ಮಂಗಳೂರು: ನಾಲ್ವರ ತಂಡವೊಂದು “ಜೈಶ್ರೀರಾಮ್” ಹೇಳಲು ಒತ್ತಾಯಿಸಿ ಬಾಲಕನನ್ನು ಹಿಡಿದು ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಮೆಲ್ಕಾರ್ ಠಾಣಾ ಪೊಲೀಸರು ಆರೋಪಿಗಳ ವಿರುದ್ಧ ಸುಮೊಟೋ ಕೇಸ್ ದಾಖಲಿಸಿಕೊಂಡಿದ್ದಾರೆ.
ಘಟನೆ ವಿವರ: ಅಂದಾಜು 17ರ ಹರೆಯದ ಬಾಲಕನನ್ನು ನಾಲ್ವರಿದ್ದ ತಂಡ ಹಿಡಿದು ಕೈಯಿಂದ ಹಲ್ಲೆ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಅದರಲ್ಲಿ ಗಡ್ಡ ಬಿಟ್ಟ ಯುವಕನೊಬ್ಬ ತನ್ನನ್ನು ತಾನು ದಿನೇಶ್ ಕನ್ಯಾನ ಎಂದು ಹೇಳುವುದಲ್ಲದೆ ಬಾಲಕನಲ್ಲಿ ಹಿಂದೂ ಯುವತಿಯರಿಗೆ ಮೆಸೇಜ್ ಮಾಡುತ್ತೀಯಾ ಎಂದು ಪ್ರಶ್ನಿಸುವುದು ದಾಖಲಾಗಿದೆ.
ಇದರ ತನಿಖೆ ನಡೆಸಿದ ಪೊಲೀಸರು ಘಟನೆ ಕಾಡುಮಠ ಶಾಲೆ ಮೈದಾನದಲ್ಲಿ ನಡೆದಿದ್ದನ್ನು ಪತ್ತೆಹಚ್ಚಿ ಆರೋಪಿಗಳಾದ ದಿನೇಶ್ ಕನ್ಯಾನ ಮತ್ತಿತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಟ್ವಾಳ ತಾಲೂಕು ಕುಡ್ತಮುಗೇರು ನಿವಾಸಿ ಬಾಲಕ ಹಲ್ಲೆಗೊಳಗಾಗಿದ್ದು ಘಟನೆಗೆ ಕಾರಣ ತಿಳಿದು ಬಂದಿಲ್ಲ.
ವಿಡಿಯೋದಲ್ಲಿ ಆರೋಪಿಗಳು ಬಾಲಕನಲ್ಲಿ ಜೈಶ್ರೀರಾಮ್ ಹೇಳಲು ಒತ್ತಾಯ ಮಾಡಿ ಹಲ್ಲೆ ಮಾಡುತ್ತಿರುವುದು ದಾಖಲಾಗಿದೆ. ಈ ಬಗ್ಗೆ ಸ್ಥಳೀಯ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Comments are closed.