ಕರಾವಳಿ

ಜುಲೈ 30ರಿಂದ ಆನ್‌ಲೈನ್ಮೂಲಕ ಮೂಲಕ 9ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ : ರಾಷ್ಟ್ರದ ಮುಂದಿರುವ ಸವಾಲು -ಹಿಂದೂ ರಾಷ್ಟ್ರದ ಸ್ಥಾಪನೆ !

Pinterest LinkedIn Tumblr

ರಾಷ್ಟ್ರದ ಮುಂದಿರುವ ಸವಾಲುಗಳಿಗೆ ಮೂಲಭೂತ ಉಪಾಯ : ಹಿಂದೂ ರಾಷ್ಟ್ರದ ಸ್ಥಾಪನೆ !
ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಕರೆ – ಇಲ್ಲಿದೆ ವಿವರ

( 2019ರಲ್ಲಿ ಗೋವಾದಲ್ಲಿ ನಡೆದ ಅಧಿವೇಶನದ ಕಡತ ಚಿತ್ರ)

ಇಂದು ಭಾರತ ಒಂದು ಸೂಕ್ಷ್ಮ ತಿರುವಿನಲ್ಲಿ ನಿಂತಿದೆ. ದೇಶದ ಮೇಲೆ ಅಂತರ-ಬಾಹ್ಯದಿಂದಲೂ ಸಂಕಟಗಳ ಮಾಲಿಕೆ ಪ್ರಾರಂಭವಾಗಿದೆ. ಇಂತಹ ಪರಿಸ್ಥಿತಿ ಸ್ವತಂತ್ರ ಭಾರತದ 72 ವರ್ಷಗಳಲ್ಲಿ ಎಂದಿಗೂ ಬಂದಿರಲಿಲ್ಲ. ಒಂದೆಡೆ ದೇಶದಲ್ಲಿ ಕೊರೋನಾ ಪಿಡುಗು ತಾಂಡವವಾಡುತ್ತಿದೆ. ಈ ಪಿಡುಗನ್ನು ತಡೆಗಟ್ಟಲು ಭಾರತ ಸರಕಾರ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ.

ಕಳೆದ 4 ತಿಂಗಳಿನಿಂದ ದೇಶದಲ್ಲಿ ಲಾಕ್‌ಡೌನ್ ಇದೆ. ಎಲ್ಲ ವ್ಯವಸ್ಥೆಗಳು ಸಕ್ರಿಯವಿದ್ದರೂ ಅಪೇಕ್ಷಿತ ವಿರುವಂತೆ ಯಶಸ್ಸು ದೊರೆಯುತ್ತಿರುವಂತೆ ಕಾಣಿಸುತ್ತಿಲ್ಲ. ಈ ರೀತಿಯ ಆರೋಗ್ಯ ಸಮಸ್ಯೆಯು ದೇಶಾದ್ಯಂತ ಕೋಟ್ಯವಧಿ ಜನತೆಗೆ ಕೆಲಸವಿಲ್ಲದಂತೆ ಮಾಡಿರುವುದರಿಂದ ಅರ್ಥವ್ಯವಸ್ಥೆ ಹದಗೆಟ್ಟಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಳವಾಗಿದ್ದು, ಅಭಿವೃದ್ಧಿಯ ವೇಗ ಸ್ಥಗಿತಗೊಂಡಿದೆ.

ಇಂತಹ ಪರಿಸ್ಥಿತಿಯಲ್ಲಿಯೇ ದೇಶದ ಮೇಲೆ ಬಾಹ್ಯ ಆಕ್ರಮಣಗಳು ಪ್ರಾರಂಭವಾಗಿವೆ. ಪಕ್ಕದ ರಾಷ್ಟ್ರ ಚೀನಾ ಭಾರತದ ವಿರುದ್ಧ ಎದ್ದು ನಿಂತಿದೆ. ಗಲವಾನ್ ಕಣಿವೆಯಲ್ಲಿ ಚೀನಾದ ಸೈನಿಕರು ನುಸುಳಿ, ಭಾರತೀಯ ಸೈನಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು. ಇದರಲ್ಲಿ ಭಾರತದ ೨೦ ಸೈನಿಕರು ಹುತಾತ್ಮರಾದರು; ಆದರೆ ಭಾರತೀಯ ಸೈನಿಕರು ಚೀನಾದ ಸೈನಿಕರನ್ನು ಕೊಂದು, ಅವರಿಗೆ ತಕ್ಕ ಪಾಠ ಕಲಿಸಿದರು. ಇದರಿಂದ ಚೀನಾದ ಅಹಂಕಾರಕ್ಕೆ ಪೆಟ್ಟು ಬಿದ್ದಿತು.

