ರಾಷ್ಟ್ರೀಯ

ಮನ್ ಕಿ ಬಾತ್ ನಲ್ಲಿ ಮಾತನಾಡಲು ನಿಮ್ಮ ಆಲೋಚನೆ, ವಿಷಯಗಳನ್ನು ನೀಡಿ: ದೇಶವಾಸಿಗಳನ್ನು ಕೋರಿದ ಪ್ರಧಾನ ಮಂತ್ರಿ ಮೋದಿ

Pinterest LinkedIn Tumblr

ನವದೆಹಲಿ: ತಮ್ಮ ತಿಂಗಳ ಕೊನೆಯ ಭಾನುವಾರ ಪ್ರಸಾರವಾಗುವ ಮನ್ ಕಿ ಬಾತ್ ನಲ್ಲಿ ಮಾತನಾಡಲು ಆಲೋಚನೆ ಮತ್ತು ವಿಷಯಗಳನ್ನು ನೀಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶವಾಸಿಗಳನ್ನು ಕೋರಿದ್ದಾರೆ.

ಈ ತಿಂಗಳ ಮನ್ ಕಿ ಬಾತ್ ಜೂನ್ 28ಕ್ಕೆ ಪ್ರಸಾರವಾಗಲಿದೆ. ಅದಕ್ಕೆ ಇನ್ನು ಎರಡು ವಾರ ಬಾಕಿ ಇರುವಾಗಲೇ ನಿಮ್ಮ ಆಲೋಚನೆಗಳು, ವಿಷಯಗಳನ್ನು ನನ್ನ ಜೊತೆ ಹಂಚಿಕೊಳ್ಳಿ. ಇದರಿಂದ ನನಗೆ ಮತ್ತಷ್ಟು ಹೆಚ್ಚು ವಿಷಯಗಳ ಬಗ್ಗೆ ಮಾತನಾಡಲು ಕಮೆಂಟ್, ಫೋನ್ ಕಾಲ್ ಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ. ಕೋವಿಡ್-19 ಜೊತೆಗೆ ಸಾಕಷ್ಟು ಇನ್ನೂ ಹಲವು ವಿಷಯಗಳು ನಿಮ್ಮ ಬಳಿ ಇರಬಹುದು ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಜನರು ಸಲಹೆ, ಅಭಿಪ್ರಾಯಗಳನ್ನು ಯಾವ ರೀತಿ ಕೊಡಬಹುದು ಎಂದು ಸಂಖ್ಯೆಯೊಂದನ್ನು ನೀಡಿದ್ದು ಅದರಲ್ಲಿ ನಾಗರಿಕರು ರೆಕಾರ್ಡ್ ಮಾಡಿರುವ ಸಂದೇಶಗಳನ್ನು ಕಳುಹಿಸಬಹುದು.ನಮೊ ಆಪ್ ಅಥವಾ ಮೈಗವರ್ಮೆಂಟ್ ಮೂಲಕ ಸಹ ಕಳುಹಿಸಬಹುದು ಎಂದಿದ್ದಾರೆ.

ಕಳೆದ ತಿಂಗಳ ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಮುಖ್ಯವಾಗಿ ಕೊರೋನಾ ವೈರಸ್ ವಿರುದ್ಧ ಹೋರಾಟ, ಕೊರೋನಾ ವಾರಿಯರ್ಸ್ ಶ್ರಮ, ಕೊರೋನಾ ಸೋಂಕಿನಿಂದ ಗುಣಮುಖರಾದವರ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು.

Comments are closed.