ಮಂಗಳೂರು : ಕೇಂದ್ರ ಸರಕಾರ ಹೊರಡಿಸಿರುವ ರಾಷ್ಟ್ರೀಯ ನೂತನ ಶಿಕ್ಷಣ ನೀತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಸ್ವಾಗತಿಸುತ್ತದೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.
ಶಿಕ್ಷಣ ನೀತಿಯು ವಿಶೇಷವಾಗಿ ಮಾತೃ ಭಾಷೆ, ರಾಜ್ಯಭಾಷೆಯಲ್ಲಿ ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣದಲ್ಲಿ ಪ್ರಥಮ ಅಧ್ಯತೆಯೊಂದಿಗೆ ಅಲ್ಲದೆ ವೃತ್ತಿಪರ ಕೌಶಲ್ಯಕ್ಕೂ ಆಧ್ಯತೆ ನೀಡುವುದರಿಂದ ಇದು ಭಾರತದ ಸಾಂಸ್ಕೃತಿಕ ಜೀವನ ಧರ್ಮವನ್ನು ಮಾತೃ ಸಂಸ್ಕೃತಿಯನ್ನು ಉಳಿಸುವಲ್ಲಿ ಸಹಕಾರಿಯಾಗಿದೆ.
ಪ್ರಾಥಮಿಕ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಮಾತೃ ಭಾಷೆ, ರಾಜ್ಯಭಾಷೆಯ ಆಧ್ಯತೆಯ ಚಿಂತನೆಯು ಶೀಘ್ರಾತಿ ಶೀಘ್ರ ಕಾನೂನು ರೀತ್ಯಾ ಅನುಷ್ಠಾನಗೊಳ್ಳಲಿ ಎಂದು ಕಲ್ಕೂರ ಹೇಳಿದ್ದಾರೆ.
Comments are closed.