ರಾಷ್ಟ್ರೀಯ

ಕೊರೋನಾ ಮನುಷ್ಯನ ಚರ್ಮದಲ್ಲಿ ಎಷ್ಟು ಸಮಯ ಇರುತ್ತದೆ ಗೊತ್ತಾ?

Pinterest LinkedIn Tumblr

ನವದೆಹಲಿ: ಕೊರೋನಾ ಮನುಷ್ಯನ ಚರ್ಮಕ್ಕೆ ಅಂಟಿಕೊಂಡರೆ 9 ಗಂಟೆಗಳ ಕಾಲ ಇರಬಲ್ಲದು, ಪ್ಲೋ ವೈರಸ್ ಗಳಿಗಿಂತ ಅಧಿಕ ಗಂಟೆಗಳವರೆಗೂ ಇರಬಲ್ಲದು ಎಂದು ಅಧ್ಯಯನ ತಿಳಿಸಿದೆ.

ಇದಕ್ಕೆ ವಿರುದ್ಧವಾಗಿ ಇನ್ ಪ್ಲೂಯೆಂಜಾ ಎ ವೈರಸ್ ಮನುಷ್ಯನ ಚರ್ಮದ ಮೇಲೆ ಸುಮಾರು ಎರಡು ಗಂಟೆಗಳ ಕಾಲ ಇರಲಿದೆ ಎಂದು ಜಪಾನ್ ನ ಕ್ಯೋಟೋ ಫ್ರಿಪೆಕ್ಟರಲ್ ಯೂನಿರ್ವಸಿಟಿ ಆಫ್ ಮೆಡಿಸನ್ ಸಂಶೋಧಕರು ಹೇಳಿದ್ದಾರೆ.

ಸಾಂಕ್ರಾಮಿಕ ರೋಗಗಳ ಕ್ಲಿನಿಕಲ್ ಜರ್ನಲ್ ನಲ್ಲಿ ಅಧ್ಯಯನ ಪ್ರಕಟಗೊಂಡಿದ್ದು, ಕೈಗಳನ್ನು ಸ್ವಚ್ಚಗೊಳಿಸುವ ಮೂಲಕ ಎರಡು ವೈರಸ್ ಗಳನ್ನು ವೇಗವಾಗಿ ನಿಷ್ಕ್ರೀಯಗೊಳಿಸಬಹುದು ಎಂಬುದು ಕಂಡುಬಂದಿದೆ.ಕೋವಿಡ್-19 ಹರಡುವುದನ್ನು ತಡೆಗಟ್ಟಲು ಕೈ ತೊಳೆಯುವ ಅಥವಾ ಸ್ಯಾನಿಟೈಸರ್ ಬಳಸುವ ಮಹತ್ವವನ್ನು ಈ ಸಂಶೋಧನೆಯು ಒತ್ತಿಹೇಳುತ್ತದೆ.

ಸ್ಟೇನ್‌ಲೆಸ್ ಸ್ಟೀಲ್, ಗಾಜುಗಳು ಮತ್ತು ಪ್ಲಾಸ್ಟಿಕ್‌ನಂತಹ ಇತರ ವಸ್ತುಗಳ ಮೇಲ್ಮೈಗಳಿಗಿಂತ ಚರ್ಮದ ಮೇಲ್ಮೈಗಳಲ್ಲಿ ಸಾರ್ಸ್- ಕೋವ್-2 ಮತ್ತು ಐಎವಿ ವೈರಸ್ ನ್ನು ಹೆಚ್ಚು ವೇಗವಾಗಿ ನಿಷ್ಕ್ರಿಯಗೊಳಿಸಬಹುದು ಎಂಬುದನ್ನು ಅಧ್ಯಯನ ಕಂಡುಹಿಡಿದಿದೆ.

Comments are closed.