ಕುಂದಾಪುರ: ಭಾನುವಾರ ಬೈಂದೂರು ತಾಲೂಕಿನ ಕೊಡೇರಿಯಲ್ಲಿ ನಡೆದ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ.


ಭಾನುವಾರ ಮಧ್ಯಾಹ್ನ ಘಟನೆ ನಡೆದಿದೆ. ಸಾಗರ ಶ್ರೀ ಹೆಸರಿನ ನಾಡಾ ದೋಣಿ ಮೀನುಗಾರಿಕೆಗೆ ತೆರಳಿ ವಾಪಾಸ್ ಆಗುವಾಗ ಘಟನೆ ನಡೆದಿತ್ತು. ನಾಪತ್ತೆಯಾದ ಮೀನುಗಾರರ ಹುಡುಕಾಟದಲ್ಲಿ ಸ್ಥಳೀಯ ಮೀನುಗಾರರು, ಕರಾವಳಿ ಕಾವಲು ಪಡೆ ಪೊಲೀಸರು ಬಹಳಷ್ಟು ಶ್ರಮಿಸಿದ್ದರು. ಸೋಮವಾರ ಬೆಳಿಗ್ಗೆ ಕಿರಿಮಂಜೇಶ್ವರ ಹೊಸಹಿತ್ಲು ಬಳಿ ಕಡಲಕಿನಾರೆಯಲ್ಲಿ ಮೀನುಗಾರ ನಾಗ ಎನ್ನುವರ ಮೃತದೇಹ ಪತ್ತೆಯಾಗಿತ್ತು. ಸೋಮವಾರ ಮಧ್ಯಾಹ್ನದ ಬಳಿಕ ಮಂಗಳೂರಿನಿಂದ ಕೋಸ್ಟ್ ಗಾರ್ಡ್ ಬೋಟ್ ಆಗಮಿಸಿ ನಾಪತ್ತೆಯಾದವರ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದು ಸೋಮವಾರ ರಾತ್ರಿ ವೇಳೆ ಮೊದಲಿಗೆ ಶೇಖರ್ ಖಾರ್ವಿ ಹಾಗೂ ಲಕ್ಷ್ಮಣ ಖಾರ್ವಿ ಅವರ ಮೃತದೇಹ ಪತ್ತೆಯಾಗಿದ್ದು ಒಂದಷ್ಟು ಗಂಟೆಯಲ್ಲೆ ಮಂಜುನಾಥ್ ಖಾರ್ವಿ ಮೃತದೇಹ ಕೂಡ ಪತ್ತೆಯಾಗಿದೆ.
Comments are closed.