ಗಲ್ಫ್

ಯುಎಇಯಲ್ಲಿ ಉಚಿತವಾಗಿ ಕನ್ನಡ ಕಲಿಯಲು ಸುವರ್ಣಾವಕಾಶ ನೀಡುತ್ತಿರುವ “ಕನ್ನಡ ಪಾಠ ಶಾಲೆ ದುಬೈ”; ನವೆಂಬರ್ 6 ರಿಂದ ತರಗತಿಗಳು ಆರಂಭ

Pinterest LinkedIn Tumblr

ಕನ್ನಡ ಮಿತ್ರರು ಯು.ಎ.ಇ ದುಬೈನಲ್ಲಿ ಸ್ಥಾಪಿತವಾಗಿರುವ ಒಂದು ಕನ್ನಡ ಪರ ಸಂಘಟನೆಯಾಗಿದ್ದು, ಕರ್ನಾಟಕದ ಭಾಷೆ, ಕಲೆ ಮತ್ತು ಸಂಸ್ಕೃತಿಯನ್ನು ವಿದೇಶೀ ನೆಲದಲ್ಲಿ ಉತ್ತೇಜಿಸಿ ಸಂರಕ್ಷಿಸುತ್ತಾ ಬಂದಿದ್ದು, ಪ್ರಮುಖವಾಗಿ ಕನ್ನಡ ಸಾಕ್ಷರತಾ ಅಂದೋಲನದ ರುವಾರಿಯಾಗಿ ಸೇವೆಸಲ್ಲಿಸುತ್ತಿದೆ.

ಕನ್ನಡ ಮಿತ್ರರು ಯು.ಎ.ಇ 2014ರಿಂದ ನಡೆಸುತ್ತಾ ಬಂದಿರುವ ಕನ್ನಡ ಪಾಠ ಶಾಲೆ ದುಬೈ ಇಲ್ಲಿನ ಅನಿವಾಸಿ ಭಾರತೀಯ ಮಕ್ಕಳಿಗೆ ಉಚಿತವಾಗಿ ಕನ್ನಡ ಬೋದಿಸುತ್ತಿದ್ದು , ಕನ್ನಡ ತರಗತಿಗಳನ್ನು ಕ್ರಮಬದ್ಧವಾಗಿ ನಡೆಸಿತ್ತಿರುವ ವಿಶ್ವದಲ್ಲಿಯೇ ಅತಿದೊಡ್ಡ ವಿದೇಶೀ ಕನ್ನಡ ಕಲಿಕಾ ಕೇಂದ್ರವಾಗಿದೆ.

ಕಳೆದ ಶೈಕ್ಷಣಿಕ ವರ್ಷ 210 ಮಕ್ಕಳಿಗೆ ಯಶಸ್ವಿಯಾಗಿ ಕನ್ನಡ ಬೋಧನೆ ಪೂರ್ಣಗೋಂಡಿದ್ದು , ಮುಂಬರುವ ಸಾಲಿನ ಕಲಿಕೆಯನ್ನು ನೇರಜಾಲದ ಮೂಲಕ ಪರೋಕ್ಷ ಬೋಧನಾ ಕ್ರಮದಲ್ಲಿ ನಡೆಸಲಾಗುವುದು. ತರಗತಿಗಳು ನವೆಂಬರ್ 6 ರಿಂದ ಆರಂಭಗೊಳ್ಲಲಿವೆ ಎಂದು ಕನ್ನಡ ಮಿತ್ರರು ಯು.ಎ.ಇ ಅಧ್ಯಕ್ಷರಾದ ಶ್ರೀ ಶಶಿಧರ್ ನಾಗರಾಜಪ್ಪನವರು ಮಾಹಿತಿ ನೀಡಿದರು.

ಕಳೆದ ಸಾಲಿನ ವಿಧ್ಯಾರ್ಥಿಗಳಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ, ಆರು ತಿಂಗಳುಗಳ ಕಾಲ ಪ್ರತೀ ಶುಕ್ರವಾರ ಕನ್ನಡ ಕಲಿಕಾ ತರಗತಿಗಳು ನಡೆಯಲಿದ್ದು, ಸಂಪೂರ್ಣ ಉಚಿತ ಎಂದು ಉಪಾಧ್ಯಕ್ಷ ಶ್ರೀ ಸಿದ್ದಲಿಂಗೇಶ್ ರೇವಪ್ಪ ತಿಳಿಸಿದ್ದಾರೆ.

ಯು.ಎ.ಇ ಯಲ್ಲಿ ವಾಸಿಸುತ್ತಿರುವ ಮತ್ತು 6ರಿಂದ 16 ವರ್ಷ ವಯೋಮಾನದಲ್ಲಿರುವ ಮಕ್ಕಳಿಗೆ ಪ್ರವೇಶ ನೀಡಲಾಗುವುದು. ಆಸಕ್ತರು ಮಕ್ಕಳ ವಿವರಗಳನ್ನು ಶಾಲೆಯ ವೆಬ್ ಸೈಟ್ ನಲ್ಲಿ ಈ ಕೆಳಗಿನ ಲಿಂಕ್ ಮೂಲಕ ನೊಂದಾಯಿಸಲು ಕೋರಲಾಗಿದೆ.

ನೋಂದಣೆಗಾಗಿ ಈ ಕೆಳಗಿನ ಲಿಂಕ್ ಒತ್ತಿ…

http://registration.kannadashaale.com/signup.php

Comments are closed.