ಕರಾವಳಿ

ಕೌಶಲಾಭಿವೃದ್ದಿ ಮತ್ತು ಸುರಕ್ಷ ತರಬೇತಿ ಕೇಂದ್ರಕ್ಕೆ ಎಂ.ಒ.ಯು : ರಾಜ್ಯದ ಏಕೈಕ ಮೀನುಗಾರಿಕಾ ಕಾಲೇಜಿನಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ಸ್ಥಾಪನೆ

Pinterest LinkedIn Tumblr

ಮಂಗಳೂರು :ಆಗ್ನೇಯ ಏಷ್ಯಾದಲ್ಲೆ ಎರಡನೇ ಹಾಗೂ ಭಾರತ ಮೊಟ್ಟಮೊದಲ ಮೀನುಗಾರಿಕಾ ಕಾಲೇಜು ಮಂಗಳೂರಿನ ಎಕ್ಕೂರು ಸಮೀಪವಿರುವ ಮತ್ಸ್ಯನಗರದಲ್ಲಿ ಪ್ರಾರಂಭವಾಗಿ 50 ವರ್ಷಗಳನ್ನು ಪೂರೈಸಿದೆ. ಕಾಲೇಜು 1969 ರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಅಧೀನದಲ್ಲಿ ಅಸ್ತಿತ್ವಕ್ಕೆ ಬಂದು 35 ವರ್ಷ ಪೂರೈಸಿ 2005 ರಿಂದ ಬೀದರನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಕಾಲೇಜು 4 ವರ್ಷಗಳ ಸ್ನಾತಕ ಪದವಿ (ಬಿ.ಎಫ್.ಎಸ್ಸಿ.), 2 ವರ್ಷದ ಸ್ನಾಕೋತ್ತರ ಪದವಿ (ಎಂ.ಎಫ್.ಎಸ್ಸಿ.) ಮತ್ತು 3 ಸಾಲಿನ ಡಾಕ್ಟರೇಟ್ (ಪಿಹೆಚ್.ಡಿ.) ಪದವಿಗಳನ್ನು ನೀಡುತ್ತಾ ಬಂದಿದೆ. ಇದುವರೆಗೂ 47 ಪದವಿ ಬ್ಯಾಚ್ ಗಳು ಹೊರಬಂದಿದ್ದು, ಇಲ್ಲಿಯ ಪದವಿಧರರು ರಾಷ್ಟೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರ್ಕಾರಿ ಹಾಗೂ ಖಾಸಗಿ ರಂಗದ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಸ್ಲಾಗನೀಯ.
ವಿದ್ಯಾಭ್ಯಾಸದ ಜೊತೆಗೆ, ಮೀನುಗಾರಿಕೆಯಲ್ಲಿ ಸಂಶೋಧನೆ ಮತ್ತು ವಿಸ್ಥರಣೆಯಲ್ಲಿ ಮುಂಚುಣಿ ಹೊಂದಿರುವು ಮೀನುಗಾರಿಕಾ ಕ್ಷೇತ್ರಕ್ಕೆ ಗಣನೀಯ ಕೊಡುಗೆ ಕೊಟ್ಟಿದೆ. ಕಾಲೇಜು ಇಲ್ಲಿಯವರೆಗೆ ಸುಮಾರು 150 ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳು ಪ್ರಾಯೋಜಿಸಿದ ಸಂಶೋಧನಾ ಯೋಜನೆಗಳನ್ನು ನಡೆಸಿರುತ್ತದೆ.

ಮುಂದುವರೆದು, ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ (ಎಂ.ಎಸ್.ಸಿ.ಎಲ್.) ನ ಅಡಿಯಲ್ಲಿ ಮಂಗಳೂರು ನಗರವನ್ನು ಸೌಂದರ್ಯಗೊಳಿಸುವ ನಿಟ್ಟಿನಲ್ಲಿ ನಾನಾ ಯೋಜನೆಗಳು ಈಗಾಗಲೇ ಅಸ್ತಿತ್ವಕ್ಕೆ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಮೀನುಗಾರಿಕೆಯಲ್ಲಿ ಕೌಶಲಾಭಿವೃದ್ದಿ ತರಬೇತಿಯನ್ನು ನಡೆಸುವ ಉದ್ದೇಶದಿಂದ ಕಾಲೇಜಿನ ಪ್ರೊಫೆಸರ್ ಡಾ| ಎ.ಟಿ. ರಾಮಚಂದ್ರ ನಾಯ್ಕ ಮತ್ತು ಸಹಾಯಕ ಪ್ರಾಧ್ಯಾಪಕ ಡಾ| ಕುಮಾರನಾಯ್ಕ ಎ.ಎಸ್. ರವರು ಸಲ್ಲಿಸಿದ ಯೋಜನಾ ವರದಿಯನ್ನು ಪರಿಗಣಿಸಿ ಎಂ.ಎಸ್.ಸಿ.ಎಲ್. ಸಂಸ್ಥೆಯು 4.75 ಕೋಟಿಗಳ ಧನಸಹಾಯ ಮಂಜೂರು ಮಾಡಿದೆ.

