ಕರಾವಳಿ

ಪ್ರಧಾನಿ ಮೋದಿಯವರ ಗುಣಗಾನ ಮಾಡಿದ ಬಿ.ಎಸ್.ವೈ : ಏನು ಹೇಳಿದರು ನೋಡಿ!

Pinterest LinkedIn Tumblr

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಭಾರತಕ್ಕೆ ಜಾಗತಿಕ ಮನ್ನಣೆ ತಂದು ಕೊಟ್ಟ, ಜನ ಮೆಚ್ಚಿದ ಮಹಾನ್ ನಾಯಕ್ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೋದಿಯವರ ಗುಣಗಾನ ಮಾಡಿದ್ದಾರೆ.

ಸೇವಾ ಸಪ್ತಾಹ ನಿಮಿತ್ತ ಭಾನುವಾರ ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿದ್ದ ನರೇಂದ್ರ ಮೋದಿ ವ್ಯಕ್ತಿ, ವ್ಯಕ್ತಿತ್ವ, ಜೀವನ ಕುರಿತ ವರ್ಚುವಲ್ ರ್‍ಯಾಲಿಯ ಅಧ್ಯಕ್ಷತೆ ವಹಿಸಿದ್ದ ಅವರು ಬೆಂಗಳೂರಿನ ತಮ್ಮ ಕಾವೇರಿ ನಿವಾಸದಿಂದಲೇ ಮಾತನಾಡಿ ಮೋದಿಯವರ ಗುಣಗಾನ ಮಾಡಿದ್ದಾರೆ.

ನಿಸ್ವಾರ್ಥ ಸೇವೆ, ದಕ್ಷ, ಸಮರ್ಥ ಆಡಳಿತ, ಅಭಿವೃದ್ಧಿಯ ದೂರದೃಷ್ಟಿ, ಸ್ಪಷ್ಟ ವಿದೇಶಾಂಗ ನೀತಿ, ಅನ್ಯ ದೇಶಗಳೊಂದಿಗೆ ಸ್ನೇಹದ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾರತಕ್ಕೆ ಜಾಗತಿಕ ಮನ್ನಣೆ ತಂದು ಕೊಟ್ಟಿದ್ದು, ಜನ ಮೆಚ್ಚಿದ ಮಹಾನ್ ನಾಯಕ. ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ವ್ಯಕ್ತಿಯಲ್ಲ, ರಾಜರ್ಷಿ, ದೇವಮಾನವ ಎಂದು ಈ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದಾರೆ.

ದೆಹಲಿಯಲ್ಲಿ ಭೇಟಿಯಾದ ವೇಳೆ ರಾಜ್ಯ ಹಾಗೂ ಬೆಂಗಳೂರು ಅಭಿವೃದ್ಧಿ ಬಗ್ಗೆ ಅವರದ್ದೇ ಆದ ಕಲ್ಪನೆಗಳು ಇರುವುದನ್ನು ಕೇಳಿ ಅಚ್ಚರಿಯಾಯಿತು. ಮೋದಿ ಒಬ್ಬ ವ್ಯಕ್ತಿಯಲ್ಲ ರಾಜರ್ಷಿ, ದೇವಮಾನವ ಎಂದು ಬಿಎಸ್ ವೈ ಹೊಗಳಿ, ಅವರು ನೂರು ಕಾಲ ಬಾಳಲೆಂದು ಹಾರೈಸಿದರು.

ಆತ್ಮನಿರ್ಭರ್ ಭಾರತ ಯೋಜನೆಯ ಪರಿಕಲ್ಪನೆಯು ಅದರ ಭಾಗವಾಗಿದೆ. ದೇಶದ ಯುವಶಕ್ತಿ ಬಗ್ಗೆ ಅಪಾರ ವಿಶ್ವಾಸವಿರಿಸಿ, ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ, ಸ್ಟಾರ್ಟಪ್ ಇಂಡಿಯಾದಂತಹ ಯೋಜನೆ ಗಳನ್ನು ರೂಪಿಸಿದರು. ಮತ್ತೊಂದು ಅವಧಿಗೆ ಮೋದಿಯವರು ಪ್ರಧಾನಿಯಾದರೆ ಅಭಿವೃದ್ಧಿಯಲ್ಲಿ ಭಾರತ ಇಡೀ ವಿಶ್ವದಲ್ಲಿ ಅಗ್ರ ಸ್ಥಾನಿಯಾಗುವುದು ನಿಶ್ಚಿತ ಎಂದು ಮುಖ್ಯಮಂತ್ರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Comments are closed.