ಕರಾವಳಿ

ಮಂಗಳೂರು : ಆಯುಷ್ ಇಲಾಖೆಯಿಂದ ಯೋಗ ತರಬೇತುದಾರರ ಹುದ್ದೆಗೆ ಅರ್ಜಿ ಆಹ್ವಾನ

Pinterest LinkedIn Tumblr

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಆಯುಷ್ ವೆಲ್‍ನೆಸ್ ಸೆಂಟರುಗಳಾದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಬಳ್ಕುಂಜೆ, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಸಜಿಪಮೂಡ, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಕಣಿಯೂರಿಗೆ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ಯೋಗ ತರಬೇತುದಾರರು (ಪಾರ್ಟ್ ಟೈಂ) ಹುದ್ದೆಗೆ ನೇಮಕ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ:

ಕನಿಷ್ಟ 10+2 ಉತ್ತೀರ್ಣರಾಗಿರಬೇಕು ಮತ್ತು ಯೋಗ ವೆಲ್‍ನೆಸ್ ಇನ್‍ಸ್ಟ್ರಕ್ಟರ್ ಕೋರ್ಸ್ ಪ್ರಮಾಣ ಪತ್ರವನ್ನು ಯೋಗ ಸರ್ಟಿಫಿಕೇಷನ್ ಬೋರ್ಡ್‍ನಿಂದ ಪಡೆದಿರಬೇಕು ಅಥವಾ ಕನಿಷ್ಟ 10+2 ಉತ್ತೀರ್ಣರಾಗಿರಬೇಕು ಮತ್ತು ಪ್ರತಿಷ್ಟಿತ ಸಂಸ್ಥೆಯಲ್ಲಿ ಯೋಗ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸಿದ ಅನುಭವವನ್ನು ಹೊಂದಿರಬೇಕು.

ವಯೋಮಿತಿ 60 ವರ್ಷ ಮೀರಬಾರದು, ಸ್ಥಳೀಯರಿಗೆ ಪ್ರಾಶಸ್ತ್ಯವನ್ನು ನೀಡಲಾಗುವುದು. ಅರ್ಜಿ ಸಲ್ಲಿಸಲು ಆಗಸ್ಟ್ 5 ಕೊನೆಯ ದಿನ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆಯುಷ್ ಕಚೇರಿ ದೂರವಾಣಿ ಸಂಖ್ಯೆ:0824-2453063 ಸಂಪರ್ಕಿಸವಂತೆ ದ.ಕ ಆಯುಷ್ ಇಲಾಖಾ ಪ್ರಕಟಣೆ ತಿಳಿಸಿದೆ.

Comments are closed.