ಅಮೇರಿಕವು ಕೊರೋನಾ ಪಿಡುಗಿಗೆ ಚೀನಾ ದೇಶವೇ ಕಾರಣವೆಂದು ಹೇಳಿರುವುದು, ಇದಕ್ಕೆ ಭಾರತವು ಬೆಂಬಲಿಸಿರುವುದು, ಈ ಕಾರಣದಿಂದ ಅಮೇರಿಕದೊಂದಿಗೆ ಭಾರತದ ಸಂಬಂಧ ಮತ್ತಷ್ಟು ಗಾಢವಾಗುವುದು, ಅಲ್ಲದೇ ಅಮೇರಿಕವು ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಚೀನಾಗೆ ಪರ್ಯಾಯವೆಂದು ಹೇಳಿ ಮುನ್ನೆಲೆಗೆ ತರಲು ಪ್ರಯತ್ನಿಸುವುದು, ಈ ಎಲ್ಲ ವಿಷಯಗಳಿಂದ ಆಗುವ ಆರ್ಥಿಕ ಹಾನಿಯ ಸೇಡನ್ನು ತೀರಿಸಿಕೊಳ್ಳಲು, ಚೀನಾ ಈಗ ಭಾರತದ ವಿರುದ್ಧ ಬಹಿರಂಗವಾಗಿ ಯುದ್ಧವನ್ನು ಪ್ರಾರಂಭಿಸಿದೆ. ಇದಕ್ಕಾಗಿ ಭಾರತವನ್ನು ನಾಲ್ಕೂ ದಿಕ್ಕುಗಳಿಂದ ಸುತ್ತುವರಿಯಲು ಪ್ರಯತ್ನಿಸುತ್ತಿದೆ.

ಭಾರತದ ಹಳೆಯ ಶತ್ರುವಾಗಿರುವ ಪಾಕಿಸ್ತಾನವನ್ನು ಭಾರತದ ವಿರುದ್ಧ ಕ್ಯಾತೆ ತೆಗೆಯುವಂತೆ ಅದು ಹುರಿದುಂಬಿಸುತ್ತಿದೆ. ಹಾಗೆಯೇ ಭಾರತದ ಪಾರಂಪಾರಿಕ ಮಿತ್ರವಾಗಿದ್ದ ನೇಪಾಳಕ್ಕೂ ಅದು ಭಾರತದ ವಿರುದ್ಧ ಪಿತೂರಿ ಮಾಡಿ ಭಾರತದ ಭೂಭಾಗದ ಮೇಲೆ ತನ್ನ ಅಧಿಕಾರವನ್ನು ತೋರಿಸಲು ಹುರಿದುಂಬಿಸುತ್ತಿದೆ.

ಇನ್ನೊಂದೆಡೆ ಬಾಂಗ್ಲಾದೇಶದಲ್ಲಿ ಹೂಡಿಕೆ ಮಾಡಿ ಬಾಂಗ್ಲಾದೇಶವನ್ನು ತನ್ನ ವಶದಲ್ಲಿಟ್ಟುಕೊಳ್ಳುವ ಪ್ರಯತ್ನವನ್ನು ಅದು ನಡೆಸಿದೆ. ಈ ರೀತಿ ಭಾರತದ ಮೇಲೆ ನಾಲ್ಕೂ ದಿಕ್ಕುಗಳಿಂದ ಏಕಕಾಲಕ್ಕೆ ಆಕ್ರಮಣ ನಡೆಸುವ ಚೀನಾದ ಉದ್ದೇಶ ಬಹಿರಂಗಗೊಳ್ಳುತ್ತಿದೆ. ಒಟ್ಟಾರೆ ಚೀನಾ ಮತ್ತು ಅದರ ಕೈಗೊಂಬೆಯಾಗಿರುವ ರಾಷ್ಟ್ರಗಳು ಒಂದೆಡೆ ಮತ್ತು ಚೀನಾದ ವಿರುದ್ಧ ನಿಲುವು ತಾಳಿದ ರಾಷ್ಟ್ರಗಳು ಇನ್ನೊಂದೆಡೆ, ಹೀಗೆ ಜಾಗತಿಕ ಮಟ್ಟದಲ್ಲಿ ಬಹಿರಂಗವಾಗಿ 2 ಗುಂಪುಗಳಾಗಿವೆ. ಈ ಪರಿಸ್ಥಿತಿಯು ಮೂರನೇ ಮಹಾಯುದ್ಧಕ್ಕೆ ಅನುಕೂಲವಾಗುತ್ತಿರುವಂತೆ ಕಂಡು ಬರುತ್ತಿದೆ.

ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದ ಸತ್ವಪರೀಕ್ಷೆಯಾಗಲಿದೆ. ಚೀನಾಗೆ ಸೆಡ್ಡು ಹೊಡೆಯಲು ಅಮೇರಿಕದೊಂದಿಗೆ ಸಂಬಂಧಗಳನ್ನು ದೃಢಪಡಿಸಿಕೊಳ್ಳುವುದು, ಯುರೋಪಿಯನ್ ರಾಷ್ಟ್ರಗಳ ಸಹಾಯವನ್ನು ಪಡೆಯಲು ಪ್ರಯತ್ನಿಸುವುದು, ಹೀಗೆ ಸರಕಾರದಿಂದ ಪ್ರಯತ್ನಗಳಾಗುತ್ತಿವೆ, ವಿದೇಶನೀತಿಯ ಭಾಗವೆಂದು ಇದನ್ನು ಮಾಡುವುದು ಸಮರ್ಪಕವಾಗಿದೆ.

ಭಾರತವು ಸದ್ಯಕ್ಕೆ ತೆಗೆದುಕೊಳ್ಳುತ್ತಿರುವ ಆಕ್ರಮಣಕಾರಿ ನಡೆ ಪ್ರಧಾನಮಂತ್ರಿ ಮೋದಿಯವರ ನೀತಿಯ ಪರಿಣಾಮವಾಗಿದೆ. ಹೀಗಿದ್ದರೂ, ದೇಶದ ಎದುರಿಗಿರುವ ಬಿಕ್ಕಟ್ಟಿನ ಸ್ಥಿತಿಯನ್ನು ನೋಡಿದರೆ, ಈ ಪ್ರಯತ್ನಗಳು ಮತ್ತಷ್ಟು ವೇಗ ಪಡೆದುಕೊಳ್ಳುವುದು ಅಪೇಕ್ಷಿತವಿದೆ.

ಅಮೇರಿಕ ಮತ್ತು ಯುರೋಪಿಯನ್ ರಾಷ್ಟ್ರಗಳ ಭಾರತದ್ವೇಷ ತೆರೆಮರೆಯಲ್ಲಿ ಉಳಿದಿಲ್ಲ. ಕಳೆದ ಅನೇಕ ದಶಕಗಳಿಂದ ಭಾರತದ್ವೇಷದ ಕಾರಣದಿಂದ ಅವುಗಳು ಪಾಕಿಸ್ತಾನಕ್ಕೆ ಆರ್ಥಿಕ ಸಹಾಯವನ್ನು ಮಾಡಿದವು. ಈ ಆರ್ಥಿಕ ಸಹಾಯದ ದುರುಪಯೋಗವನ್ನು ಪಡೆದುಕೊಂಡು, ಪಾಕಿಸ್ತಾನವು ಈ ಹಣವನ್ನು ಜಿಹಾದಿ ಭಯೋತ್ಪಾದಕರನ್ನು ಪೋಷಿಸಲು ಉಪಯೋಗಿಸಿತು.

