ಕರಾವಳಿ

ಸತ್ಯಮೇವ ಜಯತೇ ಎಂಬುದು ಬಾಬ್ರಿ ಮಸೀದಿ ಧ್ವಂ”ಸ ಪ್ರಕರಣದ ತೀರ್ಪಿನಿಂದ ಸಾಬೀತಾಗಿದೆ: ಪೇಜಾವರ ಶ್ರೀ

Pinterest LinkedIn Tumblr

ಉಡುಪಿ : ಸಿಬಿಐ ವಿಶೇಷ ನ್ಯಾಯಾಲಯವು ಬಾಬ್ರಿ ಮಸೀದಿ ದ್ವಂ”ಸ ವಿಚಾರದಲ್ಲಿ 32 ಮಂದಿ ನಿರ್ದೋಷಿಗಳು ಎಂದು ತೀರ್ಪು ನೀಡಿದ್ದು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ಸ್ವಾಮೀಜಿ ಯವರು, ಸಿಬಿಐ ವಿಶೇಷ ನ್ಯಾಯಾಲಯವು ನೀಡಿದ ತೀರ್ಪಿನಿಂದ ನಾನು ಬಹಳ ಸಂತಸ ವ್ಯಕ್ತಪಡಿಸುತ್ತಿದ್ದೇನೆ. ಸಾಮಾಜಿಕ ಧಾರ್ಮಿಕ ನಾಯಕರನ್ನು ಸತ್ಯಕ್ಕೆ ದೂರವಾದ ಆ”ರೋಪಗಳಿಂದ ಒಬ್ಬರನ್ನು ಹತ್ತಿಕ್ಕುತ್ತೇವೆ ಎನ್ನುವ ಮಾತು ಈಗ ದೂರವಾಗಿದೆ. ಸತ್ಯ ಮೇವ ಜಯತೇ, ಎನ್ನುವ ಮಾತು ಬಾಬ್ರಿ ತೀರ್ಪಿನ ಬಳಿಕ ಮತ್ತೊಮ್ಮೆ ಸತ್ಯವಾಗಿದೆ. ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಉಳಿಗಾಲವಿಲ್ಲ ಎನ್ನುವ ಮಾತು ಮತ್ತೊಮ್ಮೆ ಸಾಬೀತಾಗಿದೆ. ಈ ತೀರ್ಪನ್ನು ನಾವು ಸಂತೋಷದಿಂದ ಸ್ವಾಗತಿಸುತ್ತೇವೆ ಎಂದರು.

ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಈ ಬಗ್ಗೆ ಪ್ರತಿಕ್ರಿಯಿಸಿ, ಬಾಬ್ರಿ ಮಸೀದಿ ದ್ವಂ”ಸ ಪ್ರ”ಕರಣದ ಬಗ್ಗೆ ಸಿಬಿಐ ವಿಶೇಷ ನ್ಯಾಯಾಲಯವು ನೀಡಿದ ಸೂಕ್ತವಾದ ತೀರ್ಪು ಕೊಟ್ಟಿದ್ದಕ್ಕೆ ನ್ಯಾಯಾಲಯವನ್ನು ಮತ್ತು ನ್ಯಾಯದೀಶರನ್ನು ತ್ಅಭಿನಂದಿಸುತ್ತೇವೆ. ಭಾರತದ ಇತಿಹಾಸದಲ್ಲಿ ಇದೊಂದು ಮಹತ್ವಪೂರ್ಣ ತೀರ್ಪು. ನ್ಯಾಯಲಯವು ಹೆಸರಿಗೆ ತಕ್ಕಂತೆ ತೀರ್ಪು ಕೊಟ್ಟಿದೆ. ನ್ಯಾಯಾಲಯವು ಮಂದಿರದ ಆಲಯ. ರಾಮದೇವರು ರಾಮರಾಜ್ಯದ ನ್ಯಾಯಧೀಶರು. ಅಲ್ಲಿ ಶ್ವಾನಕ್ಕೂ ನ್ಯಾಯ ಸಿಗುತ್ತದೆ ಎಂಬ ಉಲ್ಲೇಖವಿದೆ. ಶ್ರದ್ದಾ ಕೇಂದ್ರಗಳ ಬಗ್ಗೆ ಇರುವಂತಹ ದೂರುಗಳು ತಪ್ಪು ಅಭಿಪ್ರಾಯಗಳು ಒಂದೊಂದೆ ನಿವಾರಣೆಯಾಗುತ್ತಿದೆ. ದೇಶದ ಹೊರಗಡೆ ಇದರ ಬಗ್ಗೆ ತಪ್ಪು ಅಭಿಪ್ರಾಗಳಿತ್ತು. ನಾನು ಕೂಡ 25 ವರ್ಷಗಳಿಂದ ರಾಮಮಂದಿರದ ಚಳುವಳಿಯಲ್ಲಿ ಭಾಗವಹಿಸಿದ್ದೇನೆ. ರಾಮ ಭಕ್ತರಿಗೆಲ್ಲ ಈ ತೀರ್ಪಿನಿಂದ ಸಂತೋಷವಾಗಿದೆ. ರಾಮಭಕ್ತಿಯ ಉತ್ತೇಜನ ಆಗಿದೆ ಎಂದು ಭಾವಿಸುತ್ತೇನೆ. ಇದೇ ರೀತಿ ಇತರ ಶ್ರದ್ದಾ ಕೇಂದ್ರಗಳ ಮೇಲಿರುವ ಕಂಟಕಗಳು ದೂರವಾಗಲಿ. ಇದಕ್ಕೆ ನ್ಯಾಯಲಯವು ಸಹಮತ ಮತ್ತು ಪ್ರೋತ್ಸಾಹ ಕೊಡಬೇಕು ಎಂದು ಒತ್ತಾಯಿಸಿದರು.

ರಾಮ ಜನ್ಮಭೂಮಿಯ ಆಂದೋಲನದ ಪ್ರಮುಖ ಘಟ್ಟಕ್ಕೆ ಬಂದು, ಅಲ್ಲಿ ಭವ್ಯವಾದ ಶಾಶ್ವತವಾದ ರಾಮಮಂದಿರವನ್ನು ನೋಡಲು ಕಾತರರಾಗಿದ್ದು, ಶ್ರೀ ರಾಮದೇವರ ಅನುಗ್ರಹ ಪೂರ್ಣ ವಾಗಿರಲಿ‌ ಎಂದು ಹಾರೈಸುತ್ತೇವೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

Comments are closed.