ಇದರ ಪೈಕಿ ಈ ಯೋಜನೆಯಡಿ ಕೌಶಲಾಭಿವೃದ್ದಿ ತರಬೇತಿ ಕೇಂದ್ರದ ನಿರ್ಮಾಣಕ್ಕೆ 2.4 ಕೋಟಿಗಳಷ್ಟು ಅನುಷ್ಟಾನ ಮಾಡಲಾಗಿರುತ್ತದೆ. ಕೇಂದ್ರವನ್ನು ನಿರ್ಮಿಸಲು ಮಂಗಳೂರಿನ ಹೊಯ್ಗೆ ಬಝಾರ್ ನಲ್ಲಿರುವ ಮೀನುಗಾರಿಕಾ ಕಾಲೇಜಿನ ಅಂಗ ಸಂಸ್ಥೆಯಾದ ತಾಂತ್ರಿಕ ವಿಭಾಗವನ್ನು ಆಯ್ಕೆ ಮಾಡಲಾಗಿದೆ. ಕೌಶಲ್ಯಾಭಿವೃದ್ದಿ ತರಬೇತಿಗಾಗಿ 2.35 ಕೋಟಿ ರೂಗಳಷ್ಟು ಮೀಸಲಿಡಲಾಗಿದೆ.

ಕರ್ನಾಟಕ ರಾಜ್ಯದ ಒಟ್ಟು 7 ಸ್ಮಾರ್ಟ್ ಸಿಟಿಗಳಾದ ಬೆಂಗಳೂರು, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಬೆಳಗಾವಿ ಮತ್ತು ಮಂಗಳೂರು ಗಳಲ್ಲಿ ನಗರಗಳ ಸೌಂದರ್ಯ ವೃದ್ದಿತಾ ಕಾರ್ಯಗಳ ವಿವಿಧ ಯೋಜನೆಗಳು ಕಾಮಗಾರಿಯಲ್ಲಿವೆ. ಆದರೆ, ಭಾರತ ದೇಶದ ಮೀನುಗಾರಿಕಾ ಕ್ಷೇತ್ರದಲ್ಲಿ ಅದರಲ್ಲೂ ಸ್ಮಾರ್ಟ್ ಸಿಟಿ ಅಡಿಯಲ್ಲಿ ಕೌಶಾಲಾಭಿವೃದ್ದಿ ಮತ್ತು ಸುರಕ್ಷ ಕೇಂದ್ರ ಮಂಗಳೂರಿನಲ್ಲಿ ಅಸ್ಥಿತಕ್ಕೆ ಬರುತ್ತಿರುವುದು ಇದೇ ಮೊದಲನೆಯದು ಎಂದು ನೋಡಲ್ ಅಧಿಕಾರಿ ಪ್ರೊಫೆಸರ್ ಡಾ| ಎ.ಟಿ. ರಾಮಚಂದ್ರ ನಾಯ್ಕ ರವರು ಅಭಿಪ್ರಾಯ ವ್ಯಕ್ತವಡಿಸಿದ್ದಾರೆ.

ಎರಡು ಮಹಡಿಗಳ ತರಬೇತಿ ಕೇಂದ್ರ ನಿರ್ಮಿಸಲು ಮತ್ತು ತರಬೇತಿ ಕಾರ್ಯಕ್ರಮಗಳನ್ನು ನಡೆಸುವ ಸಲುವಾಗಿ ಮೇ 13 ರಂದು ವಿಶ್ವವಿದ್ಯಾಲಯದ ಪರವಾಗಿ ಮೀನುಗಾರಿಕಾ ಕಾಲೇಜು ಮತ್ತು ಎಂ.ಎಸ್.ಸಿ.ಎಲ್. ಗಳ ನಡುವೆ ಒಪ್ಪಂದದ ಸಹಿ (ಎಂ.ಒ.ಯು.) ಮಾಡಲಾಯಿತು.

