ಕರಾವಳಿ

ಸಂಖ್ಯಾ ಶಾಸ್ತ್ರದ ಪಿತಾಮಹ ಪ್ರೊ. ಪಿ.ಸಿ. ಮಹಾಲನೋಬಿಸ್ 27ನೇ ಜನ್ಮ ದಿನಾಚರಣೆ

Pinterest LinkedIn Tumblr

ಮಂಗಳೂರು : ಸಂಖ್ಯಾ ಶಾಸ್ತ್ರದ ಪಿತಾಮಹ ಪ್ರೊ. ಪಿ.ಸಿ. ಮಹಾಲನೋಬಿಸ್ ಇವರ 127ನೇ ಜನ್ಮ ದಿನಾಚರಣೆಯನ್ನು ಸರ್ಕಾರದ ನಿರ್ದೇಶನದಂತೆ “14ನೇ ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆ”ಯನ್ನಾಗಿ ದಕ್ಷಿಣ ಕನ್ನಡ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಯವರ ಕಛೇರಿಯಲ್ಲಿ ಇತ್ತೀಚಿಗೆ ಆಚರಿಸಲಾಯಿತು.

ಸರ್ಕಾರದ ನಿರ್ದೇಶನದಂತೆ ಜೂನ್ 26 ರಂದು ಬೆಳಿಗ್ಗೆ ವಿಶ್ವಸಂಸ್ಥೆ ನಿಗದಿಪಡಿಸಿರುವ 17 ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಎರಡು ವಿಷಯಗಳಾದ ಎಲ್ಲಾ ವಯೋವೃದ್ಧರಲ್ಲಿ ಆರೋಗ್ಯಕರ ಜೀವನವನ್ನು ಖಾತ್ರಿ ಪಡಿಸಿ ಯೋಗಕ್ಷೇಮವನ್ನು ಉತ್ತೇಜಿಸುವುದು, ಲಿಂಗ ಅಸಮಾನತೆಯನ್ನು ಹೋಗಲಾಡಿಸಿ, ಮಹಿಳೆಯರು ಹಾಗೂ ಹೆಣ್ಣು ಮಕ್ಕಳನ್ನು ಸಶಕ್ತರನ್ನಾಗಿಸುವುದರ ಬಗ್ಗೆ ಸಂಬಂಧಿಸಿದ ಗುರಿಗಳನ್ನು ಜಿಲ್ಲಾ/ತಾಲೂಕು ಮಟ್ಟದ ಅಧಿಕಾರಿಗಳಿಗೆ ಹಾಗೂ ಸಾಂಖ್ಯಿಕ ಸಿಬ್ಬಂದಿಗಳಿಗೆ ಆನ್‍ಲೈನ್ ಮೂಲಕ ಮಾಹಿತಿಯನ್ನು ನೀಡಲಾಯಿತು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜಾó ಮಾತನಾಡಿ, ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿರುವುದರಿಂದ ಸುಸ್ಥಿರ ಅಭಿವೃದ್ಧಿಗೆ ಏನು ಮಾಡಬೇಕು ಎಂಬುದನ್ನು ಪ್ರಶಾಂತ ಚಂದ್ರ ಮಹಾಲನೋಬಿಸ್‍ರವರು ತಿಳಿಸಿದ್ದಾರೆ. ಇದನ್ನು ಅಭಿವೃದ್ಧಿಪಡಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳು ಶ್ರಮಪಡಬೇಕು ಹಾಗೂ ಸರ್ಕಾರ ಜಾರಿಗೊಳಿಸುವ ಯೋಜನೆಗಳು ಅನುಷ್ಟಾನಗೊಳಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಿದಾಗ ಮಾತ್ರ ಮಾಡಿದ ಕೆಲಸಕ್ಕೆ ಸಾಕ್ಷಾತ್ಕಾರ ದೊರೆಯುತ್ತದೆ ಎಂದು ಹೇಳಿದರು.

