ಕರಾವಳಿ

ದ.ಕ.ಜಿಲ್ಲೆಯಲ್ಲಿ 8 ಮಂದಿ ಕೊರೋನಾಗೆ ಬಲಿ: ಕಳೆದ ಐದು ದಿನದಿಂದ ಪ್ರತಿದಿನ ‌8 ಮಂದಿ ಸಾವು

Pinterest LinkedIn Tumblr

ಮಂಗಳೂರು, ಜುಲೈ.28: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ‌ ಕೊರೋನಾ ಸೋಂಕಿಗೆ ಬರೋಬ್ಬರಿ‌ 8 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನದಿಂದ ಮೃತಪಟ್ಟವರ ಒಟ್ಟು ಸಂಖ್ಯೆ 131ಕ್ಕೆ ಏರಿಕೆಯಾಗಿದೆ. ಕಳೆದ ಐದು ದಿನದಿಂದ ಪ್ರತಿದಿನ‌ ಎಂಟು ಮಂದಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿನಿಂದ ಸಾವು ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಕೊರೋನ ಸೋಂಕಿನಿಂದ ಸಾವಿಗೀಡಾದ ಎಂಟು ಮಂದಿಯು 51ರಿಂದ 92 ವರ್ಷದೊಳಗಿನವರೇ ಆಗಿದ್ದಾರೆ.

ಮೃತರಲ್ಲಿ ಐವರು ಮಂಗಳೂರಿನವರು, ಬಂಟ್ವಾಳ, ಉಡುಪಿ, ಹುಬ್ಬಳ್ಳಿ ಮೂಲದ ತಲಾ ಓರ್ವರು ಇದ್ದಾರೆ. ಆರು ಮಂದಿ ಪುರುಷರಿದ್ದರೆ, ಇಬ್ಬರು ಮಹಿಳೆಯರು. ಇವರಲ್ಲಿ ಐವರು ಖಾಸಗಿ ಆಸ್ಪತ್ರೆ ಹಾಗೂ ಮೂವರು ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.

ಮಂಗಳೂರಿನ 92 ವರ್ಷದ ವೃದ್ಧೆ ಅಧಿಕ ರಕ್ತದೊತ್ತಡ, ಡಯಾಬಿಟಿಸ್, ನ್ಯುಮೋನಿಯ, 68 ವರ್ಷದ ವೃದ್ಧ ಹೈಪೊಕ್ಷೆಮಿಯ, ತೀವ್ರ ಉಸಿರಾಟ ತೊಂದರೆ, ಅಧಿಕ ರಕ್ತದೊತ್ತಡ, ಅಸ್ತಮಾ, ಡಯಾಬಿಟಿಸ್, ಹೃದಯ ಸಂಬಂಧಿ ಕಾಯಿಲೆ, 65 ವರ್ಷದ ವೃದ್ಧ ತೀವ್ರ ಉಸಿರಾಟ ತೊಂದರೆ, ಸೆಪ್ಟಿಕ್ ಶಾಕ್, ಮೂತ್ರಪಿಂಡ ವೈಫಲ್ಯ, ಮಧುಮೇಹ, ಅಧಿಕ ರಕ್ತದೊತ್ತಡ, ಪೆರ್ಕ್ಯುಟೇನಿಯಸ್ ಟ್ರಾನ್ಸ್‌ಲ್ಯುಮಿನಲ್ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ, 65 ವರ್ಷದ ವೃದ್ಧೆ ಮೂತ್ರಪಿಂಡ ವೈಫಲ್ಯ, ಹೈಪೊಕ್ಷೆಮಿಯ, ತೀವ್ರ ಉಸಿರಾಟ ತೊಂದರೆ, ಸೆಪ್ಟಿಕ್ ಶಾಕ್, ಬ್ಯಾಕ್ಟೀರಿಯಲ್ ಸೋಂಕು, ತೀವ್ರ ಪರಿಧಮನಿ ಸಮಸ್ಯೆ, ಅಸಹಜ ಹೃದಯ ಬಡಿತ ಸಮಸ್ಯೆ, ಶ್ವಾಸಕೋಶ ಸಮಸ್ಯೆ, 51 ವರ್ಷದ ಪುರುಷ ನ್ಯುಮೋನಿಯದಿಂದ ಬಳಲುತ್ತಿದ್ದರು.

ಬಂಟ್ವಾಳ ನಿವಾಸಿ 65 ವರ್ಷದ ವೃದ್ಧ ಅಧಿಕ ರಕ್ತದೊತ್ತಡ, ನ್ಯುಮೋನಿಯ, ಉಡುಪಿ ನಿವಾಸಿ 82 ವರ್ಷದ ವೃದ್ಧ ಅಧಿಕ ರಕ್ತದೊತ್ತಡ, ‘ಟಿಎಡಿಎಂ’, ಪರಿಧಮನಿ ಕಾಯಿಲೆ, ಹೃದಯ ಸ್ತಂಭನ, ನ್ಯುಮೋನಿಯ, ಉಸಿರಾಟ ತೊಂದರೆ, ಹೃದಯ ಸಂಬಂಧಿ ಕಾಯಿಲೆ, ಹುಬ್ಬಳ್ಳಿ ಮೂಲದ 68 ವರ್ಷದ ವೃದ್ಧ ತೀವ್ರ ಉಸಿರಾಟ ತೊಂದರೆ, ಹೈಪೋಕ್ಸೆಮಿಯದಿಂದ ಬಳಲುತ್ತಿದ್ದರು. ಮೃತರಿಗೆ ಕೊರೋನ ಸೋಂಕು ತಗುಲಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.

ಸೋಮವಾರದ ಪ್ರಮುಖ ಅಂಶಗಳು :

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಎಂಟು ಮಂದಿ ಕೊರೋನಾ ಮಹಾಮಾರಿಗೆ ಬಲಿ

ಜಿಲ್ಲೆಯಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 131ಕ್ಕೆ ಏರಿಕೆ

ಕಳೆದ ಐದು ದಿನದಿಂದ ಪ್ರತಿದಿನ‌ ಎಂಟು ಮಂದಿ ಸಾವು

ಮಂಗಳೂರು ನಿವಾಸಿಗಳಾದ 51,64, ಹಾಗೂ 65 ವರ್ಷದ ಗಂಡಸರು,65 ಹಾಗೂ 92 ವರ್ಷದ ಇಬ್ಬರು ವೃದ್ಧ ಮಹಿಳೆಯರು ಸಾವು

ಬಂಟ್ವಾಳದ 65,ಹುಬ್ಬಳ್ಳಿಯ 68,ಉಡುಪಿಯ 82 ವರ್ಷದ ‌ಗಂಡಸರು ಕೊರೋನಾಗೆ ಬಲಿ

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಾವಿನ‌ ಸಂಖ್ಯೆ.

Comments are closed.