ಕರಾವಳಿ

ಮಂಗಳೂರು ಸೇರಿದಂತೆ ದ.ಕ. ಜಿಲ್ಲೆಯ ಎಲ್ಲಾ ರಿಕ್ರಿಯೇಶನ್ ಕ್ಲಬ್‌ಗಳನ್ನು ಮುಚ್ಚಲು ಆದೇಶ

Pinterest LinkedIn Tumblr

ಮಂಗಳೂರು, ಆಗಸ್ಟ್. 29: ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿ ರುವ ಎಲ್ಲಾ ರಿಕ್ರಿಯೇಶನ್ ( ಜುಗಾರಿ, ಸ್ಕೀಲ್ ಗೇಮ್, ಇನ್ನಿತರ ಗೇಮ್) ಕ್ಲಬ್‌ಗಳನ್ನು ಮುಚ್ಚಲು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಆದೇಶಿಸಿದ್ದಾರೆ.

ರಿಕ್ರಿಯೇಶನ್ ಕ್ಲಬ್‌ಗಳಲ್ಲಿ ಸುರಕ್ಷಿತ ಅಂತರ ಪಾಲನೆಯಾಗುತ್ತಿಲ್ಲ ಎಂಬ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿಯ ವರದಿಯ ಆಧಾರದ ಮೇಲೆ ಮುಂದಿನ ಸೂಚನೆಯವರೆಗೆ ಎಲ್ಲಾ ರಿಕ್ರಿಯೇಶನ್ ಕ್ಲಬ್‌ಗಳನ್ನು ಮುಚ್ಚುವಂತೆ ದ.ಕ. ಜಿಲ್ಲಾಧಿಕಾರಿಯವರು ಅದೇಶ ಹೊರಡಿಸಿದ್ದಾರೆ.

ಬಂಟ್ವಾಳ, ಬಿ.ಸಿ.ರೋಡ್, ಮೆಲ್ಕಾರ್, ಸಿದ್ಧಕಟ್ಟೆ, ಉಜಿರೆ, ಬೆಳ್ತಂಗಡಿ, ವೇಣೂರು, ಮಡಂತ್ಯಾರು, ಪುತ್ತೂರು, ನೆಲ್ಯಾಡಿಯ ರಿಕ್ರಿಯೇಶನ್ ಕ್ಲಬ್‌ಗಳನ್ನು ಮುಚ್ಚಲು ಆದೇಶಿಸಿದ್ದಾರೆ. ಈ ಕ್ಲಬ್‌ಗಳಲ್ಲಿ ಇಸ್ಪೀಟ್ ಕಾಡ್ಗರ್ಳನ್ನು ಬಳಸಿ ಆಟವಾಡಲಾಗುತ್ತಿದೆ. ಅವಾಗ ಸುರಕ್ಷಿತ ಅಂತರವಿರುವುದಿಲ್ಲ.

ಅಲ್ಲದೆ ಕಾರ್ಡ್‌ಗಳ ಮೂಲಕ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Comments are closed.