ಈ ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆ ಮತ್ತು ಅದಕ್ಕೆ ತೆರೆಮರೆಯಲ್ಲಿ ಬೆಂಬಲ ನೀಡುವ ಚೀನಾ ದೇಶವು ಈ ರಾಷ್ಟ್ರಗಳಿಗೆ ಈಗ ತಲೆನೋವಾಗಿರುವ ಕಾರಣದಿಂದ ಈ ರಾಷ್ಟ್ರಗಳು ಭಾರತದ ಪರವಾಗಿ ನಿಲ್ಲುತ್ತಿವೆ; ಆದರೆ ಈ ಬೆಂಬಲ ಮೈತ್ರಿಯಿಂದ ನಿರ್ಮಾಣವಾಗಿಲ್ಲ. ಬದಲಾಗಿ ಭಾರತವು ಚೀನಾ ಅಥವಾ ಪಾಕಿಸ್ತಾನದ ವಿರುದ್ಧ ಏನಾದರೂ ಮಾಡುತ್ತಿರುವುದರಿಂದ, ಅದರ ಹೆಗಲಿನ ಮೇಲೆ ಬಂದೂಕು ಇಟ್ಟು ಸ್ವಹಿತವನ್ನು ಕಾಪಾಡಿಕೊಳ್ಳುವುದು ಈ ರಾಷ್ಟ್ರಗಳ ಪ್ರಯತ್ನವಾಗಿದೆ.

ಹೀಗಿರುವಾಗ ನಿಜವಾಗಿಯೂ ಯುದ್ಧದ ಪ್ರಸಂಗ ಬಂದಾಗ, ಈ ರಾಷ್ಟ್ರಗಳು ಭಾರತಕ್ಕೆ ಎಷ್ಟರಮಟ್ಟಿಗೆ ಸಹಾಯ ಮಾಡಲಿವೆ ಎನ್ನುವುದೂ ಪ್ರಶ್ನೆಯಾಗಿದೆ. ಇದಕ್ಕಾಗಿಯೇ ‘ಸ್ವತಃ ಯುದ್ಧಸನ್ನದ್ಧ ಮತ್ತು ಸ್ವಯಂಪೂರ್ಣರಾಗುವುದನ್ನು ಬಿಟ್ಟು ಭಾರತಕ್ಕೆ ಪರ್ಯಾಯವಿಲ್ಲ. ಇದನ್ನು ನೋಡಿದರೆ ಮೋದಿಯವರು ಚೀನಾ, ಪಾಕಿಸ್ತಾನ ಮತ್ತು ಈಗ ನೇಪಾಳ ಇವುಗಳನ್ನು ಯಾವ ರೀತಿ ಹದ್ದುಬಸ್ತಿನಲ್ಲಿಡುತ್ತಾರೆ ಎನ್ನುವುದರ ಮೇಲೆ ಭಾರತದ ಭವಿಷ್ಯ ಅವಲಂಬಿಸಿರಲಿದೆ.

ಕೂಟನೀತಿ ಅಥವಾ ಇತರ ಪ್ರಯತ್ನಗಳೊಂದಿಗೆ ಶತ್ರುವಿನ ಮೇಲೆ ಮೈಲುಗೈ ಸಾಧಿಸಬೇಕಾಗಿದ್ದರೆ, ಅದಕ್ಕೆ ಧರ್ಮಾಧಿಷ್ಠಿತ ರಾಜ್ಯವ್ಯವಸ್ಥೆ ಆವಶ್ಯಕವಾಗಿರುತ್ತದೆ. ಇದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಈ ಪರಿಸ್ಥಿತಿಯಲ್ಲಿ ನಾವು ನಿಜವಾದ ಅರ್ಥದಿಂದ ಯಶಸ್ವಿಯಾಗಬೇಕಾಗಿದ್ದರೆ, ಛತ್ರಪತಿ ಶಿವಾಜಿ ಮಹಾರಾಜರ ಆದರ್ಶವನ್ನು ನಮ್ಮ ಕಣ್ಣೆದುರಿಗೆ ಇಟ್ಟುಕೊಳ್ಳಬೇಕಾಗುವುದು. ಕೇವಲ ತಾತ್ವಿಕ ಸ್ತರದಲ್ಲಿಯಷ್ಟೇ ಅಲ್ಲ, ಆ ಆದರ್ಶ ಭಾರತೀಯ ಮುಂದಾಳತ್ವವನ್ನು ಅಂಗೀಕರಿಸುವುದು ಕಾಲದ ಆವಶ್ಯಕತೆಯಾಗಿದೆ.

