ಮಂಗಳೂರು : ಮೂಲ್ಕಿ ಠಾಣಾ ವ್ಯಾಪ್ತಿಯ ಕೊಲ್ನಾಡು ಬಳಿಯ ಬೆಳ್ಳಾಯರು ಚಂದ್ರ ಮೌಳೀಶ್ವರ ದೇವಸ್ಥಾನದ ಪಕ್ಕದ ಸಣ್ಣ ತೋಡಿನಲ್ಲಿ ಸ್ಥಳೀಯ ಯುವಕನ ಮೃತದೇಹ ಶಂಕಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು, ಈ ಸಾವಿನ ಬಗ್ಗೆ ಸಂಶಯ ವ್ಯಕ್ತವಾಗಿದೆ.
ಮೃತನನ್ನು ಗಿರಿಜಾ ಎಂಬವರ ಪುತ್ರ ಸಾಗರ್ ಯಾನೆ ಮುನ್ನ(20) ಎಂದು ಗುರುತಿಸಲಾಗಿದೆ.
ಆರ್ಥಿಕವಾಗಿ ತೀರಾ ಹಿಂದುಳಿದ ಕುಟುಂಬಕ್ಕೆ ಸೇರಿದ ಸಾಗರ್, ಗಿರಿಜಾ ಎಂಬವರ ಇಬ್ಬರು ಮಕ್ಕಳಲ್ಲಿ ಏಕೈಕ ಪುತ್ರನಾಗಿದ್ದು ಮನೆಗೆ ಆಸರೆಯಾಗಿದ್ದ.
ಸಂಜೆ ಮನೆ ಸಮೀಪದ ತೋಡಿನಲ್ಲಿ ನಡೆದುಕೊಂಡು ಹೋಗುವವವರಿಗೆ ನೀರಿನಲ್ಲಿ ಮೃತದೇಹ ತೇಲುತ್ತಿದ್ದುದು ಪತ್ತೆಯಾಗಿದೆ. ಪಾದದವರೆಗೆ ಮಾತ್ರ ನೀರು ಇದ್ದು ಸಾವಿನಲ್ಲಿ ಸಂಶಯ ವ್ಯಕ್ತವಾಗಿದೆ. ಸ್ನೇಹಿತರು ಮಧ್ಯಾಹ್ನದ ತನಕ ಜೊತೆಗೆ ಇದ್ದರೆನ್ನಲಾಗಿದ್ದು ಹೆಚ್ಚಿನ ಮಾಹಿತಿ ತನಿಖೆಯಿಂದ ಹೊರಬರಬೇಕಿದೆ.
Comments are closed.