ದೇಶದ ಅಭಿವೃದ್ಧಿಗಾಗಿ ಯೋಜನೆಯನ್ನು ರೂಪಿಸಬೇಕಾದರೆ ಪ್ರಾಥಮಿಕ ದತ್ತಾಂಶ ಎನ್ನುವುದು ಬಹಳ ಅವಶ್ಯಕವಾಗಿರುತ್ತದೆ ಎಂಬುದಕ್ಕೆ ಬಹಳ ದಶಕಗಳ ಹಿಂದೆಯೇ ಪ್ರೊ. ಪಿ.ಸಿ. ಮಹಾಲನೋಬಿಸ್‍ರವರು ಹೆಚ್ಚಿನ ಒತ್ತನ್ನು ನೀಡಿದ್ದರು. ಒಂದು ದೇಶ ವ್ಯವಸ್ಥಿತವಾಗಿ ಸಮಗ್ರವಾಗಿ ಎಲ್ಲರನ್ನು ಒಳಗೊಂಡು ಅಭಿವೃದ್ಧಿಯಾಗಬೇಕಾದರೆ ಅಂಕಿ ಅಂಶಗಳು ಹಾಗೂ ಅದರ ವಿಶ್ಲೇಷಣೆಯ ಮಾಹಿತಿ ಪ್ರಮುಖವಾಗಿದೆ ಎಂದು ಅವರು ತಿಳಿಸಿಕೊಟ್ಟಿದ್ದಾರೆ ಮತ್ತು ಈ ಅಂಕಿ ಅಂಶಗಳನ್ನು ಸಂಗ್ರಹಿಸುವುದು ಸುಲಭದ ಕೆಲಸವಲ್ಲ. ಏಕೆಂದರೆ, ಒಂದು ಮಾಹಿತಿ ಸಮಗ್ರವಾಗಿರಬೇಕು, ಪ್ರಾಯೋಗಿಕವಾಗಿರಬೇಕು ಮತ್ತು ಯಾವುದೇ ಲೋಪದೋಷಗಳು ಇರಬಾರದೆಂದು ತಿಳಿಸಿದರು.

ಪ್ರೊ. ಪಿ.ಸಿ. ಮಹಾಲನೋಬಿಸ್‍ರವರು ಹಾಕಿಕೊಟ್ಟಂತಹ ತಳಪಾಯಕ್ಕೆ ನಮ್ಮ ಭಾರತ ದೇಶ ಪಂಚವಾರ್ಷಿಕ ಯೋಜನೆಗಳು ನಿರ್ಮಾಣವಾಗಿವೆ. ಪ್ರತಿ ಐದು ವರ್ಷಗಳಿಗೊಮ್ಮೆ ನಮ್ಮ ಆದಾಯ ಖರ್ಚು ವೆಚ್ಚಗಳನ್ನು ತಿಳಿದುಕೊಂಡು ನಾವು ಯಾವ ರೀತಿ ವೆಚ್ಚ ಮಾಡಿದರೆ ದೇಶದ ಅಭಿವೃದ್ಧಿಯನ್ನು ಸಾಧಿಸಬಹುದು

ಎಂಬುದರ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಇದರ ಜೊತೆಗೆ ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಗಣತಿಯ ದತ್ತಾಂಶ ಮತ್ತು ಕಾಲಕಾಲಕ್ಕೆ ಕೃಷಿ ಚಟುವಟಿಕೆಗಳು, ಬೆಳೆಗಳ ಸಂಶೋಧನೆ, ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಯೋಜನೆಗಳ ಸರ್ವೆ, ಲಿಂಗಾನುಪಾತದ ಸರ್ವೆಗಳು ಹೇಗೆ ನಮ್ಮ ಮುಂದಿನ ಅಭಿವೃದ್ಧಿಗೆ ಪೂರಕವಾಗುತ್ತವೆ ಎಂಬುದರ ಬಗ್ಗೆ ತಿಳಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಸಭೆಯ ಅಧ್ಯಕ್ಷತೆಂ ವಹಿಸಿದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಡಾ| ಉದಯ ಶೆಟ್ಟಿ ಮಾತನಾಡಿ, ಒಬ್ಬ ಸಂಖ್ಯಾ ಶಾಸ್ತ್ರಜ್ಞ ಒಂದು ದೇಶಕ್ಕೆ ಏನೆಲ್ಲಾ ಕೊಡುಗೆ ನೀಡಬಹುದು ಎಂಬುದಕ್ಕೆ ಮಾಹಾಲನೋಬಿಸ್‍ ರವರು ಉದಾಹರಣೆ. ಅಂದಿನ ಕೇಂದ್ರ ಸರ್ಕಾರ ಇವರನ್ನು ಸಾಂಖ್ಯಿಕ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿತ್ತು. ಇವರ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದೆ ಎಂದು ತಿಳಿಸಿದರು.

ಸಹಾಯಕ ಸಾಂಖ್ಯಿಕ ಅಧಿಕಾರಿ ಕೆ. ರತ್ನಾಕರ ಸ್ವಾಗತಿಸಿ, ಸಹಾಯಕ ಸಾಂಖ್ಯಿಕ ಅಧಿಕಾರಿ ಮಾರುತಿಪ್ರಸಾದ್ ಬಿ.ವಿ ನಿರೂಪಿಸಿದರು.

Comments are closed.