ಈ ಒಪ್ಪಂದದ ಸಭೆಗೆ ಕಾಲೇಜಿನವತಿಯಿಂದ ಕೇಂದ್ರದ ನಿರ್ದೇಶಕರಾಗಿ ಡೀನ್ ಡಾ| ಎ. ಸೆಂಥಿಲ್ ವೆಲ್, ಕೇಂದ್ರದ ನೋಡಲ್ ಅಧಿಕಾರಿ ಹಾಗೂ ಸಂಯೋಜಕರಾಗಿ ಪ್ರೊಫೆಸರ್ ಡಾ| ಎ.ಟಿ. ರಾಮಚಂದ್ರ ನಾಯ್ಕ ಮತ್ತು ಎಂ.ಎಸ್.ಸಿ.ಎಲ್.ನ ಪರವಾಗಿ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ನಝೀರ್, ಕಾರ್ಯನಿರ್ವಾಹಕ ಇಂಜೀನಿಯರ್ ಚಂದ್ರಕಾಂತ್ ಬಾಣ್ಣೋಥ್ ರವರು ಒಪ್ಪಂದಕ್ಕೆ (ಒಡಂಬಡಿಕೆ) ಸಹಿಮಾಡಿದರು.

ಒಡಂಬಡಿಕೆಯ ಸಭೆಯಲ್ಲಿ ಕಾಲೇಜಿನ ಜಾಗರೂಕತಾಧಿಕಾರಿ ಡಾ| ಕೆ.ಎಸ್. ರಮೇಶ್, ಆಸ್ತಿ ಶಾಖೆಯ ಮುಖ್ಯಸ್ಥ ಡಾ| ಹೆಚ್.ಎನ್. ಅಂಜನೇಯಪ್ಪ, ಸಹ ವಿಸ್ಥರಣಾ ನಿರ್ದೇಶಕ ಡಾ| ಶಿವಕುಮಾರ ಎಂ., ಸಹಾಯಕ ಹಣಕಾಸು ನಿಯಂತ್ರಣಾಧಿಕಾರಿ ಡಾ| ಎಸ್.ಆರ್. ಸೋಮಶೇಖರ, ಸಹಾಯಕ ಆಡಳಿತಾಧಿಕಾರಿ ಡಾ| ಎಸ್. ಸಿದ್ದಪ್ಪಾಜಿ ಮತ್ತು ತಾಂತ್ರಿಕ ವಿಭಾಗದ ಪ್ರಭಾರಿ ಡಾ| ಎಸ್. ವರದರಾಜು ಉಪಸ್ಥಿತರಿದ್ದರು. ಎಂ.ಎಸ್.ಸಿ.ಎಲ್.ನ ಸಹಾಯಕ ಇಂಜೀನಿಯರ್ ಅನಂತ್ ಎಸ್. ಶಂಕರ್ ಹಾಜರಿದ್ದರು.

ಎಂ.ಎಸ್.ಸಿ.ಎಲ್. ನ ಮಾಜಿ ಸಹಾಯಕ ಆಯುಕ್ತ ಡಾ| ನಾಗರಾಜ್; ವಿಶ್ವವಿದ್ಯಾಲಯದ ಕುಲಪತಿ ಡಾ| ಹೆಚ್.ಡಿ. ನಾರಾಯಣಸ್ವಾಮಿ, ಕುಲಸಚಿವ ಡಾ| ಕೆ.ಸಿ. ವೀರಣ್ಣ ಮತ್ತು ವ್ಯವಸ್ತಾಪಕ ಮಂಡಳಿ ಸದಸ್ಯರುಗಳ ಸಹಕಾರ ಈ ವಿಶೇಷ ಯೋಜನೆಯನ್ನು ಮೀನುಗಾರಿಕಾ ಕಾಲೇಜಿನಲ್ಲಿ ಅನುಷ್ಟಾನ ಮಾಡಲು ಸಹಕರಿಸಿದ್ದಾರೆಂದು ಪ್ರೊಫೆಸರ್ ಡಾ| ಎ.ಟಿ. ರಾಮಚಂದ್ರ ನಾಯ್ಕ ಈ ಸಂದರ್ಭದಲ್ಲಿ ಹೇಳಿದರು.

