ಕರಾವಳಿ

ಈ ಬಾರಿ ವಿಶಿಷ್ಟ ರೀತಿಯಲ್ಲಿ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ (ಅಮ್ಮ) ಯವರ ಜನ್ಮ ದಿನಾಚರಣೆ

Pinterest LinkedIn Tumblr

ಮಂಗಳೂರು, ಸೆಪ್ಟಂಬರ್.23: ವಿಶ್ವದ ಅಗ್ರಗಣ್ಯ ಆಧ್ಯಾತ್ಮಿಕ ನೇತಾರರಲ್ಲೋರ್ವರಾದ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ- ಅಮ್ಮ ನವರ ಜನ್ಮದಿನಾಚರಣೆಯನ್ನು ಸೆಪ್ಟೆಂಬರ್ 27ರಂದು ಅಮೃತಪುರಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ.

ಅಮ್ಮನವರು ಈ ಬಾರಿ ತಮ್ಮ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಮಾಡಲು ಆಸಕ್ತಿ ಹೊಂದಿರದ ಹಿನ್ನೆಲೆಯಲ್ಲಿ ಅಮ್ಮನ ಆಶ್ರಮದ ಶಿಷ್ಯರು, ಭಕ್ತರ ಆಶಯದಂತೆ ಸಭೆ ಸೇರಿ ಈ ಬಾರಿಯ ಅಮ್ಮನ ಜನ್ಮದಿನೋತ್ಸವವನ್ನು ಇಡೀ ದಿನ ನಿಃಸ್ವಾರ್ಥ ಸೇವೆ ಹಾಗೂ ವಿಶ್ವಶಾಂತಿಗಾಗಿ ಪ್ರಾರ್ಥಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಲು ನಿರ್ಧರಿಸಿರುತ್ತಾರೆ.

ಪ್ರಸ್ತುತ ಇಡೀ ಜಗತ್ತು ಪ್ರೀತಿ, ಶಾಂತಿ ಮತ್ತು ಸುರಕ್ಷತೆಯನ್ನು ಅನುಭವಿಸಲು ಸುರಂಗದೊಳಗಿನ ಅಂಧಕಾರದಿಂದ ಹೊರಬರಲು ಸುರಂಗದ ಕೊನೆಯಲ್ಲಿರುವ ಬೆಳಕನ್ನು ನೋಡಲು ಬಯಸುವಂತೆ ಕಾತರದಿಂದ ಕಾಯುತ್ತಿದೆ.

ಈ ಸೆಪ್ಟೆಂಬರ್ 27ರಂದು ಪ್ರಪಂಚದಾದ್ಯಂತ ನೆಲೆಸಿರುವ ಅಮ್ಮನ ಭಕ್ತರು ಒಂದಾಗಿ ಸೇರಲು ಮತ್ತು ಪ್ರಕೃತಿ ಮಾತೆಯ ಕ್ಷಮೆ, ಶಾಂತಿ ಹಾಗೂ ಎಲ್ಲಾ ಸೃಷ್ಟಿಗೆ ಗುಣಮುಖರಾಗಲು ಬಯಸುವ ಮತ್ತೊಂದು ಅವಕಾಶ ಒದಗಿಸಿದೆ.

” ಒಂದು ಜಗತ್ತು, ಒಂದು ಪ್ರಾರ್ಥನೆ ” ಎಂಬ ಧ್ಯೇಯ ವಾಕ್ಯ ದೊಂದಿಗೆ ಈ ಬಾರಿ ಅವರವರ ಮನೆಗಳಲ್ಲಿ ಕುಳಿತು ಸಾಧನೆ ಮಾಡುವ ಮೂಲಕ ಅಮ್ಮನ ಜನ್ಮದಿನ ಆಚರಿಸಲು ನಿರ್ಧರಿಸಲಾಗಿದೆ.

ಭಕ್ತಿಯ ಸಾಧನೆಯ ಸಮಯ ಬೆಳಗ್ಗೆ 6.00 ರಿಂದ ಮಧ್ಯಾಹ್ನ 1.00 ಗಂಟೆ. ಅಮೃತಪುರಿ ಹಾಗೂ ಭಕ್ತರು ಮನೆಗಳಲ್ಲಿ ಅಂದು ಧ್ಯಾನ, ಜಪ, ಗುರುಪಾದುಕಾಪೂಜೆ, “ಲೋಕಾಃ ಸಮಸ್ತಾಃ ಸುಖಿನೋ ಭವಂತು” ( 108 ಬಾರಿ) ,ಮೃತ್ಯುಂಜಯ ಮಂತ್ರ ( 108 ಬಾರಿ), ಅದೇರೀತಿ ಪ್ರಕೃತಿಯಲ್ಲಿ ಕುಳಿತು ಜಪ, ಶ್ವೇತ ಪುಷ್ಪ ಶಾಂತಿ ಧ್ಯಾನ, ಜಾಗೃತ ನಡಿಗೆಯೊಂದಿಗೆ ಜಪ, ಭಜನೆ ಮೊದಲಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಮಾತಾ ಅಮೃತಾನಂದಮಯಿ ದೇವಿ- ಅಮ್ಮ ನವರ ಮಠದ ಪ್ರಕಟಣೆ ತಿಳಿಸಿದೆ.

ಅಮ್ಮನ ಭಕ್ತರು ಅವರವರ ಮನೆಗಳಲ್ಲಿ ಕುಳಿತು ಲೋಕ ಕಲ್ಯಾಣಾರ್ಥ ಏಕಕಾಲದಲ್ಲಿ ಜರುಗುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ.

Comments are closed.