ಕರಾವಳಿ

ಮುಂಬಯಿ : ಮಲಾಡ್ ಶೇಖರ್ ಪೂಜಾರಿ ಬ್ರಹ್ಮವರ ನಿಧನ – ಗಣ್ಯರಿಂದ ತೀವ್ರ ಸಂತಾಪ

Pinterest LinkedIn Tumblr

ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಲೇಜಿನ ಕ್ಯಾಂಟೀನ್ ಮಾಲಕ ಶೇಖರ್ ಪೂಜಾರಿ ಬ್ರಹ್ಮಾವರ (58) ಜೂನ್ 7ರಂದು ರಾತ್ರಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಶೇಖರ್ ಪೂಜಾರಿಯವರು ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಸ್ಥಾಪಕ ಸದಸ್ಯರು. ಬಿಲ್ಲವರ ಅಸೋಸಿಯೇಷನ್ ಮಲಾಡ್ ಸ್ಥಳೀಯ ಕಚೇರಿಯ ಉಪ ಕಾರ್ಯಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಹಲವಾರು ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳಿಗೆ ದೇಣಿಗೆ ನೀಡುತ್ತಾ, ಸಮಾಜಪರ ಸೇವೆ ಮಾಡುತ್ತಿದ್ದರು.

ಯಕ್ಷಗಾನದ ಅಭಿಮಾನಿ ಆಗಿದ್ದ ಇವರು, ವರಮಹಾಲಕ್ಷ್ಮಿ ಪೂಜಾ ಸಮಿತಿಯ ದಶಮಾನೋತ್ಸವ ಕಾರ್ಯಕ್ರಮಕ್ಕೆ ಸಮಿತಿಯ ಸದಸ್ಯರಿಂದಲೇ ಯಕ್ಷಗಾನ ಮಾಡುವಂತೆ ಪ್ರೇರೇಪಿಸಿದವರು. ಇತ್ತೀಚೆಗೆ ವೈವಾಹಿಕ ಜೀವನದ 25ನೇ ವರುಷದ ಸಂಭ್ರಮ ಆಚರಿಸಿಕೊಂಡ ಸಂದರ್ಭದಲ್ಲಿ ಮಲಾಡ್ ಪರಿಸರದ ಸುಮಾರು 70 ಕುಟುಂಬಗಳಿಗೆ ದಿನ ಸಾಮಾಗ್ರಿ ವಸ್ತುಗಳನ್ನು ನೀಡಿ ಮದುವೆಯ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡಿದ್ದರು.

ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಮಿತ್ರ ರನ್ನು ಅಗಲಿದ್ದಾರೆ.

ಗಣ್ಯರಿಂದ ತೀವ್ರ ಸಂತಾಪ :

ಅವರ ನಿಧನ ಮಲಾಡ್ ಪರಿಸರದ ತುಳುವರು ಕನ್ನಡಿಗರಿಗೆ ತುಂಬಲಾಗದ ನಷ್ಟವಾಗಿದ. ಇವರ ನಿಧನಕ್ಕೆ ಬಿಲ್ಲವರ ಅಸೋಷಿಯೇಷನ್ ಮಲಾಡ್ ಸ್ಥಳೀಯ ಕಚೇರಿಯ ಸರ್ವ ಸದಸ್ಯರು ಮತ್ತು ವರಮಹಾಲಕ್ಷ್ಮಿ ಪೂಜಾ ಸಮಿತಿಯ ಸರ್ವ ಸದಸ್ಯರು ದುಃಖ ಸಂತಾಪ ಸೂಚಿಸಿರುತ್ತಾರೆ.

Comments are closed.