ಮಂಗಳೂರು ಆಗಸ್ಟ್ 30: ಕೊವೀಡ್ – 19 ಹಿನ್ನೆಲೆಯಲ್ಲಿ ನ್ಯಾಯಾಲದಲ್ಲಿ ಯಾವುದೇ ಪ್ರಕರಣ ಗಳನ್ನು ಇತ್ಯರ್ಥಗೊಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರತೀ ತಾಲೂಕು ಮತ್ತು ಜಿಲ್ಲಾ ನ್ಯಾಯಾಲಯದಲ್ಲಿ ಸೆಪ್ಪೆಂಬರ್ 19 ರಂದು ಬಾಕಿ ಇರುವ ಪ್ರಕರಣಗಳನ್ನು ಇ-ಲೋಕ್ ಅದಾಲತ್ ಮೂಲಕ ಇತ್ಯರ್ಥಪಡಿಸಲಾಗುವುದು ಎಂದು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಓಕಾ ಅವರು ತಿಳಿಸಿದ್ದಾರೆ.
ಅವರು ದ.ಕ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ವಿಡಿಯೋ ಕಾನ್ಪರೆನ್ಸ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ ನ್ಯಾಯಾಲದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಸಾರ್ವಜನಿಕರಿಗೆ ನ್ಯಾಯಾಲಯವು ಬಹು ದೊಡ್ಡ ಅವಕಾಶವನ್ನು ನೀಡಿದೆ. ಜನರು ಇ-ಲೋಕ್ ಅದಾಲತ್ ಅನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ತಮ್ಮ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದು ಸಾರ್ವಜನಿಕರಿಗೆ ಸಂದೇಶ ನೀಡಿದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯಕಾರಿ ಅಧ್ಯಕ್ಷ ನ್ಯಾ. ಅರವಿಂದ ಕುಮಾರ್ ಮಾತನಾಡಿ, ಇ-ಲೋಕ್ ಅದಾಲತ್‍ನಲ್ಲಿ ಚೆಕ್ ವಂಚನೆ, ಆರ್ಥಿಕ ವಸೂಲಾತಿ ಪ್ರಕರಣ, ಕಾರ್ಮಿಕರ ಇನ್ಸೂರೆನ್ಸ್, ರಾಜಿಯಾಗುವ ಕುಟುಂಬ ಸಮಸ್ಯೆ, ಅಪಘಾತ ಪ್ರಕರಣ, ಮೋಟಾರು ಅಪಘಾತ ಪರಿಹಾರ ಪ್ರಕರಣ, ಭೂ ವಂಚನೆ ಪ್ರಕರಣಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಈ ಅದಾಲತ್‍ನಲ್ಲಿ ಆನ್‍ಲೈನ್ ಮುಖಾಂತರ ಕೂಡ ಭಾಗವಹಿಸಬಹುದಾಗಿದೆ. ಕಕ್ಷಿದಾರರು ತಮ್ಮ ವಕೀಲ ಕಚೇರಿಯಿಂದ ಅಥವಾ ತಮ್ಮ ಮನೆಯಿಂದ ಭಾಗವಹಿಸಲು ಅವಕಾಶ ನೀಡಲಾಗಿದೆ. ಕೇಸ್ ವಿಚಾರಣೆ ಯನ್ನು ನಡೆಸುವ ಸಂದರ್ಭದಲ್ಲಿ ಅಗತ್ಯವಾದ ದಾಖಲೆಯನ್ನು ಸಿದ್ಧಪಡಿಸಿಕೊಂಡಿರಬೇಕೆಂದು ಸೂಚಿಸಿದರು. ರಾಜಿ ಮಾಡಿಕೊಳ್ಳುವ ಪ್ರಕರಣಗಳು ಇದ್ದಲ್ಲಿ ಎರಡು ಕಡೆಯಿಂದ ಸಮ್ಮತಿ ಇರಬೇಕು ಎಂದು ಅವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2000 ಪ್ರಕರಣವನ್ನು ಇ-ಅದಾಲತ್ ಮೂಲಕ ಇತ್ಯರ್ಥಗೊಳಿಸುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಒಟ್ಟು 52 ಸಾವಿರ ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದು , 15 ಸಾವಿರ ಪ್ರಕರಣಗಳನ್ನು ಲೋಕ ಅದಾಲತ್‍ನಲ್ಲಿ ಇತ್ಯರ್ಥಗೊಳಿಸಲಾಗುವುದು ಎಂದು ದ.ಕ. ಜಿಲ್ಲಾ ಸತ್ರ ನ್ಯಾಯಾಧೀಶ ಮುರಳೀಧರ ಪೈ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ದ ಸದಸ್ಯ ಕಾರ್ಯದರ್ಶಿ ಎ.ಜೆ. ಶಿಲ್ಪಾ ಉಪಸ್ಥಿತರಿದ್ದರು.
Comments are closed.