ಕೌಶಲಾಭಿವೃದ್ಧಿ ಕೇಂದ್ರ ನಿರ್ಮಿಸಲು 9 ತಿಂಗಳ ಸಮಯ ಬೇಕಿದೆ ಹಾಗೂ ಈಗಾಗಲೇ ಕಟ್ಟಡದ ನಿರ್ಮಾಣ ಪ್ರಗತಿಯಲ್ಲಿದೆ. ಕೇಂದ್ರ ಸ್ಥಾಪನೆಯಾದ ನಂತರ ಎರಡು ವರ್ಷಗಳವರೆಗೆ ಒಟ್ಟು 360 ಶಿಭಿರಾರ್ಥಿಗಳಿಗೆ ತರಬೇತಿ ನೀಡುವ ಕರ್ತವ್ಯ ಮೀನುಗಾರಿಕಾ ಕಾಲೇಜಿನದಾಗಿರುತ್ತದೆ. ಕೌಶಲಾಭಿವೃದ್ದಿ ಕೇಂದ್ರದ ಮತ್ತು ತರಬೇತಿಯ ಸಂಯೋಜಕರುಗಳಾಗಿ ಮೀನುಗಾರಿಕಾ ಕಾಲೇಜಿನವತಿಯಿಂದ ಪ್ರೊಫೆಸರ್ ಡಾ| ಎ.ಟಿ. ರಾಮಚಂದ್ರ ನಾಯ್ಕ ಮತ್ತು ಸಹಾಯಕ ಪ್ರೊಫೆಸರ್ ಡಾ| ಕುಮಾರನಾಯ್ಕ ಎ.ಎಸ್. ರವರಾದರೆ, ನಿರ್ದೇಶಕರಾಗಿ ಕಾಲೇಜಿನ ಡೀನ್ ಡಾ| ಎ. ಸೆಂಥಿಲ್ ವೆಲ್ ಆಗಿರುತ್ತಾರೆ.

ಪ್ರತೀ ತರಬೇತಿ ಶಿಭಿರಕ್ಕೆ ತಲಾ 30 ಅಭ್ಯರ್ಥಿಗಳಂತೆ ಆಯ್ಕೆ ಮಾಡಿ 30 ದಿನಗಳವರೆಗೆ ವರ್ಷಕ್ಕೆ 180 ನಿರುದ್ಯೋಗಿ ಯುವಕ-ಯುವತಿ, ಗೃಹಿಣಿ ಹಾಗೂ ಪದವಿ ಮತ್ತು ಶಾಲಾ ಶಿಕ್ಷಣವನ್ನು ಅರ್ಧದಲ್ಲಿ ಬಿಟ್ಟವರಿಗೆ ತರಬೇತಿಯನ್ನು ನೀಡುವ ಗುರಿ ಇದೆ. ಕೌಶಲ್ಯಾಭಿವೃದ್ದಿ ತರಬೇತಿಯನ್ನು ಒಟ್ಟು ಎರಡು ವರ್ಷಗಳವರೆಗೆ ನಡೆಸಲಾಗುವುದು.

ತರಬೇತಿಯನ್ನು ಕೇಂದ್ರದ ಲೋಕಾರ್ಪಣೆಯಾದ ನಂತರ 8 ವಿವಿಧ ವಿಷಯಗಳಲ್ಲಿ ನೀಡಲಾಗುವುದೆಂದು ಕೌಶಲಾಭಿವೃದ್ದಿ ಕೇಂದ್ರ ಹಾಗೂ ತರಬೇತಿಯ ಕೋರಾರ್ಡಿನೇಟರ್ ಆದ ಪ್ರೊಫೆಸರ್ ಡಾ| ಎ.ಟಿ. ರಾಮಚಂದ್ರ ನಾಯ್ಕ ತಿಳಿಸಿದರು.