ಇಂದಿನಂತಹ ಪರಿಸ್ಥಿತಿ 400 ವರ್ಷಗಳ ಹಿಂದೆಯೂ ಇತ್ತು. ಆ ಕಾಲದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ರಂತಹ ಸರ್ವಗುಣ ಸಂಪನ್ನ ರಾಜನು ಐವರು ಬಾದಶಹಾರನ್ನು ಮಣ್ಣು ಮುಕ್ಕಿಸಿದರು. ಇಂತಹ ಆಡಳಿತಾಧಿಕಾರಿಯು ಧಮಾಧಿಷ್ಠಿತನಿರುತ್ತಾನೆ. ಇದರಿಂದ ಇಂದಿನ ಪರಿಸ್ಥಿತಿಯನ್ನು ಮೆಟ್ಟಿ ನಿಲ್ಲಲು ಧರ್ಮಾಧಿಷ್ಠಿತ ರಾಜ್ಯ ವ್ಯವಸ್ಥೆಯನ್ನು ನಿರ್ಮಾಣ ಮಾಡುವುದು ಆವಶ್ಯಕವಾಗಿದೆ. ಎಲ್ಲಿಯವರೆಗೆ ನಮ್ಮ ದೇಶ ತಥಾಕಥಿತ ಧರ್ಮನಿರಪೇಕ್ಷತೆಯ ತೆರೆಮರೆಯಲ್ಲಿರುವುದೋ, ಅಲ್ಲಿಯವರೆಗೆ ನಮ್ಮ ದೇಶದ ಭವಿಷ್ಯ ಕತ್ತಲೆಯಲ್ಲಿಯೇ ಇರಲಿದೆ.

ಈ ಸಂಕಲ್ಪನೆಯ ಮತ್ತೊಂದು ಮಗ್ಗಲು ಇದೆ. ಇಂದು ಜಿಹಾದಿ ಭಯೋತ್ಪಾದನೆ ಮತ್ತು ಚೀನಾ-ನೇಪಾಳದ ಸಾಮ್ಯವಾದಿ ಈ ಬಾಹ್ಯ ಸವಾಲುಗಳೊಂದಿಗೆ ಭಾರತಕ್ಕೆ ಆಂತರಿಕ ಅಸುರಕ್ಷತೆಯ ಸಮಸ್ಯೆಯೂ ಕಾಡುತ್ತಿದೆ. ೩೦ ವರ್ಷಗಳ ಹಿಂದೆ ‘ಜಿಹಾದಿ ಭಯೋತ್ಪಾದನೆ ಹೆಸರಿನ ರಕ್ತದಿಂದ ಮೆತ್ತಿರುವ ‘ಕಾಶ್ಮೀರಿ ಹಿಂದೂಗಳ ವಂಶ ನಾಶ ಅಷ್ಟು ಹಿಂದೆ ಹೋಗುವ ಆವಶ್ಯಕತೆಯಿಲ್ಲ.

ಕಳೆದ ವರ್ಷಾದ್ಯಂತ ನಡೆದ ಘಟನೆಗಳು ಭಾರತದ ಆಂತರಿಕ ಕಾನೂನು ಮತ್ತು ನ್ಯಾಯ ವ್ಯವಸ್ಥೆಗೆ ಸವಾಲೊಡ್ಡುತ್ತಿದೆ. ಕಳೆದ ಡಿಸೆಂಬರ ತಿಂಗಳಲ್ಲಿ ಅಸ್ತಿತ್ವಕ್ಕೆ ಬಂದ ಮಾನವತೆಯ ಹಿತರಕ್ಷಣೆಯ ‘ನಾಗರಿಕತ್ವ ಸುಧಾರಣೆ ಕಾಯಿದೆಯನ್ನು ಪ್ರಾಣವನ್ನು ಪಣಕ್ಕಿಟ್ಟು ವಿರೋಧಿಸುವವರು ದೇಶಾದ್ಯಂತ ಗಲಭೆಯನ್ನು ನಡೆಸಿದರು, ಬೆಂಕಿಹಚ್ಚಿದರು, ದೇಶದ ಸಂಪತ್ತಿನ ಅಪಾರ ಹಾನಿಯನ್ನು ಮಾಡಿದರು.

