ಕರಾವಳಿ

ನಾಳೆ ತುಳು ಲಿಪಿ ಬ್ರಹ್ಮ ಡಾ.ಪುಣಿಂಚತ್ತಾಯ ಜನ್ಮದಿನ: ಮಂಗಳೂರಿನಲ್ಲಿ ತುಳುಲಿಪಿ ದಿನ ಘೋಷಣೆ

Pinterest LinkedIn Tumblr

ಮಂಗಳೂರು ಅಕ್ಟೋಬರ್ 09 : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಅಕ್ಟೋಬರ್ 10 ರಂದು ಬೆಳಿಗ್ಗೆ 10 ಗಂಟೆಗೆ ಅಕಾಡೆಮಿಯ ತುಳುಭವನದ ಸಿರಿಚಾವಡಿಯಲ್ಲಿ ತುಳುಲಿಪಿಗೆ ಮಹತ್ತರ ಕೊಡುಗೆ ನೀಡಿದ ಪುಣಿಂಚತ್ತಾಯ ಅವರ 84ನೇ ಜನ್ಮದಿನವನ್ನು ತುಳುಲಿಪಿ ದಿನವೆಂದು ಘೋಷಣೆ ಮಾಡಲಾಗುವುದು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಐಲೇಸ ಬೆಂಗಳೂರು ಮತ್ತು ತುಳು ವರ್ಲ್ಡ್ ಮಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ ತುಳು ಭಾಷೆಗೆ ಲಿಪಿ ಇದೆ ಎಂದು ಪರಿಚಯಿಸಿದ ಬಹುಭಾಷಾ ಪಂಡಿತ ತುಳು ಸಂಶೋಧಕ ಡಾ. ವೆಂಕಟರಾಜ ಪುಣಿಂಚತ್ತಾಯ ಅವರ 84ನೇ ಜನ್ಮ ದಿನದಂದು ‘ಪು.ವೆಂ.ಪು. ನೂತ್ತೊಂಜಿ ನೆಂಪು ಹಾಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಹಾಗೂ ಈ ಕಾರ್ಯಕ್ರಮದಂದು ತುಳುಲಿಪಿ ವಿದ್ವಾಂಸರಾದ ಪ್ರೊ. ಎಸ್. ಎ. ಕೃಷ್ಣಯ್ಯ, ಡಾ. ರಾಧಾಕೃಷ್ಣ ಬೆಳ್ಳೂರು ಹಾಗೂ ಡಾ. ಎಸ್. ಆರ್. ವಿಘ್ನರಾಜ್ ಇವರನ್ನು ಸನ್ಮಾನಿಸಲಾಗುವುದು.

ಕಾರ್ಯಕ್ರಮದ ಉದ್ಟಾಟನೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ. ಎಸ್. ಎಡಪಡಿತ್ತಾಯ ಇವರು ನಡೆಸಿಕೊಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ. ಕತ್ತಲ್‌ಸಾರ್ ಅವರು ವಹಿಸಲಿದ್ದಾರೆ. ಖ್ಯಾತ ವಿದ್ವಾಂಸರಾದ ಡಾ| ಪಾದೇಕಲ್ಲು ವಿಷ್ಣುಭಟ್ ಮತ್ತು ಪ್ರಶಸ್ತಿ ವಿಜೇತ ಕಲಾವಿದ ಹಾಗೂ ಕೇರಳ ತುಳು ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಪಿ. ಎಸ್. ಪುಣಿಂಚತ್ತಾಯ ಅವರ ನೆನಪನ್ನು ಮಾಡಲಿದ್ದಾರೆ.

ಪು.ವೆಂಪು. ನೂತ್ತೊಂಜಿ ನೆಂಪು ಭಾವಗೀತೆಗಳ ಪುಸ್ತಕ ಸಮರ್ಪಣೆ: ತುಳುವಿಗೆ ಡಿಜಿಟಲ್ ಮಾಧ್ಯಮದ ಕೊರತೆಯನ್ನು ನೀಗಿಸಲು ವಿಶ್ವಾದ್ಯಂತ ನೆಲೆಸಿರುವ ತುಳುವರು ಒಟ್ಟು ಸೇರಿ ಪ್ರಾರಂಭಿಸಿದ ಐಲೇಸಾದ ಯೋಜನೆಯಂತೆ ಸುಮಾರು 101 ಕವಿಗಳು ಬರೆದ ತುಳು ಭಾವಗೀತೆಗಳ ಪುಸ್ತಕವನ್ನು ಬಿಡುಗಡೆಗೊಳಿಸಿ ಡಾ. ವೆಂಕಟರಾಜ ಪುಣಿಂಚತ್ತಾಯ ಇವರಿಗೆ ಸಮರ್ಪಿಸಲಾಗುವುದು. ಪುಸ್ತಕ ಬಿಡುಗಡೆಯನ್ನು ಡಾ. ಸಾಯಿಗೀತ, ಸಂಯೋಜಕರು ನಿಟ್ಟೆ ವಿಶ್ವವಿದ್ಯಾಲಯ ತುಳು ಅಧ್ಯಯನ ಕೇಂದ್ರ ಇವರು ನೆರವೇರಿಸಲಿರುವರು.

