ಉಡುಪಿ: ಜಿಲ್ಲೆಯ ಕಟಪಾಡಿಯ ಮಟ್ಟು ಕಡಲ ತೀರದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಯ ನಾಡದೋಣಿ ಕೈರಂಫಣಿ ಬಲೆಗೆ ಹೇರಳ ಪ್ರಮಾಣದ ಮೀನು ಸಿಕ್ಕಿದ್ದು, ಬಲೆಯಿಂದ ಹೆಚ್ಚಾಗಿ ಉಳಿದ ಮೀನುಗಳನ್ನು ಸಮುದ್ರ ತೀರದಲ್ಲಿಯೇ ಮೀನುಗಾರರು ಕಳೆದ ಎರಡು ದಿನಗಳಿಂದ ಬಿಟ್ಟಿದ್ದಾರೆ.

ಎರ್ಮಾಳು ಕೈರಂಫಣಿ ಫಂಡ್‍ನವರು ಬೀಸಿದ ಬಲೆಗೆ ಹೇರಳ ಮೀನು ಬಿದ್ದಿದ್ದು, ಬಂಗುಡೆ, ಬೊಳಿಂಜಿರ್, ಕಲ್ಲೂರು, ಬೂತಾಯಿ, ಎಟ್ಟಿ ಮೊದಲಾದ ವಿವಿಧ ಜಾತಿಯ ಮೀನುಗಳು ಬಲೆಯಲ್ಲಿ ಸಿಕ್ಕಿವೆ. ಭಾರೀ ಪ್ರಮಾಣದ ಮೀನುಗಳನ್ನು ಎಳೆಯಲಾಗದೆ ಬಲೆಯಿಂದ ಹೊರಕ್ಕೆ ಬಿದ್ದು, ಸಾರ್ವಜನಿಕರ ಪಾಲಾಗಿತ್ತು. ಸಮೀಪದ ಮೀನು ಪ್ರಿಯರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಮೀನುಗಳನ್ನು ಮನೆಗೆ ಕೊಂಡೊಯ್ದರು.
Comments are closed.