ಕರಾವಳಿ

ವೆನ್ಲಾಕ್ ಆಸ್ಪತ್ರೆ : ವಿವಿಧ ಹುದ್ದೆಗಳಿಗೆ ನೇಮಕಾತಿ – ಎಪ್ರಿಲ್ 28ರಂದು ನೇರ ಸಂದರ್ಶನ

Pinterest LinkedIn Tumblr

ಮಂಗಳೂರು ಏಪ್ರಿಲ್ 24 : ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರಕರಣಗಳನ್ನು ಸಮರ್ಪಕವಾಗಿ ನಿಭಾಯಿಸಲು ವೈದ್ಯಕೀಯ ಸೇವೆಗಳನ್ನು ಒದಗಿಸಲು ಅಗತ್ಯವಿರುವ ಹುದ್ದೆಗಳನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇಲ್ಲಿಗೆ ತಾತ್ಕಾಲಿಕವಾಗಿ 6 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಏಪ್ರಿಲ್ 28 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಮಂಗಳೂರು ಇಲ್ಲಿ ನೇರ ಸಂದರ್ಶನಕ್ಕೆ ಕರೆಯಲಾಗಿದೆ.

ಹುದ್ದೆಯ ವಿವರ – 1) ವೈದ್ಯರು/ತಜ್ಞರು – 8 ಹುದ್ದೆಗಳು, ಮಾಸಿಕ ವೇತನ ರೂ. 60000, ವಿದ್ಯಾರ್ಹತೆ : MBBS/ ಯಾವುದೆ ತಜ್ಞತೆ (ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಆಗಿರಬೇಕು).

2) ಶುಶ್ರೂಷಕರು – 14, ವೇತನ ರೂ. 20000, ವಿದ್ಯಾರ್ಹತೆ : ಕರ್ನಾಟಕ ಸರ್ಕಾರದಿಂದ ನೋಂದಾಯಿತ ಸಂಸ್ಥೆಗಳಿಂದ GNM/ BSC Nursing ಪದವಿ ಪಡೆದಿರಬೇಕು.

3) ಪ್ರಯೋಗ ಶಾಲಾ ತಜ್ಞರು – 5, ವೇತನ ರೂ. 15000, ವಿದ್ಯಾರ್ಹತೆ : ಕರ್ನಾಟಕ ಅರೆವೈದ್ಯಕೀಯ ಮಂಡಳಿಯಿಂದ 2 ಅಥವಾ 3 ವರ್ಷಗಳ ಕಿ.ವೈ.ಪ್ರ.ಶಾ ತಂತ್ರಜ್ಞರ ತರಬೇತಿ (DLMT) ತೇರ್ಗಡೆ ಹೊಂದಿದ ಪ್ರಮಾಣ ಪತ್ರ ಪಡೆದಿರಬೇಕು.

4) ಗ್ರೂಪ್ ಡಿ – 9, ವೇತನ ರೂ. 12000, ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ ತೇರ್ಗಡೆಯಾಗಿರಬೇಕು.

ಸಲ್ಲಿಸಬೇಕಾದ ದಾಖಲೆಗಳು: ವಿದ್ಯಾರ್ಹತೆಯ ಸಂಬಂಧಿಸಿದ ಎಲ್ಲಾ ಅಂಕಪಟ್ಟಿಗಳ ಮೂಲ ಪ್ರತಿಗಳು.
ಹೆಚ್ಚಿನ ಮಾಹಿತಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ, ನೆಹರೂ ಮೈದಾನ ಎದುರು, ಮಂಗಳೂರು ಇಲ್ಲಿಂದ (ದೂರವಾಣಿ ಸಂಖ್ಯೆ :0824-2423672 ) ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

Comments are closed.