ಕರಾವಳಿ

ಬ್ಲಡ್ ಹೆಲ್ಪ್ ಕೇರ್‌ನಿಂದ ವಲಸೆ ಕಾರ್ಮಿಕರಿಗೆ ಮದ್ಯಾಹ್ನದ ಊಟ ವಿತರಣೆ

Pinterest LinkedIn Tumblr

ಮಂಗಳೂರು : ಬ್ಲಡ್ ಹೆಲ್ಪ್ ಕೇರ್ (ರಿ) ಕರ್ನಾಟಕ ವತಿಯಿಂದ ಮಂಗಳೂರಿನ ಅತ್ತಾವರ ಮತ್ತು ರೊಸಾರಿಯೋ ಶಾಲೆಯಲ್ಲಿರುವ ವಲಸೆ ಕಾರ್ಮಿಕರಿಗೆ ಮದ್ಯಾಹ್ನದ ಊಟದ ವ್ಯವಸ್ಥೆಯನ್ನು ನೀಡಿದರು.

ಬ್ಲಡ್ ಹೆಲ್ಪ್ ಕೇರ್ (ರಿ) ಕರ್ನಾಟಕದ ಗೌರವ ಅಧ್ಯಕ್ಷರಾದ ನಝೀರ್ ಹುಸೈನ್ ಮಂಚಿಲ ಮಾತನಾಡಿ ಕೊರೋನಾದಿಂದ ತತ್ತರಿಸಿರುವ ಸನ್ನಿವೇಶದಲ್ಲಿ ವಲಸೆ ಕಾರ್ಮಿಕರಿಗೆ ಅನ್ನದಾನದ ಸೇವೆ ಮಾಡುವ ಅವಕಾಶ ನಮಗೆ ದೊರೆತಿದೆ.ಅದೂ ರಂಝಾನ್ ಸಂದರ್ಭದಲ್ಲಿ ಲಭಿಸಿರುವುದು ಸಂತೋಷದ ವಿಷಯ. ಸರ್ವಶಕ್ತನಾದ ದೇವರು ನಮ್ಮ ಈ ಕಾರ್ಯವನ್ನು ಸ್ವೀಕರಿಸಲಿ ಎಂದು ಹೇಳಿದರು.

ಬ್ಲಡ್ ಹೆಲ್ಪ್ ಕೇರ್ (ರಿ) ಕರ್ನಾಟಕದ ವ್ಯವಸ್ಥಾಪಕರಾದ ಶಂಶುದ್ದೀನ್ ಬಳ್ಕುಂಜೆ ಮಾತನಾಡಿ ವಲಸೆ ಕಾರ್ಮಿಕರಿಗೆ ಅನ್ನದಾನ ಸೇವೆ ಮಾಡುವಲ್ಲಿ ನಮ್ಮ ಪದಾಧಿಕಾರಿಗಳು ಅವಿರತವಾಗಿ ದುಡಿಯುತ್ತಿದ್ದಾರೆ ನಮಗೆ ಸಹಕರಿಸಿದ ಕಂದಾಯ ಇಲಾಖೆ ಮತ್ತು ಪೋಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇವೆ, ವಲಸೆ ಕಾರ್ಮಿಕರಿಗೆ ಯಾರಾದರೂ ಅನ್ನ ಸಂತರ್ಪಣೆ ಯ ಕೊಡುಗೆಯನ್ನು ಕೊಡಲು ಇಚ್ಚಿಸಿದರೆ ಕಂದಾಯ ಇಲಾಖಾ ಅಧಿಕಾರಿಯನ್ನು ಸಂಪರ್ಕಿಸಿ ಇಂತಹ ಪ್ರದೇಶಕ್ಕೆ ತಾವು ಕೊಡುವ ಮೂಲಕ ಸಮಾಜಕ್ಕೆ ಮಾದರಿಯಾಗೋಣ ಎಂದರು.

ಬ್ಲಡ್ ಹೆಲ್ಪ್ ಕೇರ್ (ರಿ) ಕರ್ನಾಟಕದ ಅಧ್ಯಕ್ಷ ಇಫ್ತಿಕಾರ್ ಆಲಿ,ಲೆಕ್ಕ ಪರಿಶೋಧಕ ಬಶೀರ್, ಕೋಶಾಧಿಕಾರಿ ಸಫ್ವಾನ್, ನಿರ್ದೇಶಕ ಅಲ್ ಮಾಝ್, ಸಂಚಾಲಕ ನವಾಝ್ ಉಳ್ಳಾಲ್, ಕ್ಯಾಂಪ್ ಅಡ್ವೈಸರ್ ಮುಸ್ತಫ , ಕ್ಯಾಂಪ್ ಸಂಚಾಲಕ ಸಿರಾಜ್ ಹಾಗೂ ರಹ್ಮಾನ್ ಮಂಚಿಲ, ಸಲ್ಮಾನ್ ಮಂಚಿಲ, ಸಹಾಯಕ ಕಂದಾಯ ಅಧಿಕಾರಿ ಪ್ರಸನ್ನ, ಮೈಕಲ್ ಲೋಬೋ, ಮೊದಲಾದವರು ಉಪಸ್ಥಿತರಿದ್ದರು.

Comments are closed.