ಸ್ಪೇನ್: ಈಗ ಎಲ್ಲೆಲ್ಲೂ ವರ್ಕ್ ಫ್ರಂ ಹೋಮ್ ಶುರುವಾಗಿದೆ. ಕರೊನಾವೈರಸ್ ಶುರುವಾದಂದಿನಿಂದಲೂ ಮನೆಯಿಂದಲೇ ಕೆಲಸ ಮಾಡುವಂತೆ ಹಲವಾರು ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಹೇಳಿದ್ದರೆ, ಕೆಲವು ಚಾನೆಲ್‌ಗಳಲ್ಲಿ ಗಣ್ಯ ವ್ಯಕ್ತಿಗಳ ಸಂದರ್ಶನ ಕೂಡ ಮನೆಯಿಂದಲೇ ಮಾಡಲಾಗುತ್ತಿದೆ.
ಕಚೇರಿಯಿಂದ ವಿಡಿಯೋ ಕಾನ್ಫರೆನ್ಸ್ ಮಾಡುವಾಗ ಹಲವಾರು ನೌಕರರು ಅಚಾತುರ್ಯ ಮಾಡಿಕೊಂಡಿರುವ ಘಟನೆಗಳು ವರದಿಯಾಗಿವೆ. ಚಾಟ್ ಮಾಡುವ ವೇಳೆ ಅರೆನಗ್ನವಾಗಿರುವ ದೃಶ್ಯ, ಕಚೇರಿಯಿಂದ ವಿಡಿಯೋ ಕಾನ್ಸ್‌ಫರೆನ್ಸ್ ಮಾಡುವಾಗ ಮಕ್ಕಳು ಬಂದು ತೊಂದರೆ ಕೊಟ್ಟಿರುವುದು, ಮನೆಯಿಂದ ಕೆಲಸ ಮಾಡುವ ಟಿ.ವಿ ವರದಿಗಾರನೇ ನಗ್ನವಾಗಿ ಎಕ್ಸ್‌ಪೋಸ್ ಆಗಿರುವುದು ಇಂಥ ಘಟನೆಗಳು ವರದಿಯಾಗುತ್ತಲೇ ಇವೆ.
ಇದೂ ಕೂಡ ಅಂಥದ್ದೇ ಒಂದು ಘಟನೆ. ಇದು ನಡೆದಿರುವುದು ಸ್ಪೇನ್‌ನಲ್ಲಿ. ಯೂಟ್ಯೂಬ್ ಪ್ರೋಗ್ರಾಂ ‘ಸ್ಟೇಟ್ ಆಫ್ ಅಲಾರಂ’ನಲ್ಲಿ ಮಾರ್ಟಾ ಲೋಪೇಜ್ ಎಂಬಾತನ ಜತೆ ಯೂಟ್ಯೂಬ್ ಚಾನೆಲ್‌ನ ನಿರೂಪಕ ಮಾಡಲಾಗುತ್ತಿದ್ದ. ಇಲ್ಲಿಯ ಬಿಸ್‌ಬಾಸ್ ರಿಯಾಲಿಟಿ ಷೋದಂತೆ, ಬ್ರಿಗ್ ಬ್ರದರ್ ರಿಯಾಲಿಟಿ ಷೋನಲ್ಲಿ ಪ್ರಸಿದ್ಧಿ ಹೊಂದಿದ್ದಾರೆ ಮಾರ್ಟಾ ಲೋಪೇಜ್. ಇದಕ್ಕಾಗಿ ಅವರು ಅಲ್ಲಿ ಸೆಲೆಬ್ರಿಟಿ ಕೂಡ.
ಇವರು ಹಿಂದೊಮ್ಮೆ ಸಂದರ್ಶನದಲ್ಲಿ ತಮಗೆ ಯಾವುದೇ ಗರ್ಲ್‌ಫ್ರೆಂಡ್ ಇಲ್ಲ ಎಂದೇ ಹೇಳಿದ್ದರು. ಆದ್ದರಿಂದ ಹಲವಾರು ಮಂದಿ ಇವರಿಗೆ ಭಾರಿ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು. ಆದರೆ ಲೈವ್ ಕಾರ್ಯಕ್ರಮದಲ್ಲಿ ನಿರೂಪಕ ಜೇವಿಯರ್ ನೆಗ್ರೆ ಸಂದರ್ಶನ ಮಾಡುತ್ತಿದ್ದ ವೇಳೆ, ಮುಕ್ಕಾಲು ಭಾಗ ನಗ್ನವಾಗಿದ್ದ ಯುವತಿಯೊಬ್ಬಳು ಬೆಡ್‌ರೂಮ್ ಕಡೆಗೆ ಟ್ರೇ ಹಿಡಿದು ಹೊರಟಿರುವುದು ಕಂಡುಬಂದಿದೆ.
ಆ ಬಳಿಕ ಅವಳು ಯಾರು ಎಂದು ಪತ್ತೆ ಹಚ್ಚಿರುವ ಯಟ್ಯೂಬ್ ಚಾನೆಲ್‌ನವರು, ಈಕೆ ಬೇರೊಬ್ಬನ ಗರ್ಲ್‌ಫ್ರೆಂಡ್ ಎಂದೂ ತಿಳಿದುಕೊಂಡಿದ್ದಾರೆ! ಈಕೆಯ ಹೆಸರು ಅಲೆಕ್ಸಿಯಾ ರಿವಾಸ್. ಇವಳು ಪತ್ರಕರ್ತೆಯೆಂದು ಗುರುತಿಸಲಾಗಿದೆ.
ವಿಚಿತ್ರ ಎಂದರೆ ಈಕೆ ಕೂಡ ಸಂದರ್ಶನವೊಂದರಲ್ಲಿ ತನಗೆ ವಿಪರೀತ ಪುಸ್ತಕದ ಹುಚ್ಚು. ಅದನ್ನು ಬಿಟ್ಟರೆ ಬೇರೆ ಯಾವ ಯೋಚನೆಯನ್ನೂ ತಾನು ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದಳಂತೆ!
ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು ಆಕೆಯ ಇನ್ನೊಬ್ಬ ಪ್ರಿಯಕರ ಈ ವಿಡಿಯೋ ನೋಡಿ ಏನು ಹೇಳುತ್ತಾನೋ ಗೊತ್ತಿಲ್ಲ ಎಂದು ತಮಾಷೆ ಮಾಡಿದ್ದಾರೆ ಕಮೆಂಟಿಗರು.
Comments are closed.