ಮಂಗಳೂರು ಜೂನ್ 09 : ಶಾಂತಿಗೋಡು ಪರಿಸರದ ವ್ಯಾಪ್ತಿಯಲ್ಲಿ ಕಲ್ಲುಕೋಟೆ ಮತ್ತು ಪಣ0ಬು ಎಂಬಲ್ಲಿ ಸಂಶಯಾಸ್ಪದ ಡೆಂಗ್ಯೂ ಪ್ರದೇಶಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇವರೊಂದಿಗೆ ತಾಲೂಕು ನೋಡಲ್ ಅಧಿಕಾರಿ ಡಾ. ಬದರುದಿನ್ ಎಂ. ಎನ್, ತಾಲೂಕು ಆರೋಗ್ಯಾಧಿಕಾರಿ ಡಾ ಅಶೋಕ್ ಕುಮಾರ್ ರೈ, ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನಮಿತಾ ನಾಯಕ್ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ಸಿಬ್ಬಂದಿ ವರ್ಗದವರು ಮತ್ತು ಆಶಾ ಕಾರ್ಯಕರ್ತೆ ತಾಲೂಕು ಆಶಾ ಮೇಲ್ವಿಚಾರಕಿ ಸುಜಾತ ಇವರನ್ನೊಳಗೊಂಡ ತಂಡ ಭೇಟಿ ಕೂಡ ಪಾಲ್ಗೊಂಡಿದ್ದು, ಡೆಂಗ್ಯೂ ಖಾಯಿಲೆ ಬಗ್ಗೆ ಆರೋಗ್ಯ ಶಿಕ್ಷಣ ನೀಡುವುದರ ಜೊತೆಗೆ ಲಾರ್ವಾ ಪ್ರಾತ್ಯಕ್ಷಿಕೆಯನ್ನು ಡೆಂಗ್ಯೂ ಭಾದಿತ ಮನೆಗಳ ಸದಸ್ಯರಿಗೆ ತೋರಿಸಿ ಅರಿವು ಮೂಡಿಸಲಾಯಿತು.
Comments are closed.