
ಮಂಗಳೂರು : ಬ್ಯಾರಿ ಲಿಪಿ ಕಲಿಕೆಯ ಆಸಕ್ತಿಯನ್ನು ರೂಪಿಸಿಕೊಳ್ಳಬೇಕು ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ್ ಹೇಳಿದರು.
ಮಂಗಳೂರು ತಾಲೂಕು ಪಂಚಾಯತ್ ಹೊಸ ಕಟ್ಟಡದ ಮೂರನೇ ಮಹಡಿಯ ಸಭಾಭವನದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡಿದ್ದ ಬ್ಯಾರಿ ಲಿಪಿ ಕಲಿಕಾ ವಿಧಾನದ ಗ್ರಾಫಿಕ್ಸ್ ಡಿ.ವಿ.ಡಿ. ಬಿಡುಗಡೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ನಮ್ಮ ದೇಶ ವಿವಿಧತೆಯನ್ನು ಹೊಂದಿದೆ.ಭಾಷೆ ವೈಶಿಷ್ಟ್ಯತೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಬ್ಯಾರಿ ಭಾಷೆಗಳನ್ನು ಮಾತನಾಡುವವರಿದ್ದಾರೆ.ಬ್ಯಾರಿ ಭಾಷೆ, ಜನಾಂಗ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಬದುಕಿನ ಜೊತೆಗೆ ಧರ್ಮಾಚರಣೆಯನ್ನು ತೊಡಗಿಸಿಕೊಂಡಾಗ ಜೀವನ ಸುಂದರವಾಗುತ್ತದೆ.ಬ್ಯಾರಿ ಭಾಷೆಗೆ ಹೊಸದಾಗಿ ಲಿಪಿಯನ್ನು ಕಂಡು ಹಿಡಿಯಲಾಗಿದೆ ಎಂದರು.
ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಶೀರ್ ಬೈಕಂಪಾಡಿ ಇವರು ಬ್ಯಾರಿ ಲಿಪಿ ಸಾಮಾಜಿಕ ಜಾಲತಾಣದಲ್ಲಿ ಬಳಸಲು ಚಾಲನೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಬ್ಯಾರಿ ಲಿಪಿ ಗ್ರಾಫಿಕ್ ಡಿಸೈನರ್ ಸಚಿನ್ ,ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮ, ಬ್ಯಾರಿ ಲಿಪಿ ರಚನೆ, ಪರಿಶೀಲನೆ, ಸಂಶೋಧನಾ ಸಮಿತಿಯ ಸದಸ್ಯರು , ಮತ್ತಿತರರು ಉಪಸ್ಥಿತರಿದ್ಧರು.ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಶಂಶೀರ್ ಬುಡೋಳಿ ಕಾರ್ಯಕ್ರಮ ನಿರೂಪಿಸಿದರು.
Comments are closed.