ಕರಾವಳಿ

ಗೋ ಕಳ್ಳ, ಸಾಗಾಟಗಾರ ಮೊಹಮದ್ ಹನೀಫ್ ಮೇಲೆ ಗೂಂಡಾ ಕಾಯ್ದೆಗೆ ವಿಶ್ವಹಿಂದೂ ಪರಿಷದ್ ಆಗ್ರಹ

Pinterest LinkedIn Tumblr

ಮಂಗಳೂರು : ಇತ್ತೀಚಿಗೆ ಕೊಟ್ಟಾರದಲ್ಲಿ ಗೋ ಕಳ್ಳ ಸಾಗಾಟ ಮಾಡುವಾಗ ಸಿಕ್ಕಿಬಿದ್ದ ಜೋಕಟ್ಟೆಯ ಮೊಹಮದ್ ಹನೀಫ್ ಎಂಬವನು ಅಂತರರಾಜ್ಯ ಗೋ ಕಳ್ಳ ಸಾಗಾಟಗಾರನಾಗಿದ್ದು, ಅಕ್ರಮವಾಗಿ ಗೋವುಗಳನ್ನು ಹತ್ಯೆಮಾಡಿ ಮಾರಾಟ ಮಾಡುವುದರಲ್ಲಿ ನಿಸ್ಸೀಮನಾಗಿದ್ದಾನೆ.

ಕಳೆದ ವರ್ಷ ಜೋಕಟ್ಟೆಯ ಅಕ್ರಮ ಕಸಾಯಿಖಾನೆಗೆ ದಾಳಿ ಮಾಡಿ ವಶಪಡಿಸಿದ ಗೋವುಗಳನ್ನು ಈತ ಸುಳ್ಳು ದಾಖಲೆ ಸೃಷ್ಟಿಸಿ ನ್ಯಾಯಾಲಯದಿಂದ ಹಿಂಪಡೆದ ಸಂಧರ್ಭದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಿಸಿ, ಕೋಮುಗಲಭೆಗೆ ಪ್ರಚೋದನೆ ನೀಡಿದ್ದ.

ಈಗಾಗಲೇ ರಾಜ್ಯದ ಬೇರೆ ಬೇರೆ ಕಡೆ ಪ್ರಕರಣಗಳಿದ್ದು ಬ್ರಹ್ಮವರ, ಸಕಲೇಶಪುರ, ಹಾಸನ, ಚಿಕ್ಕಮಗಳೂರು, ಉಪ್ಪಿನಂಗಡಿ ಮತ್ತು ಪಣಂಬೂರು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ಇದೀಗ ಅಕ್ರಮ ಗೋಸಾಗಾಟದಲ್ಲಿ ಉರ್ವ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದ್ದು, ಪಣಂಬೂರು ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ. ಇವನ ಮೇಲೆ ಇಷ್ಟು ಕೇಸುಗಳು ಇದ್ದರೂ ಗೋವುಗಳ ಸಾಗಾಟ ನಿರಂತ ಮಾಡುತ್ತಿರುವುದು ಕಂಡುಬಂದಿರುವುದರಿಂದ ಇವನ ಮೇಲೆ ಗೂಂಡಾ ಕಾಯ್ದೆಯನ್ನು ಹಾಕಿ ಕಠಿಣ ಶಿಕ್ಷೆಗೆ ಒಳಪಡಿಸಲು ಜಿಲ್ಲಾಡಳಿತಕ್ಕೆ ಆಗ್ರಹ ಮಾಡುತ್ತಿದ್ದೇವೆ ಎಂದು ವಿಶ್ವ ಹಿಂದೂ ಪರಿಷದ್‌ನ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ತಿಳಿಸಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇವನ ಪತ್ರಿಕಾ ಹೇಳಿಕೆಯಲ್ಲಿ ” ನಾನು ಸೂಕ್ತ ದಾಖಲೆಯನ್ನು ಹೊಂದಿ ಕಸಾಯಿಖಾನೆಗೆ ಜಾನುವಾರುಗಳನ್ನು ಸಾಗಿಸುತಿದ್ದೆ ಎಂದು ಹೇಳಿಕೆ ನೀಡಿರುತ್ತಾನೆ,

ಕಾನೂನು ಪ್ರಕಾರ ಯಾವುದೇ ಜಾನುವಾರುಗಳನ್ನು ವಾಹನದಲ್ಲಿ ಸಾಗಾಟ ಮಾಡಬೇಕಾದರೆ, 2016 Transport Ammendment Act 11 ನೇ ತಿದ್ದುಪಡಿ ಪ್ರಕಾರ RTO ದಲ್ಲಿ ಜಾನುವಾರು ಸಾಗಾಟದ ವಾಹನ ಎಂದು ದಾಖಲಾಗಿರಬೇಕು.

ವಾಹನದಲ್ಲಿ ಜಾನುವಾರುಗಳನ್ನು ಸಾಗಾಟ ಮಾಡಬೇಕಾದರೆ ವಾಹನದಲ್ಲಿ ಸಾಕಷ್ಟು ಜಾಗವಿರಬೇಕು, ಗಾಳಿ, ಬೆಳಕು ಇರುವಂತೆ ನೋಡಿಕೊಳ್ಳಬೇಕು, ವಾಹನದ ವೇಗ 24KM ಗಂಟೆಗೆ ಮೀರಬಾರದು, ಜಾನುವಾರು ಸಾಗಾಟ ಮಾಡುವಾಗ ಪೊಲೀಸ್ ಠಾಣೆಯಲ್ಲಿ ಪರವಾನಿಗೆ ಪಡೆದಿರಬೇಕು ಮತ್ತು ಸರಕಾರಿ ಪಶು ವೈದ್ಯಾಧಿಕಾರಿಯವರ ಜಾನುವಾರುಗಳು ಸಾಗಾಟ ಯೋಗ್ಯ ಸರ್ಟಿಫಿಕೇಟ್ ನೀಡಬೇಕು. ಇದಾವುದೂ ಧಾಖಲೆಗಳು ಈತನ ಬಳಿ ಇರಲಿಲ್ಲ ಎಂದು ಶರಣ್ ಪಂಪವೆಲ್ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷದ್‌ನ ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್, ಬಜರಂಗದಳದ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ, ವಿಶ್ವ ಹಿಂದೂ ಪರಿಷದ್ ನ ಗೋರಕ್ಷ ಪ್ರಮುಖ್ ಪ್ರದೀಪ್ ಪಂಪುವೆಲ್ ಉಪಸ್ಥಿತರಿದ್ದರು.

Comments are closed.