ಕರಾವಳಿ

ಅಯೋಧ್ಯೆ ತೀರ್ಪು ಸ್ವಾಗತಾರ್ಹ – ಕಟ್ಟಡ ಧ್ವಂಸ ಪ್ರಕರಣ ಪೂರ್ವ ನಿಯೋಜಿತ ಆಗಿರಲಿಲ್ಲ: ಶಾಸಕ ಕಾಮತ್

Pinterest LinkedIn Tumblr

 

 

ಮಂಗಳೂರು: ಅಯೋಧ್ಯೆಯ ವಿವಾದಿತ ಕಟ್ಟಡ ಧ್ವಂಸ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯದ ಬುಧವಾರ ಪ್ರಕಟಿಸಿರುವ ತೀರ್ಪು ಸ್ವಾಗತಾರ್ಹ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಪ್ರತಿಕ್ರಿಯಿಸಿದ್ದಾರೆ.

1992ರಲ್ಲಿ ನಡೆದಿದ್ದ ಕಟ್ಟಡ ಧ್ವಂಸ ಪ್ರಕರಣ ಪೂರ್ವ ನಿಯೋಜಿತ ಆಗಿರಲಿಲ್ಲ ಎಂಬ ವಾದಕ್ಕೆ ನ್ಯಾಯಾಲಯ ಮನ್ನಣೆ ನೀಡಿದೆ.

ಇದರಿಂದಾಗಿ ನಮ್ಮ ಮುಖಂಡರಾದ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾಭಾರತಿ ಸೇರಿದಂತೆ ಆರೋಪಿ ಸ್ಥಾನದಲ್ಲಿದ್ದ ಎಲ್ಲರನ್ನೂ ನ್ಯಾಯಾಲಯ ದೋಷಮುಕ್ತಗೊಳಿಸಿದೆ. ಇದು ಸತ್ಯಕ್ಕೆ ಸಂದ ಜಯ ಎಂದು ಶಾಸಕ ಕಾಮತ್ ಬಣ್ಣಿಸಿದ್ದಾರೆ.

Comments are closed.