ಮಂಗಳೂರು : ಆಗಸ್ಟ್ 05ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮ ಮಂದಿರದ ಭೂಮಿಪೂಜೆಯು ಒಂದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ನಮ್ಮ ದೇಶದ ಪ್ರಧಾನ ಮಂತ್ರಿಗಳೇ ಖುದ್ದು ಭಾಗವಹಿಸಲಿದ್ದಾರೆ.
ರಾಷ್ಟ್ರೀಯ ಕಾರ್ಯಕ್ರಮ ನಡೆಯುವ ಆ ಐತಿಹಾಸಿಕ ದಿನದ ಸಂಭ್ರಮಾಚರಣೆಯನ್ನು ನಡೆಸಲು ಇಡೀ ದೇಶದ ಜನ ಸಿದ್ಧತೆ ನಡೆಸಿದ್ದು ಮಂಗಳೂರಿನಲ್ಲಿಯೂ ಎಲ್ಲ ದೇವಸ್ಥಾನ, ಮಂದಿರಗಳಲ್ಲಿ ಪೂಜೆ ಪುನಸ್ಕಾರ ಮತ್ತು ಭಜನೆ ಹಾಗು ತಮ್ಮ ತಮ್ಮ ಮನೆಗಳಲ್ಲಿ ದೀಪ ಬೆಳಗಿಸುವ ಮೂಲಕ ಶ್ರೀರಾಮ ದೇವರ ಆರಾಧನೆಯನ್ನು ಮಾಡಲಿದ್ದಾರೆ.
ಇಂತಹ ಸಂಧರ್ಭದಲ್ಲಿ ಪೊಲೀಸ್ ಇಲಾಖೆ ಏಕಾಏಕಿ ಮಂಗಳೂರು ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದು ಜನರಿಗೆ ನೋವು ಮತ್ತು ಆತಂಕವನ್ನು ಮೂಡಿಸಿದೆ, ಜಿಲ್ಲಾಡಳಿತದ ಈ ಕ್ರಮವನ್ನು ವಿಶ್ವಹಿಂದೂ ಪರಿಷದ್ ತೀವ್ರವಾಗಿ ಖಂಡಿಸುತ್ತದೆ. ಹಾಗು 144 ಸೆಕ್ಷನ್ ನ್ನು ಈ ಕೂಡಲೇ ಹಿಂಪಡೆಯಬೇಕೆಂದು ಜಿಲ್ಲಾಡಳಿತಕ್ಕೆ ಆಗ್ರಹಿಸುತ್ತದೆ ಎಂದು ವಿಶ್ವಹಿಂದೂ ಪರಿಷದ್ ನ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.