ಆ 8 ತರಬೇತಿ ವಿಷಯಗಳು ಇಂತಿವೆ:

1. ಅಕ್ವೇರಿಯಂ ಜೋಡಣೆ, ನಿರ್ವಹಣೆ ಮತ್ತು ಅಲಂಕಾರಿಕಾ ಮೀನುಗಳ ಪಾಲನೆ.
2. ಅಕ್ವಾಫೋನಿಕ್ / ಹೈಡ್ರೋಫೋನಿಕ್ ಸಮಗ್ರತೆಯ ಏಕಿಕರಣ.
3. ಮೀನಿನ ಮೌಲ್ಯವರ್ಧಿತ ಪದಾರ್ಥಗಳ ತಯಾರಿಕೆ ಮತ್ತು ಮಾರಾಟ ವೃದ್ದಿಕೆ.
4. ಮೀನಿನ ಸಂಸ್ಕರಣೆಯಲ್ಲಿ ಸುಧಾರಿತ ತಂತ್ರಜ್ಞಾನ ಬಳಕೆ ಹಾಗೂ ಧಾರಣೆ.
5. ಮೀನಿನ ತಾಜ್ಯದಿಂದ ಗೊಬ್ಬರ ತಯಾರಿಕೆ.
6. ಸ್ಕ್ಯೂಬಾ ಡೈವಿಂಗ್ ಮ್ ಮತ್ತು ಸ್ನಾರ್ಕ್ಲಿಂಗ್.
7. ಮೀನುಗಾರಿಕೆ ದೋಣಿಗಳ ನವೀಕರಣತೆ ಮತ್ತು ಸುರಕ್ಷತೆ.
8. ಮೀನಿನ ಬಲೆಗಳ ಹೆಣೆಯುವಿಕೆ ಮತ್ತು ನವೀಕರಣತೆ.
ಎಂ.ಎಸ್.ಸಿ.ಎಲ್. ಸಂಸ್ಥೆಯು ತರಬೇತಿಯ ಸಂಪೂರ್ಣ ಖರ್ಚು-ವೆಚ್ಚವನ್ನು ಭರಿಸುತ್ತದೆಂದು ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ನಝೀರ್ ಹೇಳಿದರು.

ಆಯ್ಕೆ ಮಾಡಲ್ಪಟ್ಟ 8 ವಿವಿಧ ವಿಷಯಗಳ ಜೊತೆಗೆ ಪ್ರಸ್ತುತ ಸಮಯಕ್ಕೆ ಅವಶ್ಯವಿರುವ ಇತರೆ ಮೀನುಗಾರಿಕಾ ತಾಂತ್ರಿಕತೆಗಳನ್ನೂ ಸಹಾ ಬೇಡಿಕೆಯ ಮೇರೆಗೆ ಪರಿಗಣಿಸಿ ಕೌಶಲ್ಯ-ಕಸುತಿ ತರಬೇತಿ ಕೊಡಲಾಗುವುದೆಂದು ಕೂಡ ಈ ಸಂದರ್ಭದಲ್ಲಿ ಅವರು ಪ್ರಸ್ಥಾಪಿಸಿದರು.

ಆಯ್ಕೆಯಾದ ಶಿಭಿರಾರ್ಥಿಗಳಿಗೆ ತರಬೇತಿಯನ್ನು ಅನುಷ್ಟಾನಗೊಳಿಸುವ ಮುನ್ನ ಸಂಪನ್ಮೂಲ ವ್ಯಕ್ತಿಗಳನ್ನು ಟ್ರೈನಿಂಗ್ ಆಫ್ ಟ್ರೈನರ್ ಕಾರ್ಯಾಗಾರದ ಮುಖೇನ ಆರಿಸಲಾಗುವುದು. ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಗಳ ಸಹಯೋಗದಿಂದ ಈ ಕಾರ್ಯಗಾರವನ್ನು ನಡೆಸಲಾಗುವುದು.

ನುರಿತ ವಿಷಯ ತಜ್ಞರುಗಳನ್ನು ಮೀನುಗಾರಿಕಾ ಕಾಲೇಜು, ಪರಿಣಿತ ಸಂಸ್ಥೆಗಳ ತರಬೇತುದಾರರು ಹಾಗೂ ಆಹ್ವಾನಿತ ನುರಿತ ಅತಿಥಿ ಸಂಪನ್ಮೂಲ ವ್ಯಕ್ತಿಗಳ ಸಹಾಯದಿಂದ ಪ್ರಾತ್ಯಕ್ಷೀಯವಾಗಿ ತರಬೇತಿ ನೀಡಲಾಗುವುದೆಂದು ಕೇಂದ್ರದ ನೋಡಲ್ ಆಫಿಸರ್ ಹಾಗೂ ತರಬೇತಿಯ ಸಂಯೋಜಕ ಪ್ರೊಫೆಸರ್ ಡಾ| ಎ.ಟಿ. ರಾಮಚಂದ್ರ ನಾಯ್ಕ ತಿಳಿಸಿದರು.

Comments are closed.