ರಾಜಧಾನಿ ದೆಹಲಿಯಿಂದ ಕಾನ್ಪೂರ, ಮುಂಬಯಿ ಹಾಗೂ ದಕ್ಷಿಣ ಭಾರತದಲ್ಲಿಯೂ ಈ ರಾಷ್ಟ್ರದ್ರೋಹಿ ಘಟನೆಯ ಕಾವು ಹರಡಿತ್ತು. ಈ ರಾಷ್ಟ್ರದ್ರೋಹಿ ಷಡ್ಯಂತ್ರ ಭಾರತವನ್ನು ಹಾಳುಗೆಡವಲು ಪ್ರಯತ್ನಿಸುತ್ತಿದೆ. ಇದು ಇತ್ತೀಚಿನ ಉದಾಹರಣೆಯಾಗಿದೆ. ನಿಜ ಹೇಳಬೇಕೆಂದರೆ ನಾವು ಕಳೆದ 7 ದಶಕಗಳಲ್ಲಿ ಪ್ರತಿಯೊಂದು ರೀತಿಯಿಂದಲೂ ಇದನ್ನು ಹದ್ದುಬಸ್ತಿನಲ್ಲಿಡಲು ಅಪಾರ ಪ್ರಯತ್ನಗಳನ್ನು ಮಾಡಿದ್ದೇವೆ; ಆದರೆ ದಿನದಿಂದ ದಿನಕ್ಕೆ ಆಂತರಿಕ ಸುರಕ್ಷತೆಯ ಸಮಸ್ಯೆ ಕೈಮೀರುತ್ತಿದೆ.

ಈ ಸಮಸ್ಯೆಗೆ ನಿಜಹೇಳಬೇಕೆಂದರೆ ಹಿಂದೂಗಳು ಈಗ ಎಲ್ಲ ಸ್ತರಗಳಲ್ಲಿ ಆಧ್ಯಾತ್ಮಿಕ ಬಲವನ್ನು ಹೆಚ್ಚಿಸಿಕೊಳ್ಳುವುದು ಆವಶ್ಯಕವಾಗಿದೆ. ಏಕೆಂದರೆ ಭಾರತವು ಆಧ್ಯಾತ್ಮಿಕ ಸ್ತರವನ್ನು ಬಿಟ್ಟು ಉಳಿದ ಎಲ್ಲ ಸ್ತರಗಳಲ್ಲಿಯೂ ಪ್ರಯತ್ನಗಳನ್ನು ಮಾಡಿ ನೋಡಿದೆ; ಆದರೆ ಭಾರತೀಯ ವ್ಯವಸ್ಥೆಯು ಈ ಸಮಸ್ಯೆಯ ಮೇಲೆ ಮೂಲಭೂತ ಉಪಾಯ ಯೋಜನೆಯನ್ನು ಕಂಡುಹಿಡಿಯುವಲ್ಲಿ ಸಂಪೂರ್ಣವಾಗಿ ಸೋತಿದೆಯೆಂದು ನಾವು ಒಪ್ಪಿಕೊಳ್ಳಬೇಕಾಗುವುದು. ಸಮಸ್ಯೆಯ ತೀವ್ರತೆ ಕಡಿಮೆಯಾಗದೇ ಅದು ಅನೇಕ ಪಟ್ಟುಗಳಿಂದ ಹೆಚ್ಚಳವಾಗುತ್ತಿದೆ, ಇದರಿಂದಲೇ ಇಂದಿನ ವ್ಯವಸ್ಥೆಯ ಟೊಳ್ಳುತನ ಸ್ಪಷ್ಟವಾಗುತ್ತದೆ.

ಇದಕ್ಕಾಗಿ ಈಗ ಭಾರತಕ್ಕೆ ಆಧ್ಯಾತ್ಮಿಕ ಸ್ತರದಲ್ಲಿ ‘ಹಿಂದೂ ರಾಷ್ಟ್ರವೆಂದು ಘೋಷಿಸದೇ ಪರ್ಯಾಯವಿಲ್ಲ. ಇದಕ್ಕಾಗಿ ಹಿಂದೂಗಳೇ ಸಂಘಟಿತರಾಗಿ ರಾಷ್ಟ್ರ ಮತ್ತು ಧರ್ಮದ ಉತ್ಥಾನಕ್ಕಾಗಿ ಕಾರ್ಯನಿರತರಾಗ ಬೇಕಾಗಿದೆ. ಮುಖ್ಯವಾಗಿ ಇದೇ ಕಾರಣಕ್ಕಾಗಿಯೇ ಹಿಂದೂ ಜನಜಾಗೃತಿ ಸಮಿತಿಯು ಕಳೆದ 8 ವರ್ಷಗಳಿಂದ ಗೋವಾದಲ್ಲಿ ಅಖಿಲ ಭಾರತೀಯ ಹಿಂದೂ ಅಧಿವೇಶನವನ್ನು ಯಶಸ್ವಿಯಾಗಿ ಆಯೋಜಿಸುತ್ತಿದೆ.

