ಕರಾವಳಿ

ಈ ಇಬ್ಬರು ನಟಿಯರಿಗೆ ಸದ್ಯಕ್ಕಿಲ್ಲ ಜಾಮೀನು : ಜೈಲಿನಲ್ಲೇ ಜನ್ಮದಿನ ಆಚರಿಸುವ ಪರಿಸ್ಥಿತಿ

Pinterest LinkedIn Tumblr

ಬೆಂಗಳೂರು,ಅಕ್ಟೋಬರ್.09; ಸ್ಯಾಂಡಲ್ ವುಡ್ ಮಾದಕ ವಸ್ತು ಪ್ರಕರಣದಲ್ಲಿ ಜೈಲುಪಾಲಾಗಿರುವ ಖ್ಯಾತ ನಟಿಮಣಿಗಳಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿಯವರ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆಯಾಗಿದೆ.

ಇಬ್ಬರೂ ನಟಿಯರ ನ್ಯಾಯಾಂಗ ಬಂಧನ ಅವಧಿಯನ್ನು ಅಕ್ಟೋಬರ್ 23ರವರೆಗೆ ವಿಸ್ತರಿಸಿ ಡಿಪಿಎಸ್ ವಿಶೇಷ ನ್ಯಾಯಾಲಯ ಆದೇಶಿಸಿದೆ. ಈ ಆದೇಶದೊಂದಿಗೆ ಇಬ್ಬರೂ ನಟಿಯರೂ ಸದ್ಯ ಜೈಲಿನಲ್ಲಿಯೇ ಇರಬೇಕಾದ ಪರಿಸ್ಥಿತಿ ಒದಗಿ ಬಂದಿದೆ.

ಇದೇ ವೇಳೆ ನಾಳೆ ಆಕ್ಟೋಬರ್ 10ರಂದು ಸಂಜನಾ ಗಲ್ರಾನಿಯವರ ಹುಟ್ಟುಹಬ್ಬವಿದ್ದು, ಜೈಲಿನಲ್ಲಿ ಬಂಧಿತಳಾಗಿರುವ ಸಂಜನಾ ಗಲ್ರಾನಿ ಈ ಸಂದರ್ಭದಲ್ಲಿ ಜೈಲಿನಿಂದ ಹೊರಬರಲು ನಡೆಸಿದ್ದ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದು, ಸದ್ಯ ಆಕೆ ಈ ಬಾರಿ ಜೈಲಿನಲ್ಲೇ ಹುಟ್ಟುಹಬ್ಬವನ್ನು ಆಚರಿಸುವ ಸ್ಥಿತಿ ಎದುರಾಗಿದೆ.

Comments are closed.