ಕರಾವಳಿ

ಕೋರೋನಾ ನಿಗ್ರಹಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲ : ಉಮೇಶ್ ಶಕ್ತಿನಗರ ಆರೋಪ

Pinterest LinkedIn Tumblr

ಮಂಗಳೂರು ; ರಾಜ್ಯದಲ್ಲಿ ಕೋರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ದ.ಕ. ಜಿಲ್ಲೆ ಯಲ್ಲಿಯೂ ಭಯಭೀತಿಯನ್ನು ಹುಟ್ಟಿಸಿದೆ.ಕೇವಲ 12 ಸೋಂಕಿತರು ಇದ್ದಾಗ ಕಟ್ಟುನಿಟ್ಟಿನ ಕ್ರಮವಹಿಸಿದ್ದ ಜಿಲ್ಲಾಡಳಿತವು, ಇಂದು ಸಾವಿರ ಗಡಿಯತ್ತ ಹೋಗುತ್ತಿರುವಾಗ ಕೈಚೆಲ್ಲಿ ಕುಳಿತಿದೆ.

ಕ್ವಾರಂಟೈನ್ ನಲ್ಲಿದ್ದವರಿಗೆ ಸರಿಯಾದ ವ್ಯವಸ್ಥೆ ಇಲ್ಲ,ಸೀಲ್ ಡೌನ್ ಆದ ಪ್ರದೇಶಗಳನ್ನು ಕೇಳುವವರೇ ಇಲ್ಲ.ಜಿಲ್ಲೆಯ ಜನತೆ ಭಯಗ್ರಸ್ತರಾಗಿದ್ದು,ಅವರಿಗೆ ಧೈರ್ಯ ನೀಡಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು,ಶಾಸಕರು ಸೇರಿದಂತೆ ಇಡೀ ಜಿಲ್ಲಾಡಳಿತವೇ ತೀರಾ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಮುಖಂಡರಾದ ಉಮೇಶ್ ಶಕ್ತಿನಗರ ಇವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳ ವಿರುದ್ದ ಶಕ್ತಿನಗರದಲ್ಕಿ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ CPIM ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, ಲಾಕ್ ಡೌನ್ ನಿಂದಾಗಿ ಲಕ್ಷಾಂತರ ಕಾರ್ಮಿಕರು ಕೆಲಸಗಳನ್ನು ಕಳೆದುಕೊಂಡಿದ್ದು,ಅವರಿಗೆ ಉದ್ಯೋಗದ ಭದ್ರತೆಯನ್ನು ಸರಕಾರ ಒದಗಿಸಬೇಕು.

ತೀರಾ ಸಂಕಷ್ಟದಲ್ಲಿರುವ ಬೀಡಿ,ಬೀದಿಬದಿ, ಹಮಾಲಿ, ಬಸ್ ನೌಕರರು, ಹೋಟೆಲ್ ಕಾರ್ಮಿಕರು,ಖಾಸಗೀ ಶಾಲಾ ಶಿಕ್ಷಕರು, ಕಲಾವಿದರು ಸೇರಿದಂತೆ ವಿವಿಧ ವಿಭಾಗದ ಕಾರ್ಮಿಕರಿಗೆ ಸರಕಾರದಿಂದ ಯಾವುದೇ ರೀತಿಯ ಪರಿಹಾರ ಧನ ಘೋಷಣೆಯಾಗಿಲ್ಲ. ಈ ಬಗ್ಗೆ ಸರಕಾರ ಕೂಡಲೇ ಗಮನಹರಿಸಬೇಕೆಂದು ಹೇಳಿದರು.

ಸಿಪಿಐಎಂ ನಾಯಕರಾದ ಭಾಗೀರಥಿ,ತುಕಾರಾಮ,ಮಲ್ಲಿಕಾರ್ಜುನ,ಡಿವೈ ಎಫ್ ಐ ನಾಯಕರಾದ ರಾಹುಲ್,ಭರತ್,ಪ್ರಸಾದ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Comments are closed.