ಈ ಬಾರಿ ಕೊರೊನಾ ಸೋಂಕು ಹರಡಿರುವುದರಿಂದ ಜುಲೈ 30 ರಿಂದ ಪ್ರಾರಂಭವಾಗುವ ಈ ಅಧಿವೇಶನ ಆನ್‌ಲೈನ್ ಇರಲಿದೆ. ಈ ನಿಮಿತ್ತದಿಂದ ದೇಶ-ವಿದೇಶದ ಹಿಂದುತ್ವನಿಷ್ಠರು ತಮ್ಮ ತಮ್ಮ ನಿವಾಸಸ್ಥಾನದಲ್ಲಿದ್ದುಕೊಂಡೇ ಈ ಅಧಿವೇಶನದಲ್ಲಿ ಆನ್‌ಲೈನ್ ಮೂಲಕ ಭಾಗವಹಿಸಲಿದ್ದಾರೆ. ಹಾಗೆಯೇ ಒಂದೇ ಸಮಯದಲ್ಲಿ ಸಾವಿರಾರು ಹಿಂದುತ್ವನಿಷ್ಠರು, ರಾಷ್ಟ್ರಾಭಿಮಾನಿಗಳು, ಧರ್ಮಾಭಿಮಾನಿಗಳು, ಜಿಜ್ಞಾಸುಗಳು ಈ ಅಧಿವೇಶನದ ಲಾಭವನ್ನು ಪಡೆದುಕೊಳ್ಳಲಿದ್ದಾರೆ.

ಈ ಅಧಿವೇಶನದಲ್ಲಿ ಮಂಡಿಸಲಾಗುವ ವಿಚಾರಗಳಿಂದ ‘ಹಿಂದೂ ರಾಷ್ಟ್ರದ ಅವಶ್ಯಕತೆಯ ಕಾರಣ, ‘ರಾಷ್ಟ್ರ ಮತ್ತು ಹಿಂದೂ ಧರ್ಮದ ಮೇಲೆ ಮೇಲಿಂದ ಮೇಲೆ ಆಗುವ ಆಘಾತಗಳ ಹಿಂದಿನ ಕಾರಣಮೀಮಾಂಸೆ ಮತ್ತು ಅವುಗಳ ಮೇಲಿನ ಪರಿಪೂರ್ಣ ಉಪಾಯಯೋಜನೆ ಇತ್ಯಾದಿ ವಿಷಯಗಳ ಮೇಲೆ ವ್ಯಾಪಕ ವಿಚಾರ ಮಂಥನ ವನ್ನು ನಡೆಸಲಾಗುವುದು.

ಈ ಅಧಿವೇಶನವು ಜುಲೈ 30 ರಿಂದ 2ಆಗಸ್ಟ್ ಹಾಗೂ 6 ರಿಂದ 9 ಆಗಸ್ಟ್ 2020 ಈ ಕಾಲಾವಧಿಯಲ್ಲಿ ಜರುಗಲಿದೆ.

ಅಧಿವೇಶನವು ಹಿಂದೂ ಜನಜಾಗೃತಿ ಸಮಿತಿಯ ಅಧಿಕೃತ ‘ಫೇಸಬುಕ್ ಪೇಜ್ ಮತ್ತು ‘ಯು-ಟ್ಯೂಬ್ ಚಾನಲ್ ಮೇಲೆ ನೋಡಬಹುದಾಗಿದೆ. ಎಲ್ಲ ರಾಷ್ಟ್ರ ಮತ್ತು ಧರ್ಮ ಪ್ರೇಮಿಗಳು ಈ ಅಧಿವೇಶನದ ಪ್ರಯೋಜನವನ್ನು ಅವಶ್ಯಕವಾಗಿ ಪಡೆದುಕೊಳ್ಳಬೇಕು ಎಂದು ನಾನು ಕರೆ ನೀಡುತ್ತೇನೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಕರೆ ನೀಡಿದ್ದಾರೆ.

Comments are closed.