ಪು. ವೆಂ. ಪು ಸಮ್ಮಾನ್ ತುಳುವರ್ಲ್ಡ್ ಕೊಡಮಾಡಲ್ಪಡುವ ಪು. ವೆಂ. ಪು ಸಮ್ಮಾನ್‌ನನ್ನು ಖ್ಯಾತ ಗಾಯಕರಾದ ಕೃಷ್ಣ ಕಾರಂತ ಅವರಿಗೆ ಪ್ರದಾನ ಮಾಡಲಾಗುವುದು. ಪ್ರಶಸ್ತಿಯನ್ನು ತುಳುವರ್ಲ್ಡ್ ಗೌರವಾಧ್ಯಕ್ಷರಾದ ಹರಿಕೃಷ್ಣ ಪುನರೂರು ಅವರು ಪ್ರದಾನ ಮಾಡಲಿರುವರು.

ಮುಖ್ಯ ಅತಿಥಿಗಳಾಗಿ ಡಾ| ಮಾಧವ ಎಂ. ಕೆ ಸಂಯೋಜಕರು, ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠ, ಮಂಗಳೂರು ವಿಶ್ವವಿದ್ಯಾನಿಲಯ, ಬಿ. ಸುಬ್ಬಯ್ಯ ರೈ ಮಾಜಿ ಅಧ್ಯಕ್ಷರು ಕೇರಳ ತುಳು ಅಕಾಡೆಮಿ, ಡಾ. ಕೆ. ಎನ್. ಅಡಿಗ, ಮಣ್ಣ ಭಾಜನ ಖ್ಯಾತಿಯ ಸಾಹಿತಿ ಶಾಂತಾರಾಮ ವಿ. ಶೆಟ್ಟಿ, ಬೆಂಗಳೂರು, ಪ್ರವೀಣ್ ಕುಮಾರ್ ಕೊಡಿಯಲ್‌ಬೈಲು ಅಧ್ಯಕ್ಷರು ಜಾನಪದ ಪರಿಷತ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಪುರುಷೋತ್ತಮ ಚೇಂಡ್ಲಾ, ರಮೇಶ್ ಶೆಟ್ಟಿಗಾರ್ ಮಂಜೇಶ್ವರ, ವೀಣಾ ಟಿ. ಶೆಟ್ಟಿ, ಡೆಪ್ಯುಟಿ ಜನರಲ್ ಮ್ಯಾನೇಜರ್ ಎಂಆರ್‌ಪಿ‌ಎಲ್, ಎಸ್. ಆರ್. ಬಂಡಿಮಾರ್ ಪ್ರದಾನ ಸಂಪಾದಕರು ಟೈಮ್ಸ್ ಆಫ್ ಕುಡ್ಲ, ಪ್ರಭಾಕರ ಕಲ್ಲೂರಾಯ ಬನದಗದ್ದೆ, ವಿಜಯರಾಜ್ ಪುಣಿಂಚತ್ತಾಯ, ಮಂದಾರ ರಾಜೇಶ್ ಭಟ್, ಪ್ರಸಾದ್ ಚೇರ್ಕಾಡಿ, ಲಕ್ಷ್ಮೀಕಾಂತ್ ಟೋಟಲ್ ಕನ್ನಡ ಮೊದಲಾದವರು ಭಾಗವಹಿಸಲಿರುವರು.

ಪು.ವೆಂ.ಪು ಭಾವಗೀತೆಗಳ ಗಾಯನ ಕಾರ್ಯಕ್ರಮದಂಗವಾಗಿ ಪ್ರಶಸ್ತಿ ವಿಜೇತ ಚಲನಚಿತ್ರ ಹಿನ್ನೆಲೆ ಗಾಯಕರಾದ ರಮೇಶ್ವಂದ್ರ ತುಳುವ ಮಲ್ಲಿಗೆ ಖ್ಯಾತಿಯ ಕೃಷ್ಣ ಕಾರಂತ, ಪ್ರಮೋದ್ ಸಪ್ರೆ, ಸಂಗೀತ ಬಾಲಚಂದ್ರ, ಸುಧಾಕರ ಶೆಟ್ಟಿ ಬೆಂಗಳೂರು ಮೊದಲಾದವರು ಡಾ. ವೆಂಕಟರಾಜ ಪುಣಿಂಚತ್ತಾಯರು ಬರೆದ ಭಾವಗೀತೆಗಳಿಗೆ ರಾಗ ಸಂಯೋಜಿಸಿ ಹಾಡಲಿರುವರು.

ಕಾರ್ಯಕ್ರಮವು ಕೋವಿಡ್ ಮಾನದಂಡಗಳನುಸಾರ ನಡೆಯಲಿದ್ದು, ತುಳುವರ್ಲ್ಡ್ ಯುಟ್ಯೂಬ್ ಚಾನಲ್ ಮತ್ತು ಇತರ ಸಾಮಾಜಿಕ ಜಾಲತಾಣದಲ್ಲಿ ನೇರಪ್ರಸಾರಗೊಳ್ಳಲಿದೆ ಎಂದು ತುಳು ವರ್ಲ್ಡ್ ಅಧ್ಯಕ್ಷ ರಾಜೇಶ್‌ಕೃಷ್ಣ ಆಳ್ವ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ. ಕತ್ತಲ್‌ಸಾರ್ ಇವರು ತಿಳಿಸಿದ್ದಾರೆ.

Comments are closed.