ಬೆಂಗಳೂರು: ಡಾರ್ಕ್ ನೆಟ್ ಮೂಲಕ ನೆದರ್‌ಲ್ಯಾಂಡ್ ನಿಂದ ಡ್ರಗ್ಸ್ ಖರೀದಿಸಿ ಉಡುಪಿಯ ಸುತ್ತಮುತ್ತ ಮಾರಾಟ ಮಾಡುತ್ತಿದ್ದ ನಾಲ್ವರು ಡ್ರಗ್ ಪೆಡ್ಲರ್ ಗಳನ್ನು ಎನ್‌ಸಿಬಿ ಬಂಧಿಸಿದೆ.
ಕೇರಳದ ಕೆ. ಪ್ರಮೋದ್, ಫಾಹಿಮ್ ಹಾಗೂ ಕರ್ನಾಟಕ ಮೂಲದ ದ ಎ. ಹಶೀರ್ ಹಾಗೂ ಎಸ್.ಎಸ್. ಶೆಟ್ಟಿ ಬಂಧಿತ ಆರೋಪಿಗಳಾಗಿದ್ದು ಇವರಿಂದ 750 ಎಂಡಿಎಂಎ ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ.
ಕಳೆದ ಎರಡು ವರ್ಷಗಳಿಂದ ಈ ಡ್ರಗ್ಸ್ ವಹಿವಾಟು ನಡೆದಿತ್ತು. ಉಡುಪಿಯ ಮಣಿಪಾಲದ ವಿವಿಧ ಕಾಲೇಜುಗಳು ಹಾಗೂ ಪ್ರತಿಷ್ಟಿತ ಕ್ಲಬ್ ಗಳಲ್ಲಿ ಇದನ್ನು ಮಾರುತ್ತಿದ್ದರು ಎನ್ನಲಾಗಿದೆ.
ಡಾರ್ಕ್ ನೆಟ್ ಮೂಲಕ ಡ್ರಗ್ಸ್ ಗೆ ಆರ್ಡರ್ ಕೊಟ್ಟು ಬಿಟ್ ಕಾಯಿನ್ ಗಳ ಮೂಲಕ ಹಣ ಪಾವತಿಸಿ ಡ್ರಗ್ಸ್ ಪಡೆದುಕೊಂಡು ಅದನ್ನು ಉಡುಪಿಯ ಸುತ್ತಮುತ್ತಲ ಕಾಲೇಜು, ಕ್ಲಬ್ ಗಳಿಗೆ ಮಾರಾಟ ಮಾಡುವ ಬಗ್ಗೆ ಬಂಧಿತ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.
ಎನ್.ಸಿ.ಬಿ. ಯಿಂದ ಹೆಚ್ಚಿನ ತನಿಖೆ ಮುಂದುವರಿದಿದೆ.