ್ರೇರಣೆ‌ ನೀಡಿದಂತಾಗುತ್ತದೆ ಎಂದು ಶಾಸಕ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ‌

ಅಲೇಕಳ ನಮ್ಮೂರ ಧ್ವನಿ ಸೇವಾ ಸಂಘ ದಿಂದ ಕರ್ನಾಟಕ ಬ್ಲಡ್ ಹೆಲ್ಪ್‌ಲೈನ್ ಸಹಕಾರ ದಲ್ಲಿ ಅಲೇಕಳ ಮದನಿ ಶಾಲಾ‌ ಮೈದಾನದ ಲ್ಲಿ ಭಾನುವಾರ ನಡೆದ ರಕ್ತದಾನ ಮತ್ತು ಯು.ಟಿ.ಫರೀದ್ ಫೌಂಡೇಶನ್ ವತಿಯಿಂದ ಕೊಡುಗೆಯಾಗಿ ನೀಡಲಾದ ಆಂಬ್ಯುಲೆನ್ಸ್ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜನರ ಆರೋಗ್ಯ ಕಾಪಾಡಲು ತ್ವರಿತಗತಿಯ ಸೇವೆ ನೀಡುವ ಉದ್ದೇಶದಿಂದ ಆಂಬ್ಯುಲೆನ್ಸ್ ನೀಡಲಾಗಿದೆ.‌ ನಮ್ಮೂರ ಧ್ವನಿ ಸಂಘಟನೆಯ ಸಾಮಾಜಿಕ ಚಿಂತನೆಯನ್ನಾಧರಿಸಿ ನೀಡಲಾಗಿರುವ ಆಂಬ್ಯುಲೆನ್ಸ್ ಸುರಕ್ಷಿತ ಕೈಗಳಲ್ಲಿದೆ ಎನ್ನುವ ವಿಶ್ವಾಸ ಇದೆ.‌ ಪರಸ್ಪರ ಸ್ಪರ್ಧೆ, ದ್ವೇಷದಿಂದ ಯಾವುದೇ ಸಾಧನೆ ಅಸಾಧ್ಯ. ಅಳೇಕಲ ಪ್ರದೇಶದ ಸೌಹಾರ್ದತೆ ಮುಂದುವರಿಸಿ ಕೊಂಡು ಹೋಗುವ ಜವಾಬ್ದಾರಿ ಯುವ ಸಮುದಾಯದ್ದಾಗಿದೆ ಎಂದು ಹೇಳಿದರು. ‌

ನಮ್ಮೂರ ಧ್ವನಿ ಸೇವಾ ಸಂಘದ ಯು.ಬಿ.ಉಮರ್ ಫಾರೂಕ್ ಅಧ್ಯಕ್ಷತೆ ವಹಿಸಿದ್ದರು. ಬ್ಲಡ್ ಹೆಲ್ಪ್‌ಲೈನ್ ಸಲಹೆಗಾರ ಮುಸ್ತಫಾ ಅಡ್ಡೂರು ದೆಮ್ಮೆಲೆ, ನಿರ್ವಾಹಕ ದಿಲ್ಶಾನ್ ಉಳ್ಳಾಲ್, ನಗರಸಭಾ ಸದಸ್ಯರಾದ ಯು.ಎ.ಇಸ್ಮಾಯಿಲ್, ಅಸ್ಗರ್ ಅಲಿ,‌ ನ ಮ್ಮೂರ ಧ್ವನಿ ಸೇವಾಸಂಘದ ಸದಸ್ಯರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಉಪ ಸ್ಥಿತರಿದ್ದರು.

ಶಮೀರ್ ಆರ್.ಕೆ. ಸ್ವಾಗತಿಸಿದರು. ಕೌನ್ಸಿಲರ್  ಅಯ್ಯೂಬ್ ಮಂಚಿಲ ವಂದಿಸಿದರು. ಅಶ್ರ ಫ್ ಸುಳ್ಯ ಕಾರ್ಯಕ್ರಮ ನಿರೂಪಿಸಿದರು.

Comments are closed.