ಎಂಎಸ್ ಧೋನಿ ಚಿತ್ರದ ಮೂಲಕ ಬಾಲಿವುಡ್ ನಲ್ಲಿ ಭರವಸೆ ನಟನಾಗಿದ್ದ ಸುಶಾಂತ್ ಸಿಂಗ್ ರಜಪೂತ್ ಅವರು ತಮ್ಮ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರು ಮೃತಪಟ್ಟ ನಾಲ್ಕು ದಿನಗಳಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಜೂನ್ 10ರಂದು ದಿಶಾ ಗೆಳೆಯರ ಜೊತೆ ಪಾರ್ಟಿ ಮಾಡುತ್ತಿದ್ದ ಸಂದರ್ಭದಲ್ಲಿ 14ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದರು. ದಿಶಾ ಸಾವಿಗೆ ಸುಶಾಂತ್ ಮರುಕಪಟ್ಟಿದ್ದರು.
ಇನ್ನು ಇಂದು ಮುಂಬೈನ ಬಾಂದ್ರಾ ನಿವಾಸದಲ್ಲಿ ಸುಶಾಂತ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪವಿತ್ರ ರಿಸ್ತಾ ಧಾರಾವಾಹಿ ಮೂಲಕ ಸುಶಾಂತ್ ಮನೆ ಮಾತನಾಗಿದ್ದರು. ನಂತರ ಬೆಳ್ಳಿ ಪರದೆಯಲ್ಲಿ ಮಿಂಚಿದ್ದರು.
ಕೈ ಪೋ ಚೇ, ಶುದ್ಧ ದೇಸಿ ರೊಮ್ಯಾನ್ಸ್, ಪಿಕೆ, ರಾಬ್ತಾ, ವೆಲ್ ಕಮ್ ನ್ಯೂಯಾರ್ಕ್, ಎಂಎಸ್ ಧೋನಿ, ಕೇದಾರನಾಥ್ ಸೇರಿದಂತೆ 11 ಚಿತ್ರಗಳಲ್ಲಿ ಸುಶಾಂತ್ ನಟಿಸಿದ್ದರು.
1981 ಜನವರಿ 21ರಂದು ಬಿಹಾರದ ಪಾಟ್ನಾದಲ್ಲಿ ಸುಶಾಂತ್ ಸಿಂಗ್ ಜನಿಸಿದ್ದರು.
Comments are closed.